May 14, 2024

MALNAD TV

HEART OF COFFEE CITY

ಕನ್ನಡ ಭಾಷೆ ಉಳಿಸಿ ಬೆಳೆ ಸಲು ಪ್ರತಿಯೊಬ್ಬರು ಕನ್ನಡದ ಸೈನಿಕನಾಗಬೇಕು

1 min read

ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಉಳಿಸಿ ಬೆಳೆ ಸಲು ಪ್ರತಿಯೊಬ್ಬರು ಕನ್ನಡದ ಸೈನಿಕನಾಗಬೇಕು ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ತಿಳಿಸಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿ ಷತ್ ಸೇವಾದೀಕ್ಷೆ ಕಾರ್ಯಕ್ರಮವನ್ನು ನಾಡೋಜ ಮಹೇಶ್ ಜೋಷಿ ಉದ್ಘಾಟಿಸಿ ಮಾತ ನಾಡಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಪದಾಧಿಕಾರಿಗಳ ಸೇವಾದೀಕ್ಷೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಸದಸ್ಯತ್ವ ನೀಡುವ ಮೂಲಕ ಸದ್ಯ ಇರುವ ೩.೪೦ಲಕ್ಷ ಸದಸ್ಯರನ್ನು ಮೀರಿ ೧ ಕೋಟಿ ಸದಸ್ಯರ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ನಡೆಸುವುದು ಹೇಗೆ ಎಂಬ ಚಿಂತೆಬೇಡ. ಮನೆಯಲ್ಲಿದ್ದುಕೊಂಡು ಆ್ಯಪ್ ಮೂಲಕ ಮತದಾ ನ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ದೇಶದಲ್ಲಿ ಸೇವೆ ಸಲ್ಲಿಸಿರುವ ಕನ್ನಡ ಸೈನಿಕರಿಗೆ ಉಚಿತ ಸದಸ್ಯತ್ವ ನೀಡಲಾಗುವುದು ಎಂದು ಹೇಳಿದರು.
ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಮುಚ್ಚದಂತೆ ಮುನ್ನೆಚ್ಚ ರಿಕೆ ವಹಿಸುವ ಜವಬ್ದಾರಿ ಹೊರುತ್ತೇನೆ ಎಂದ ತಿಳಿಸಿದ ಅವರು, ಜಗತ್ತಿನಲ್ಲಿ ೭,೧೧೧ ಭಾಷೆ ಗಳಿವೆ. ಅದರಲ್ಲಿ ೨,೮೯೫ ಭಾಷೆ ಅಳಿವಿನಂಚಿನಲ್ಲಿವೆ. ಅಧ್ಯಯನದ ಪ್ರಕಾರ ಜಗತ್ತಿನ ಪರಿ ಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು. ನಾವು ಬರೆದಂತೆ ಮಾತನಾಡುತ್ತೇವೆ. ಆದರೆ, ಇಂಗ್ಲೀಷ್ ಹಾಗಲ್ಲ, ನಮ್ಮದು ಪರಿಪೂರ್ಣವಾದ ಭಾಷೆ. ಹೀಗಾಗಿ ಕನ್ನಡದಲ್ಲೇ ಸಹಿ ಮಾಡಿ ಕನ್ನಡದ ಅಂಕಿಗಳನ್ನೇ ಬಳಸಿ ಎಂದು ಮನವಿ ಮಾಡಿದರು.

 

ಸಮಾರಂಭದಲ್ಲಿ ಹಾರ ತುರಾಯಿ ಮೈಸೂರು ಪೇಟ ಸ್ವೀಕರಿಸದಂತೆ ತೀರ್ಮಾನಿಸಿದ್ದೇನೆ. ನಿಮ್ಮ ಭಾವನೆಗಳನ್ನು ಪುಸ್ತಕ ನೀಡುವ ಮೂಲಕ ವ್ಯಕ್ತಪಡಿಸಿ ಎಂದು ಸನ್ಮಾನಿಸಲು ಬಂದಿದ್ದ ಅಭಿಮಾನಿಗಳಿಗೆ ಹೇಳಿದರು.ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ ಈ ನಾಡಿನ ಶ್ರೀಮಂತಿಕೆ ಅಳತೆಗೋಲು ಆರ್ಥಿಕತೆ ಅಲ್ಲ, ಸಾಂಸ್ಕೃತಿಕತೆ ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನವನ್ನು ಈ ಜಿಲ್ಲೆಯಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಕನ್ನಡದ ನೂತನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಕುಂದೂರು ಅಶೋಕ ಮಾತನಾಡಿ, ಜಾತಿ, ಧರ್ಮದ ಗೋಡೆಗಳನ್ನು ಒಡೆದು ನಮ್ಮನ್ನು ಮುಖಾಮುಖಿಯಾಗಿಸುವ ಕೆಲಸವನ್ನು ಭಾಷೆ, ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು.

 

ಕಾಂಗ್ರೆಸ್‌ಮುಖoಡ ಎಂ.ಎಲ್.ಮೂರ್ತಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಸಿದರು. ಡಾ| ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೀಡ ಲಾಯಿತು. ಕನ್ನಡದ ಪ್ರಮುಖರಿಗೆ ಕನ್ನಡದ ಶಾಲು ಹೊದಿಸಿ ಗೌರವಿಸಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!