May 5, 2024

MALNAD TV

HEART OF COFFEE CITY

ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯ ಪ್ರವೀಣ್ ಬಿಜೆಪಿ ಸೇರ್ಪಡೆ

1 min read

ಚಿಕ್ಕಮಗಳೂರು-ಕಳೆದಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರ ಗೆಲುವಿಗೆ ತೊಡಕಾಗಿದ್ದ ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯ ಪ್ರವೀಣ್ ಅವರು  ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಈ ಮೂಲಕ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಬ್ಬರ ನಡುವೆ ನಡೆಸಿದ್ದ ಸಂಧಾನಕ್ಕೆ ಫಲ ಸಿಕ್ಕಂತಾಗಿದೆ. ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚನ್ಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹಾಗೂ ಈ ಬಾರಿಯೂ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪ್ರವೀಣ್ ಬಿಜೆಪಿ ಸೇರ್ಪಡೆಗೊಂಡರು.ಈ ವೇಳೆ ಮಾತನಾಡಿದ ಖಾಂಡ್ಯ ಪ್ರವೀಣ್, ಹಲವು ವರ್ಷಗಳ ಕಾಲ ನಾವೂ ಜೀವರಾಜ್ ಎಲ್ಲರೂ ಒಂದೇ ವಿಚಾರಕ್ಕೆ ಕೆಲಸ ಮಾಡುತ್ತಿದ್ದೆವು. ಆದರೆ ಒಂದು ಸಣ್ಣ ಬಿರುಕು ಉಂಟಾದಾಗ ಏನಾಗಬಹುದು ಅದು ಘಟಿಸಿತ್ತು. ಅದನ್ನು ಸರಿಮಾಡುವ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಅದಕ್ಕೆ ಇಂದು ಪೂರ್ಣಪ್ರಮಾಣದ ಸ್ವರೂಪ ಇಲ್ಲಿ ಸಿಕ್ಕಿದೆ ಎಂದರು.
ನಮಗೆ ಗೌರವಪೂರ್ವಕವಾದ ಸ್ವಾಗತವನ್ನು ಕೊಟ್ಟಿದ್ದೀರಿ, ನಮ್ಮ ಮೇಲೆ ವಿಶ್ವಾಸವನ್ನೂ ಇಟ್ಟಿದ್ದೀರಿ. ಅದನ್ನು ನಾವೂ ನಮ್ಮ ಕಾರ್ಯಕರ್ತರ ತಂಡ ಉಳಿಸಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಶೃಂಗೇರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮಾತನಾಡಿ, ಇದೊಂದು ಸಂತೋಷದ ಕ್ಷಣ. ಇಂದು ಸೇರ್ಪಡೆಗೊಂಡಿರುವವರು ಯಾರೂ ಬಿಜೆಪಿಗೆ ಹೊಸಬರಲ್ಲ. ನಮ್ಮ ವಿಚಾರವನ್ನು ಅವರಿಗೆ ಹೇಳಿಕೊಡಬೇಕಾದಂತವರೂ ಅಲ್ಲ. ನಮ್ಮ ಅವರ ವಿಚಾರಗಳೆರಡೂ ಒಂದೇ ಆದರೆ ಬಹಳ ಪ್ರೀತಿ ಇದ್ದಾಗ ಸ್ವಲ್ಪ ಜಗಳ ಇರುತ್ತದೆ. ಅದು ಅವಶ್ಯಕತೆಗಿಂತ ಜಾಸ್ತಿಗಿತ್ತಷ್ಟೇ, ಜೀವನದಲ್ಲಿ ಕೆಲವೊಂದು ಸಾರಿ ಹೀಗೆಲ್ಲಾ ಆಗುತ್ತದೆ. ಅದನ್ನು ಅವರೂ ಮರೆತು, ನಾವೂ ಮರೆತು ಕ್ಷೇತ್ರ, ರಾಜ್ಯದ ಒಳಿತಿಗೆ ನರೇಂದ್ರ ಮೋದಿ ಅವರ ಕೈ ಬಲಪಡಿಸುವಂತಹ ನಿಟ್ಟಿನಲ್ಲಿ ನಾವೆಲ್ಲಾ ಪ್ರೀತಿಯಿಂದ ಒಟ್ಟಾಗಿದ್ದೇವೆ.

ಅವರಿಗೆ ಕ್ಷೇತ್ರದ ಪರಿಚಯ ಮತ್ತು ಜನರ ಪರಿಚಯ ಇರುವುದರಿಂದ ಉಳಿದ 14 ದಿನಗಳಲ್ಲಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿಯ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದರು.ನಾವು ಪ್ರವೀಣ್ ಖಾಂಡ್ಯ ಅವರೆಲ್ಲ ಒಟ್ಟಾಗಿದ್ದಾಗ ಅತೀ ಹೆಚ್ಚು ಮತಗಳಿಂದ ಗೆದ್ದಿದ್ದೆವು. ಅದೇ ರೀತಿಯ 2004 ರ ಗೆಲುವು ಈ ಬಾರಿಯೂ ಆಗಲಿದೆ ಎನ್ನುವ ಭರವಸೆ ಇದೆ. ಇವರೆಲ್ಲರ ಸೇರ್ಪಡೆ ಯುವ ಶಕ್ತಿಗೆ ಮತ್ತೊಂದು ಹುರುಪು ತಂದಿದೆ ಎಂದರು.ಕಳೆದ 5 ವರ್ಷದ ಹಿಂದೆ ಲಕ್ಕಿ ಡಿಪ್‌ನಲ್ಲಿ ನಮಗೊಬ್ಬರು ಶಾಸಕರು ಸಿಕ್ಕಿದರು. ಕೊನೇ ವರೆಗೆ ಅವರು ಇನ್ನೊಂದು ಲಕ್ಕಿಡಿಪ್ ಹೊಡಿಬಹುದು ಎಂದು ಕಾಯುತ್ತಿದ್ದರು. ಅದಕ್ಕೆ ನಿಷೇಧ ಹೇರುವ ಕೆಲಸವನ್ನು ಸಂಘದ ಹಿರಿಯರು ಮಾಡಿದ್ದಾರೆ. ಅದರ ಫಲಿತಾಂಶವನ್ನು ಮೇ.13 ರಂದು ನಿಮ್ಮೆಲ್ಲರ ಮುಂದಿಡುತ್ತೇವೆ. ಜೀವರಾಜ್ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ.ಖಾಂಡ್ಯ ಪ್ರವೀಣ್
ಖಾಂಡ್ಯ ಪ್ರವೀಣ್ ಬಿಜೆಪಿ ಸೇರ್ಪಡೆಯಿಂದ ಶೃಂಗೇರಿ ಕ್ಷೇತ್ರದಲ್ಲಿ ಹಲವರ ಬಾಯಿ ಮುಚ್ಚಿಸಿದೆ. ಇನ್ನುಮುಂದೆ ಕ್ಷೇತ್ರದಲ್ಲಿ ಬೇರೆ ರೀತಿಯ ಚರ್ಚೆ ಆರಂಭವಾಗುತ್ತದೆ. ನಾವು ಗೆಲ್ಲುತ್ತೇವೆ ಎನ್ನುತ್ತಿದ್ದವರು ಬಿಜೆಪಿ ಗೆಲ್ಲುತ್ತದೆ ಎನ್ನಲಾರಂಭಿಸುತ್ತಾರೆ. ಪ್ರವೀಣ್ ಸೇರ್ಪಡೆ ನಮ್ಮ ಪಕ್ಷಕ್ಕೆ ಆನೆ ಬಲ ತಂದಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಧೂಳೀಪಟವಾಗಲಿದ್ದಾರೆ.ಎಚ್.ಸಿ.ಕಲ್ಮರುಡಪ್ಪ ಜಿಲ್ಲಾ ಬಿಜೆಪಿ ಅಧ್ಯಕ್ಷರು ಈ ಸಂದರ್ಭದಲ್ಲಿ ತುಡಕೂರು ಮಂಜು, ಕೆ.ವಿ.ಮಹೇಶ್ ಕುಮಾರ್ ಕಟ್ಟಿನಮನೆ, ಜೈಶೀಲಾ, ರಂಜಿತ್, ಸಂದೇಶ್, ದಿಲೀಪ್, ಪ್ರಕಾಶ್, ರಘುಕುಮಾರ್, ಸದಾನಂದ ಇತರರು ಬಿಜೆಪಿ ಸೇರ್ಪಡೆಗೊಂಡರು. ಸಂತೋಷ್ ಕೊಟ್ಯಾನ್, ನಾರಾಯಣಗೌಡ, ದೇವರಾಜ್ ಶೆಟ್ಟಿ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!