May 19, 2024

MALNAD TV

HEART OF COFFEE CITY

ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯಬ್ಬರ, ಮೈದುಂಬಿ ಹರಿದ ಕಲ್ಲತ್ತಿಗರಿ, ಹೆಬ್ಬೆ ಜಲಪಾತ

1 min read

 

ಚಿಕ್ಕಮಗಳೂರು. ಜಿಲ್ಲೆಯ ಪಶ್ಚಿಮಘಟ್ಟಗಳ ಸಾಲು ಹಾಗೂ ಮಲೆನಾಡಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿ-ಹಳ್ಳ-ಕೊಳ್ಳ-ಜಲಪಾತಗಳಿಗೆ ಜೀವಕಳೆ ಬಂದಿದೆ. ನೀರಿನ ವೇಗ ಹೆಚ್ಚಾದಂತೆಲ್ಲಾ ಜಲಪಾತಗಳ ಸೌಂದರ್ಯವೂ ಹೆಚ್ಚಾಗುತ್ತಿದೆ. ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಳೆದೊಂದು ವಾರದಿಂದ ಹಗಲಿರುಳೆನ್ನದೆ ಸುರಿಯುತ್ತಿರುವ ಭಾರೀ ಮಳೆಯಿಂದ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಹಾಗೂ ಹೆಬ್ಬೆ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ನೋಡಿದವರ ಕಣ್ಣು ಕೋರೈಸುವಂತಿದೆ. ಕಳೆದೊಂದು ವಾರದಿಂದ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಲ್ಲತ್ತಿಗರಿ ಹಾಗೂ ಹೆಬ್ಬೆ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ಹೆಬ್ಬೆ ಜಲಪಾತ ನೋಡಿಗರಿಗೆ ಮೇಲಿಂದ ಬೀಳುತ್ತಿರುವುದೋ ನೀರೋ ಅಥವ ಹಾಲೋ ಎಂಬ ಪ್ರಶ್ನೆ ಮೂಡಿದ್ದು, ನೋಡುಗ ಪ್ರವಾಸಿ ಕಣ್ಣುಗಳಿಗೆ ಇದು ಹಾಲಿನ ರಾಶಿ ಎಂದು ಭಾಸವಾಗುತ್ತಿದೆ. ಮತ್ತಲವು ಪ್ರವಾಸಿಗರು ಇದು ಭೂಮಿತಾಯಿಗೆ ವರುಣದೇವ ಮಾಡುತ್ತಿರೋ ಹಾಲಿನ ಅಭಿಷೇಕ ಎಂದು ವಿಶ್ಲೇಷಿಸಿದ್ದಾರೆ. ನೂರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಬಳಿ ಹತ್ತಾರು ಅಡಿ ದೂರದಲ್ಲಿ ನಿಂತರೂ ನೀರಿನ ಹನಿ ಚಿಮ್ಮುತ್ತಿದೆ.

 

 

 

 

ಇನ್ನು ಇದೇ ಹೆಬ್ಬೆ ಜಲಪಾತದಿಂದ ಸುಮಾರು 10 ಕಿ.ಮೀ. ಅಂತರದಲ್ಲಿರುವ ಕಲ್ಲತ್ತಿಗರಿ ಜಲಪಾತ ಕೂಡ ಧುಮ್ಮಿಕ್ಕಿ ಹರಿಯುತ್ತಿದ್ದ ನೋಡಿಗರಿಗೆ ಮುದ ನೀಡುತ್ತಿದೆ. ಕಿ.ಮೀ.ಗಟ್ಟಲೇ ಗುಡ್ಡದಿಂದ ಹರಿದು ಬರುವ ನೀರು ಕೆಳಗಡೆ ಬರುತ್ತಿದ್ದಂತೆ ಜಲಪಾತವಾಗಿ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ. ಹೆಬ್ಬೆ ಹಾಗೂ ಕಲ್ಲತ್ತಿಗರಿಯ ಸೌಂದರ್ಯ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮಳೆ ಮಧ್ಯೆಯೂ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನ ಸವಿಯುತ್ತಿದ್ದಾರೆ. ಕಲ್ಲತ್ತಿಗರಿ ಜಲಪಾತದ ವಿಶೇಷ ಅಂದ್ರೆ ಈ ಜಲಪಾತ ನೀರಿಲ್ಲದೆ ಬಿತ್ತಿದ ಉದಾಹರಣೆಯೇ ಇಲ್ಲ. ನೂರಾರು ವರ್ಷಗಳಿಂದ ಹರಿಯುತ್ತಿರುವ ನೀರು ಇಂದಿಗೂ ನಿಂತಿಲ್ಲ. ಎಂತಹಾ ಬರಗಾಲ ಬಂದರೂ ಇಲ್ಲಿನ ನೀರು ಹರಿಯೋದು ನಿಲ್ಲುವುದಿಲ್ಲ. ನೀರಿನ ಪ್ರಮಾಣ ಕಡಿಮೆಯಾಗಬಹುದು. ಆದರೆ, ಸಂಪೂರ್ಣ ಬತ್ತಿದ ಉದಾಹರಣೆಯೇ ಇಲ್ಲ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!