May 17, 2024

MALNAD TV

HEART OF COFFEE CITY

ರೈತರಿಗೆ ಅಗತ್ಯವಿರುವ ಸಸಿಗಳ ಬೇಡಿಕೆಗಳನ್ನು ರೈತರಿಂದಲೇ ಸಂಗ್ರಹಿಸಿ ವಿತರಿಸಲು ಚಿಂತನೆ: ಜಿ.ಪ್ರಭು

1 min read

ಚಿಕ್ಕಮಗಳೂರು:  ರೈತರಿಗೆ ಅಗತ್ಯವಿರುವ ಸಸಿಗಳ ಬೇಡಿಕೆಗಳನ್ನು ರೈತರಿಂದಲೇ ಸಂಗ್ರಹಿಸಿ, ರೈತರಿಂದ ಸಂಗ್ರಹಿಸಿದ ಸಸಿಗಳ ಬೇಡಿಕೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಸರ್ಕಾರದ ವತಿಯಿಂದ ವಿತರಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ರೇಷ್ಮೆ ಇಲಾಖೆಗಳ ಸಹಯೋಗದೊಂದಿಗೆ ಬೃಹತ್ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರು. ಅಭಿಯಾನವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ  ಆಗಸ್ಟ್ ೪ರಂದು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ ೫ ರಿಂದ ೧೫ ರವರೆಗೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇಶಾ ಫೌಂಡೇಶನ್  ಜಿಲ್ಲಾ ಸಂಯೋಜಕಿಯಾದ ವೈಶಾಲಿ ಮಾತನಾಡಿ, ಕಾವೇರಿ ಕೂಗು ವಿಶ್ವದ ಅತಿ ದೊಡ್ಡ ರೈತ-ಚಾಲಿತ ಅಭಿಯಾನವಾಗಿದ್ದು, ಕಾವೇರಿ ಜಲನಯನ ಪ್ರದೇಶದ ಖಾಸಗಿ ಕೃಷಿ ಭೂಮಿಯಲ್ಲಿ ಮರ ಆಧಾರಿತ ಕೃಷಿಯನ್ನು ಉತ್ತೇಜಿಸುತ್ತದೆ. ೫೨ ಲಕ್ಷ ರೈತರು ಕಾವೇರಿ ನದಿಯ ಉದ್ದಕ್ಕೂ ೨೪೨ ಕೋಟಿ ಮರಗಳನ್ನು ನೆಡುವ ಮೂಲಕ ಕಾವೇರಿ ಜಲನಯನ ಪ್ರದೇಶದ ಮೂರನೇ ಒಂದು ಭಾಗದ ಹಸಿರು ಹೊದಿಕೆಯನ್ನು ೩೩% ರಷ್ಟು ಏರಿಸುವ ಗುರಿಯನ್ನು ಹೊಂದಿರುತ್ತಾರೆ, ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ, ಜೊತೆಗೆ ಮಣ್ಣಿನ ಪೋಷಕಾಂಶಗಳನ್ನು ಮತ್ತು ಸಾವಯವ ಇಂಗಾಲದ ಅಂಶವನ್ನು ಮರಳಿಸಿ ೮೪ ದಶಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾವೇರಿ ಕೂಗಿನ ಸ್ವಯಂ ಸೇವಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!