May 5, 2024

MALNAD TV

HEART OF COFFEE CITY

ಅಧಿಕಾರವನ್ನು ಎಂದಿಗೂ ದುರುಪಯೋಗ ಮಾಡಿಕೊಂಡಿಲ್ಲ.- ಸಿ.ಟಿ.ರವಿ

1 min read

ಚಿಕ್ಕಮಗಳೂರು-ಜನ ಕೊಟ್ಟ ಅಧಿಕಾರವನ್ನು ಎಂದಿಗೂ ದುರುಪಯೋಗ ಮಾಡಿಕೊಂಡಿಲ್ಲ. ಚಿಕ್ಕಮಗಳೂರಿನ ಅಭಿವೃದ್ಧಿ, ಜನ ಹಿತಕ್ಕೆ ಬಳಸಿಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಟಿ.ರವಿ ಹೇಳಿದರು.
ಅವರು  ನಗರದ ಗವನಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಜನರನ್ನುದ್ದೇಶಿಸಿ ಮಾತನಾಡಿದರು. ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೂಡೂರು-ಚಿಕ್ಕಮಗಳೂರು ಹೆದ್ದಾರಿ, ಚಿಕ್ಕಮಗಳೂರು-ಬೇಲೂರು-ಹಾಸನ ರೈಲು ಮಾರ್ಗಕ್ಕೆ ಮಂಜೂರಾತಿ, ಬಜೆಟ್‌ನಲ್ಲಿ ಹೊಸ ವಿವಿ ಹಾಗೂ ಮೆಘಾ ಟೆಕ್ಸ್ಟೈಲ್ ಪಾರ್ಕ್ ಘೋಷಣೆ ಎಲ್ಲದಕ್ಕೂ ಜನ ಕೊಟ್ಟ ಮತವೇ ಕಾರಣವಾಗಿದೆ. ಬಿಜೆಪಿಯಬ್ಬು ಸತತವಾಗಿ ಗೆಲ್ಲಿಸಿದ ಪರಿಣಾಮ ಈ ರಾಜಕೀಯ ಶಕ್ತಿ ನಿರ್ಮಾಣವಾಗಿದೆ ಎಂದರು.
ಅರಸು ಸಮುದಾಯ ಭವನಕ್ಕೆ 20 ಲಕ್ಷ ರೂ. ವಿಶೇಷ ಅನುದಾನವಲ್ಲದೆ, ನಗರಸಭೆಯಿಂದ 15 ಲಕ್ಷರೂ. ನೀಡಲಾಗಿದೆ. ನ್ಯಾಯದ ತಕ್ಕಡಿ ಬಿಜೆಪಿ ಪರ ವಾಲಿದರೆ, ರವಿ ಉತ್ತಮವಾಗಿ ಕೆಲಸ ಮಾಡಿದ್ದಾನೆ, ನಡವಳಿಕೆ ಉತ್ತಮವಾಗಿದೆ .ನಾನು ಮನೆ ಮಗ ಇದ್ದಂತೆ ಎನ್ನುವ ಭಾವನೆ ಇಟ್ಟುಕೊಂಡು ಬಂದಿದ್ದೇನೆ. ನಿಮಗೂ ರವಿ ನಮ್ಮ ಅಣ್ಣ ತಮ್ಮಂದಿರಲ್ಲಿ ಒಬ್ಬರಂತೆ ಎನ್ನಿಸಿದರೆ ಈ ಬಾರಿಯೂ ಆಶೀರ್ವಾದ ಮಾಡಿ. ರಾಜ್ಯ, ರಾಷ್ಟçದ ಜವಾಬ್ದಾರಿ ಇರುವುದರಿಂದ ನೀವೇ ಅಭ್ಯರ್ಥಿಯಾಗಿ ಮನೆ ಮನೆಗೆ ಹೋಗಿ ಮನವೊಲಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.

ನಾನು ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಜಕಾರಣ ಮಾಡಿದ್ದೇನೆ. ರಾಜಕೀಯ ಸಂಸ್ಕೃತಿಯನ್ನು ಬದಲಿಸಿದ್ದೇನೆ ಎಂದರು.
ಸಖರಾಯಪಟ್ಟಣದ ಅವಧೂತರು ಮೆರಿಬೇಡ, ಮುರಿಬೇಡ, ಮರಿಬೇಡ ಎನ್ನುವ ಮೂರು ಮಾತುಗಳನ್ನು ನನಗೆ ಹೇಳಿದ್ದರು. ನಾನು ಹಾಗೇ ನಡೆದುಕೊಂಡಿದ್ದೇನೆ. ಜನರನ್ನು ಮರೆತು ಎಂದಿಗೂ ರಾಜಕಾರಣ ಮಾಡಿಲ್ಲ. ಯಾರು ಏನು ಬೇಕಾದರೂ ಹೇಳಬಹುದು ಸಿ.ಟಿ.ರವಿಗೆ ಅಹಂಕಾರ ಬಂದಿದೆ ಎಂದು ಹೇಳಲಿಕ್ಕೆ ಅವಕಾಶ ಕೊಟ್ಟಿಲ್ಲ. ಯಾರೇ ಬರಲಿ, ಬಡವ, ಶ್ರೀಮಂತ, ಯಾವುದೇ ಜಾತಿಯವನಾಗಲಿ ಪ್ರೀತಿ ವಿಶ್ವಾಸದಿಂದ ಕಂಡು ಕೂರಿಸಿ ನಮ್ಮ ಕೈಲಾದ ಕೆಲಸವನ್ನು ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಸಿಡಿಎ ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಚುನಾವಣಾ ನಿರ್ವಹಣಾ ಸಮಿತಿ ಸದಸ್ಯ ಗವನಹಳ್ಳಿ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ತಿರುಮಲ ರಾಜ್ ಅರಸ್, ಬೂತ್ ಅಧ್ಯಕ್ಷ ಉಮೇಶ್ ರಾಜ್ ಅರಸ್, ಮುಖಂಡರಾದ ಮಂಜುನಾಥ್, ಪುರುಷೋತ್ತಮ್, ಕೌಶಿಕ್, ಲೋಕೇಶ್, ಜಗಧೀಶ್, ಕೇಶವ ರಾವ್, ಶ್ರೀಧರ್ ಉರಾಳ್, ಪಟ್ಟಾಭಿ ರಾಜ್ ಅರಸ್, ಹೋನ್ನರಾಜ್, ರಾಮಣ್ಣ, ಬಸವರಾಜ್. ವೀಣಾ ರತ್ನಾಕರ್ ಶೆಟ್ಟಿ, ಪ್ರೇಮಕುಮಾರಿ, ಪುಷ್ವರಾಜೇಂದ್ರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!