May 5, 2024

MALNAD TV

HEART OF COFFEE CITY

ವಕೀಲರ ಮೇಲೆ‌ ಪೊಲೀಸರ ಹಲ್ಲೆ ಪ್ರಕರಣದಲ್ಲಿ ಭಾರೀ ಹೈ ಡ್ರಾಮ.. ಜೋರಾದ ಪೋಸ್ಟರ್ ಅಭಿಯಾನ..!

1 min read

ಚಿಕ್ಕಮಗಳೂರು: ವಕೀಲ ಪ್ರೀತಂ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ಕುರಿತಂತೆ ವಕೀಲರ ಹಾಗೂ ಪೊಲೀಸ್ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅಭಿಯಾನ ಜೋರಾಗಿದೆ.
ಹೌದು ಕರ್ನಾಟಕ ರಾಜ್ಯ ಪೊಲೀಸ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ನಮ್ಮ ಬೆಂಬಲ ರಾಜ್ಯ ಪೊಲೀಸ್ ಇಲಾಖೆಗೆ ‘I SUPPORT KARNATAKA STATE POLICE’ ಎಂದು ಬರೆದುಕೊಂಡರೆ ಇನ್ನೊಂದೆಡೆ ನಮ್ಮ ಬೆಂಬಲ ಚಿಕ್ಕಮಗಳೂರು ವಕೀಲರ ಸಂಘಕ್ಕೆ, ಪೋಲೀಸರ ದೌರ್ಜನ್ಯಕ್ಕೆ ನಮ್ಮ ದಿಕ್ಕಾರ ‘SUPPORT ADVOCATES’ ಎಂದು ಬರೆದುಕೊಂಡು ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಡಿಸೆಂಬರ್ 1 ರಂದು ಹೆಲ್ಮೆಟ್ ಹಾಕದ ವಕೀಲ ಪ್ರೀತಂ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ಭಾರೀ ಹೈ ಡ್ರಾಮ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಬೇರೆ ಬೇರೆ ರೂಪವನ್ನು ಪಡೆದುಕೊಳ್ಳುತ್ತಿದೆ. ವಕೀಲರ ಅನಿರ್ಧಿಷ್ಟಾವಧಿ ಪ್ರತಿಭಟನೆಯಿಂದ ಪಿಎಸ್ಐ ಸೇರಿದಂತೆ 6 ಜನರ ಎಸ್ಪಿ ವಿಕ್ರಮ್ ಅಮಟೆಯವರು ಅಮಾನತ್ತು ಮಾಡಿದ್ದರು. ಈ ನಡುವೆ ಹೈಕೋರ್ಟ್ ಘಟನೆ ಬಗ್ಗೆ ಸೊಮೋಟೋ ಕೇಸ್ ದಾಖಲಿಸಿಕೊಂಡು ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆದು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.

ಈ ನಡುವೆ ಪೊಲೀಸರ ವಿರುದ್ದ ಎಫ್.ಐ.ಆರ್ ಕೂಡ ದಾಖಲಾಗಿತ್ತು ನಂತರ ಓರ್ವ ಎಸೈ, ಓರ್ವ ಎಎಸೈ, ಓರ್ವ ಹೆಚ್ ಸಿ, ಮೂವರ ಪೇದೆಗಳ ಆಮಾನತ್ತಾಗಿತ್ತು, ಈ ಬೆಳವಣಿಗೆಗಳ ನಡುವೆ ಈಗ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರ ಅಳಲು ತೋಡಿಕೊಂಡಿದ್ದಾರೆ, ಜನರಿಗೆ ರಕ್ಷಣೆ ನೀಡೋ ಪೊಲೀಸರಿಗೆ ರಕ್ಷಣೆ ಇಲ್ಲ ಎಂದ ಕುಟುಂಬಸ್ಥರು,ಅವರನ್ನ ನಂಬಿ ಹಲವು ಜೀವಗಳು ಬದುಕ್ತೀವೆ ಅವರಿಗೆ ಹೆಚ್ಚುಕಮ್ಮಿಯಾದರೆ ಹೊಣೆ ಯಾರು, ನಮ್ಮ ಕಥೆ ಏನು ನಮ್ಮನ್ನ ಲಾಯರ್ ಗಳು ಬಂದು ನೋಡಿಕೊಳ್ತಾರಾ ಎಂದು ನೋವು ತೋಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಕೊನೆಗೂ ಪೊಲೀಸರ ತಾಳ್ಮೆಯ ಕಟ್ಟೆಯೊಡೆದಿದೆ ವಕೀಲರ ವಿರುದ್ಧ ಖಾಕಿಗಳು ನಗರದ ಠಾಣೆ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲಸ ನಿಲ್ಲಿಸಿದ ಚಿಕ್ಕಮಗಳೂರು ತಾಲೂಕಿನ 6 ಠಾಣೆ ಪೊಲೀಸರು ನಾವ್ಯಾರು ಕೆಲಸ ಮಾಡಲ್ಲ ಅಂತ ಠಾಣೆ ಬಳಿ ಜಮಾಯಿಸಿ ಧರಣೆಗೆ ಮುಂದಾಗಿದ್ದಾರೆ, ಕರ್ತವ್ಯ ಬಿಟ್ಟು 100ಕ್ಕೂ ಹೆಚ್ಚು ಪೊಲೀಸರು ನಗರದ ಠಾಣೆ ಬಳಿ ಚಳುವಳಿ ಆರಂಭಿಸಿದ್ದಾರೆ, ಕುಟುಂಬಗಳ ಜೊತೆ ಪೊಲೀಸರು ಠಾಣೆ ಮುಂದೆ ಜಮಾವಣೆಗೊಂಡಿದ್ದಾರೆ, ಅಮಾನತಾಗಿರುವ 6 ಜನ ಪೊಲೀಸರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಬಾರದು ಎಂದು ಸ್ಥಳಕ್ಕೆ ಬಂದ ಎಸ್ಪಿ ಮುಂದೆ ಅಳಲು ತೋಡಿಕೊಂಡಿದ್ದಾರೆ. ಪೊಲೀಸರಿಗೆ ರಕ್ಷಣೆ ಇಲ್ಲ ಅಂತ ಪೊಲೀಸ್ ಹಾಗೂ ಕುಟುಂಬಗಳು ಇದೇ ವೇಳೆ ಆರೋಪಿಸಿದರು, ಅಲ್ಲದೇ ವಾಟ್ಸಾಪ್ ಗ್ರೂಪ್ ಮೂಲಕ ಜಿಲ್ಲೆಯ 800 ಪೊಲೀಸರು ಒಂದಾಗಿ ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರೊಂದಿಗೆ ದಿನಕ್ಕೊಂದು ರೂಪ ಪಡೆದುಕೊಳ್ತಿರೋ ವಕೀಲರು ಪೊಲೀಸರ ಗಲಾಟೆ ಬೇರೆಯದ್ದೆ ಮಜಲು ಪಡೆದುಕೊಳ್ಳುವ ರೀತಿ ಕಾಣುತ್ತಿದೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ವಿಕ್ರಮ್ ಅಮಟೆ ಯವರ ಮುಂದೆ ಅಂಗಲಾಚಿ ಬೇಡಿಕೊಳ್ಳುತ್ತಿರುವ ಪೊಲೀಸರು ಅಕ್ಷರಶಃ ಕಣ್ಣೀರಿಟ್ಟು ಮನವಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎಫ್ ಐಆರ್ ದಾಖಲಾಗಿರುವ ಆರು ಜನ ಪೊಲೀಸರನ್ನು ಬಂಧನ ಮಾಡಲೇ ಬಾರದು ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಈ ಕೇಸ್ ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!