May 8, 2024

MALNAD TV

HEART OF COFFEE CITY

G+2 ವಸತಿ ಮನೆಗಳು ಫೆಬ್ರವರಿ 8 ರೊಳಗೆ ಲೋಕಾರ್ಪಣೆ ಆಗಲಿದೆ: ಶಾಸಕ ಎಚ್.ಡಿ ತಮ್ಮಯ್ಯ

1 min read

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ವಸತಿ ರಹಿತರಿಗೆ ಸರ್ಕಾರದ  G+2 ಮಾದರಿಯ ಮನೆಗಳನ್ನು ಫೆಬ್ರವರಿ 8 ಒಳಗಾಗಿ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಶಾಸಕ ಎಚ್ ಡಿ ತಮ್ಮಯ್ಯ ಹೇಳಿದರು.

ನಿವೇಶನಕ್ಕಾಗಿ ಕಾದು ಕುಳಿತಿದ್ದ ಚಿಕ್ಕಮಗಳೂರು ನಗರದ ವಸತಿ ರಹಿತರಿಗೆ ಫೆಬ್ರವರಿ 8ರಂದು ಸಿಹಿ ಸುದ್ದಿ ಸಿಗುವುದು ಖಚಿತವಾಗಿದೆ. ನಗರದ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಲು ರಾಜೀವ್ ಗಾಂಧಿ ಬೆಂಗಳೂರು ಗೃಹ ಮಂಡಳಿಯ ಅಧಿಕಾರಿಗಳ ಜೊತೆ ಶಾಸಕ ಎಚ್ ಡಿ ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಯೋಜನಾ ನಿರ್ದೇಶಕಿ ನಾಗರತ್ನ, ನಗರಸಭೆ ಪೌರಾಯುಕ್ತ ಬಿಸಿ ಬಸವರಾಜ್ ಸೇರಿದಂತೆ ಪರಿಶೀಲನೆ ನಡೆಸಿದರು.
ಗೃಹ ಮಂಡಳಿಯ ಅಧಿಕಾರಿಗಳ ತಂಡ ಕಟ್ಟಡ ಕಾಮಗಾರಿಯ ಬಳಿ ತೆರಳಿ ಕಟ್ಟಡ ನಿರ್ಮಾಣ ಯಾವ ಹಂತದಲ್ಲಿದೆ ಮತ್ತು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣ ಗೊಳ್ಳುತ್ತದೆಯೇ ಎಂದು ಪರಿಶೀಲನೆ ನಡೆಸಿದರು.

ಇದೆ ವೇಳೆ ಕಾಮಗಾರಿಯ ನೀಲಿ ನಕ್ಷೆಯನ್ನು ಅಧಿಕಾರಿಗಳು ಶಾಸಕ ಎಚ್ ಡಿ ತಮ್ಮಯ್ಯ  ಅವರಿಗೆ ತೋರಿಸಿ ಕಾಮಗಾರಿಯ ಬಗ್ಗೆ ವಿವರಿಸಿದರು.ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕ ಎಚ್ ಡಿ ತಮ್ಮಯ್ಯ ಅವರು ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರದ 1511 ಮನೆಗಳು ಫಲಾನುಭವಿಗಳ ಕೈಸೇರಲಿವೆ ತಮ್ಮಯ್ಯ ವಿಶ್ವಾಸ ನೀಡಿದರು.

ರಾಜ್ಯ ಸರ್ಕಾರ ವಸತಿ ರಹಿತರಿಗೆ ಈ ಯೋಜನೆ ಅಡಿ  8000 ಸಾವಿರ ಮನೆಗಳನ್ನು ನೀಡಬೇಕೆಂಬ ನಿರ್ಧಾರ ಮಾಡಿದ್ದೂ, ಅದರಲ್ಲಿ ನಗರದಲ್ಲಿ ಒಟ್ಟು 1511 ಮನೆಗಳು ಆಯ್ಕೆ ಮಾಡಲಾಗಿದೆ, ವಸತಿ ರಹಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಯನ್ನು ಅದಷ್ಟು ಬೇಗ ಮುಗಿಸಲಾಗುವುದು ಎಂದ ಶಾಸಕ ತಮ್ಮಯ್ಯ ಈ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಿಂದ ಮನೆಗಳ ನಿರ್ಮಾಣಕ್ಕೆ 107  ಕೋಟಿ ಖರ್ಚಾಗುತ್ತದೆ. 7 ಕೋಟಿ ಮೂಲಸೌಕರ್ಯ ವೆಚ್ಚವಾಗುತ್ತದೆ. ಒಂದು ಮನೆಯ ನಿರ್ಮಾಣಕ್ಕೆ 6 ಲಕ್ಷ 90 ಸಾವಿರ ರೂಗಳು ಖರ್ಚಾಗುತ್ತದೆ. ಅದರಲ್ಲಿ ಫಲಾನುಭವಿಗಳು ಕೇವಲ 1 ಲಕ್ಷ ರೂ ಗಳನ್ನೂ ಕಟ್ಟಿದರೆ ಸಾಕು ಉಳಿದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪ್ರತಿ ಒಂದು ಮನೆಯು 3 1/2 ಚದರವನ್ನು ಹೊಂದಿದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!