May 17, 2024

MALNAD TV

HEART OF COFFEE CITY

ಕಾಫಿನಾಡ ಕಾಲೇಜಲ್ಲಿ ಮತ್ತೆ ಹಿಜಬ್ ವಿವಾದ, ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ…!

1 min read

 

: ಕಾಫಿನಾಡ ಪ್ರತಿಷ್ಠಿತ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಹಿಜಬ್ ವಿವಾದ ಮತ್ತೆ ಮುನ್ನೆಲೆ ಬಂದಿದ್ದು ಕೂಡಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ವಿವಾದಕ್ಕೆ ತೆರೆ ಎಳೆದಿದೆ. ನಿನ್ನೆ ಪ್ರಥಮ ವರ್ಷದ ವಿದ್ಯಾರ್ಥಿನಿ ಹಿಜಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ತರಗತಿಗೂ ಹಾಜರಾಗಿದ್ದರು. ಕಾಲೇಜಿನಲ್ಲಿ ಬುರ್ಖಾ, ಹಿಜಬ್ ಧರಿಸಲು ಅವಕಾಶವಿಲ್ಲ ಎಂಬ ಕೋರ್ಟ್ ಸೂಚನೆ ಇದ್ದರೂ ಹಿಜಬ್ ಧರಿಸಿ ವಿದ್ಯಾರ್ಥಿನಿ ಕಾಲೇಜಿಗೆ ಬಂದ ಹಿನ್ನೆಲೆ ಆ ವಿಡಿಯೋ ವೈರಲ್ ಆಗಿತ್ತು. ಕಾಲೇಜಿನಲ್ಲಿ ಕೆಲಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸೋಮವಾರದಿಂದ ಶನಿವಾರದವರೆಗೆ ವಾರದ ಆರು ದಿನವೂ ಕಾಲೇಜಿನ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ ಎಂದು ಆದೇಶ ಮಾಡಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಐಡಿ ಕಾರ್ಡನ್ನು ಧರಿಸಿಯೇ ಕಾಲೇಜಿಗೆ ಬರಬೇಕೆಂದು ಸೂಚನೆ ನೀಡಿದೆ. ಸಮವಸ್ತ್ರ ಹಾಗೂ ಐಡಿ ಕಾರ್ಡ್ ಧರಿಸದೆ ಬರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣಕ್ಕೆ ಪ್ರವೇಶವಿಲ್ಲ. ಹಾಗಾಗಿ ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ವಾರದ ಆರು ದಿನವೂ ಸಮವಸ್ತ್ರ ಹಾಗೂ ಐಡಿ ಕಾರ್ಡ್ ಧರಿಸಿಯೇ ಕಾಲೇಜಿಗೆ ಬರಬೇಕೆಂದು ಕಟ್ಟುನಿಟ್ಟಿನ ಆದೇಶವನ್ನ ಕಾಲೇಜು ಆಡಳಿತ ಮಂಡಳಿ ಮಾಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!