May 5, 2024

MALNAD TV

HEART OF COFFEE CITY

ಕಾಂಗ್ರೆಸ್ ಗೆ ಹಿರೇಮಗಳೂರು ಪುಟ್ಟಸ್ವಾಮಿ ರಾಜೀನಾಮೆ

1 min read

 ಚಿಕ್ಕಮಗಳೂರು ಕ್ಷೇತ್ರಕ್ಕೆ ಎಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ 6 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಎಲ್ಲರೂ ಸ್ಪರ್ಧೆಗೆ ಅರ್ಹರೇ ಆಗಿದ್ದರು. ಸಮರ್ಥರೂ ಆಗಿದ್ದರು. ಆದರೆ ಎಂದಿಗೂ ಕಾಂಗ್ರೆಸ್ ಬಾವುಟ ಹಿಡಿಯದ, ಪಕ್ಷದ ಸಂಘಟನೆ, ಚಳುವಳಿಯಲ್ಲಿ ಭಾಗವಹಿಸದ ತಮ್ಮಯ್ಯ ಅವರಿಗೆ ಪಕ್ಷದ ವರಿಷ್ಠಮಂಡಳಿ ಟಿಕೆಟ್ ನೀಡಿದೆ. ಇದು ಹೀಗೇ ಮುಂದುವರಿಯುತ್ತದೆ. ನಾವೆಲ್ಲರೂ ಅವಕಾಶ ವಂಚಿತರಾಗಬೇಕಾಗುತ್ತದೆ ಎನ್ನುವ ಭಾವನೆ ನನ್ನಲ್ಲಿ ಮೂಡಿದೆ ಎಂದರು.ಸುಮಾರು 50 ವರ್ಷದಿಂದ ಪಕ್ಷಕ್ಕಾಗಿ ದುಡಿಯುವವರನ್ನು ಕಾಂಗ್ರೆಸ್ ಪಕ್ಷ ಗುರುತಿಸುವುದಿಲ್ಲ. ಅವನ ಬಳಿ ಹಣ ಇದೆಯಾ ಎನ್ನುವುದಕ್ಕೆ ಮೊದಲ ಅಧ್ಯತೆ ನೀಡುತ್ತದೆ. ಇದನ್ನು ಖಂಡಿಸಿ ಹೊರಬರುವ ನಿರ್ಧಾರ ಮಾಡಿದ್ದೇನೆ. ಉದಾಹರಣೆಗೆ ಮೂಡಿಗೆರೆ ಕ್ಷೇತ್ರದಲ್ಲಿ ಮೋಟಮ್ಮ ಅವರು ಪಕ್ಷದ ಎರಡನೇ ಹಂತದ ನಾಯರಾರನ್ನೂ ಬೆಳೆಯಲು ಬಿಟ್ಟಿಲ್ಲ. ಹೀಗಿದ್ದರೂ ಅವರ ಮಗಳಿಗೆ ಟಿಕೆಟ್ ನೀಡಲಾಗಿದೆ. ದಲಿತವರ್ಗವನ್ನು ಬೆಳೆಸುವಲ್ಲಿ ಅವರು ಆಸಕ್ತಿ ವಹಿಸಲೇ ಇಲ್ಲ. ನಿಷ್ಠೆ, ಪ್ರಾಮಾಣಿಕವಾಗಿ ದುಡಿದವರಿಗೆ ಇಲ್ಲಿ ಮಾನ್ಯತೆ ಇಲ್ಲ ಎಂದರು.

ನಾವೂ ಸಹ ಮೂಡಿಗೆರೆ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದೆವು. ಆದರೆ ಹಣ ಇದ್ದಿದ್ದರೆ ನೀವು ಸಹ ಎಂಎಲ್‌ಎ ಆಗಬಹುದಿತ್ತು ಎಂದು ಹೇಳುತ್ತಾರೆ. ಕಾಂಗ್ರೆಸ್ ದಕ್ಷರು, ಪ್ರಾಮಾಣಿಕರಿಗಿಂತ ಹಣವಂತರಿಗೆ ಆಧ್ಯತೆ ಕೊಡುತ್ತದೆ. ಇನ್ನುಳಿದಂತೆ ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಫ್ಲೆಕ್ಸ್, ಬಂಟಿ0ಗ್ಸ್ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ನಾವು ಹಣವಂತರಲ್ಲ ಹಾಗೂ ನಮ್ಮನ್ನು ಕಾಂಗ್ರೆಸ್ ಜೀತದಾಳುಗಳ ರೀತಿ ದುಡಿಸಿಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನಿ0ದ ಹೊರಬರಲು ತೀರ್ಮಾನಿಸಿದ್ದೇವೆ. ಸ್ವಲ್ಪ ಸಮಯದ ನಂತರ ಆಪ್ತರು, ಹಿತೈಷಿಗಳ ಜೊತೆ ಚರ್ಚಿಸಿ ನಮಗೆ ಬೆಳೆಯಲು ಎಲ್ಲಿ ಅವಕಾಶ ಇದೆ ಎನ್ನುವುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ರಾಜಕೀಯ ಕ್ಷೇತ್ರದಲ್ಲೇ ಉಳಿಯುತ್ತೇನೆ. ಎಲ್ಲಿ ಸ್ವಾಭಿಮಾನ, ಗೌರವಕ್ಕೆ ಎಲ್ಲಿ ಧಕ್ಕೆ ಬರುವುದಿಲ್ಲವೋ ಅಲ್ಲಿಗೆ ಹೋಗುತ್ತೇನೆ ಎಂದರು.
ಕಳೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ವಿಧಾನಸಭೆ ಅಭ್ಯರ್ಥಿ ನನ್ನ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡಿದ್ದರು. ಆತ ಪರ ಊರಿನಿಂದ ಬಂದಿದ್ದಾನೆ. ಸತ್ತರೆ ಹೆಣ ಅಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದೆಲ್ಲಾ ಮಾತನಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಹಣಕ್ಕೆ ಮಣೆಹಾಕಿಲ್ಲ 

ಬಿಜೆಪಿಯವರು ಅತ್ಯಂತ ಸವಾಲನ್ನು ಎದುರಿಸಿ ಸುಮಾರು ಶೇ.60 ರಿಂದ 70 ರಷ್ಟು ಟಿಕೆಟ್‌ಗಳನ್ನು ಯುವ ಪ್ರತಿಭೆಗಳಿಗೆ ಕೊಟ್ಟಿದ್ದಾರೆ. ಅದೂ ಸಹ ಹಣವಿಲ್ಲದ ಅಭ್ಯರ್ಥಿಗಳಿಗೆ ಕೊಟ್ಟಿದ್ದಾರೆ. ಉದಾಹರಣಗೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಇದ್ದಾರೆ. ಅವರ ಬಳಿಯೂ ಹಣವಿಲ್ಲ ಆದರೂ ಅವರ ಪಕ್ಷ ನಿಷ್ಠೆ ಗುರುತಿಸಿ ಅವಕಾಶಕೊಟ್ಟಿದ್ದಾರೆ. ಇದು ಎಲ್ಲಾ ಪಕ್ಷದಲ್ಲೂ ಬರಬೇಕು. ಕೇವಲ ನಾವು ದಲಿತಪರ, ಮುಸ್ಲಿಮರು, ಹಿಂದುಳಿದವರು, ಕ್ರಿಶ್ಚಿಯನ್ನರ ಪರ ಎಂದು ಪುಂಗಿ ಊದಿದರೆ ಸಾಕಾಗುವುದಿಲ್ಲ. ಈ ಕೋಮುಗಳಿಗೆ ಅವಕಾಶ ಕೊಟ್ಟು ಕಳಕಳಿ ತೋರಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತದೆ .

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!