May 13, 2024

MALNAD TV

HEART OF COFFEE CITY

ಇಂದಿನಿಂದ ಮೂರು ದಿನಗಳ ಕಾಲ ದತ್ತಜಯಂತಿ, ಕಾಫಿನಾಡಲ್ಲಿ ಖಾಕಿ ಹದ್ದಿನಕಣ್ಣು

1 min read

 

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ದತ್ತಜಯಂತಿ ನಡೆಯಲಿದ್ದು ಜಿಲ್ಲಾದ್ಯಂತ ಕಾಫಿನಾಡ ಖಾಕಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. 4500ಕ್ಕೂ ಅಧಿಕ ಪೊಲೀಸರು ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನಕಣ್ಣಿಟ್ಟಿದ್ದಾರೆ. ಓರ್ವ ಎಸ್ಪಿ. ನಾಲ್ವರು ಎ.ಎಸ್.ಪಿ. 17 ಡಿವೈಎಸ್ಪಿ, 39 ಇನ್ಸ್‍ಪೆಕ್ಟರ್, 156 ಸಬ್ ಇನ್ಸ್‍ಪೆಕ್ಟರ್. 285 ಎಎಸ್‍ಐ. 2050 ಕಾನ್ಸ್‍ಟೇಬಲ್. 200 ಲೇಡಿ ಪೋಲೀಸ್. 500 ಹೋಂ ಗಾರ್ಡ್. 15 ಕೆ.ಎಸ್.ಆರ್.ಪಿ, 25 ಡಿ.ಆರ್. ಒಟ್ಟು 4500 ಪೊಲೀಸರು, 150ಕ್ಕೂ ಹೆಚ್ಚು ಸಿ.ಸಿ. ಟಿವಿ ಜೊತೆ 25 ಚೆಕ್ ಪೋಸ್ಟ್‍ಗಳು ಸಮಾಜದ ಶಾಂತಿ ಕಾಪಾಡಲು ಶ್ರಮಿಸುತ್ತಿವೆ. ಜಿಲ್ಲಾದ್ಯಂತ ಖಾಕಿ ಪಡೆ ಹೈ ಅಲರ್ಟ್ ಘೋಷಿಸಿದರೆ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಳೆದ ಐದು ದಶಕಗಳಿಂದ ಹೋರಾಟಕ್ಕೆ ಸಂದ ಫಲವಾದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಪೂಜೆಯಿಂದ ಪುಳಕಿತರಾಗಿದ್ದಾರೆ. ದತ್ತಪೀಠದ ಆಡಳಿತ ಮಂಡಳಿ ಆಶಯದಂತೆ ಮುಂದಿನ ಮೂರು ದಿನ ದತ್ತಜಯಂತಿಯ ಸಂದರ್ಭದಲ್ಲಿ ದತ್ತಪೀಠದ ದತ್ತಾತ್ರೇಯನಿಗೆ ಹಿಂದೂ ಅರ್ಚಕರಾದ ಶೃಂಗೇರಿ ಮೂಲದ ಶ್ರೀಧರ್, ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಪೂಜಾ-ಕೈಂಕರ್ಯ ನಡೆಸಲಿದ್ದಾರೆ. ಇದು ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳಿಗೆ ಡಬಲ್ ಖುಷಿ ತಂದಿದೆ.

 

ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ತಾಲೂಕಿನ ದತ್ತಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತಜಯಂತಿ ಸಂಭ್ರಮ ನಡೆಯಲಿದೆ. ಇಂದು 6 ಸಾವಿರಕ್ಕೂ ಅಧಿಕ ಮಹಿಳೆಯರಿಂದ ಅನಸೂಯ ಜಯಂತಿ. ನಾಳೆ 30 ಸಾವಿರಕ್ಕೂ ಅಧಿಕ ಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ. ನಾಡಿದ್ದು ಅಂದರೆ ಡಿಸೆಂಬರ್ 8ನೇ ತಾರೀಖು ರಾಜ್ಯದ ನಾನಾ ಭಾಗಗಳಿಂದ ಬರುವ 30 ಸಾವಿರಕ್ಕೂ ಅಧಿಕ ದತ್ತಭಕ್ತರಿಂದ ದತ್ತಪಾದುಕೆ ದರ್ಶನ. ಹಾಗಾಗಿ, ಹಿಂದೂ ಸಂಘಟನೆಗಳು ಕೂಡ ಚಿಕ್ಕಮಗಳೂರು ನಗರವನ್ನ ಸಂಪೂರ್ಣ ಕೇಸರಿಮಯವನ್ನಾಗಿಸಿದ್ದಾರೆ. 4500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲಾ ಪೊಲೀಸರು ನಗರದ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಲ್ಲಂದೂರು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ರೂಟ್ ಮಾಚ್ ಕೂಡ ನಡೆಸಿದ್ದಾರೆ. 47 ವರ್ಷಗಳಿಂದ ದತ್ತಪೀಠದ ಉಮೇದುವಾರಿಕೆ ಹಾಗೂ ಹಿಂದೂ ಅರ್ಚಕರಿಗಾಗಿ ಹೋರಾಡುತ್ತಿದ್ದ ಹಿಂದೂ ಸಂಘಟನೆಗಳಿಗೆ ಈ ಬಾರಿ ಹಿಂದೂ ಅರ್ಚಕರಿಂದು ಪೂಜೆ ನೋಡುವ ಭಾಗ್ಯ ಲಭಿಸಿದೆ. ಇಂದು ದತ್ತಪೀಠಕ್ಕೆ ಭೇಟಿ ನೀಡಿದ್ದ ಅರ್ಚಕರಾದ ಶ್ರೀಧರ್ ಹಾಗೂ ಸಂದೀಪ್ ದತ್ತಾತ್ರೇಯ ಸ್ವಾಮಿಗೆ ಪೂಜೆಗೈದು ಬಂದಿದ್ದಾರೆ. ಈ ಮಧ್ಯೆ ನಮ್ಮ ಮೊದಲ ಹಂತದ ಹೋರಾಟದಲ್ಲಿ ಜಯ ಕಂಡಿದ್ದೇವೆ. ಇನ್ಮುಂದೆ ದತ್ತಪೀಠವೇ ಬೇರೆ-ದರ್ಗಾವೇ ಬೇರೆ ಎಂಬ ಎರಡನೇ ಹಂತದ ಹೋರಾಟ ಆರಂಭ ಎಂದು ಶಾಸಕ ಸಿ.ಟಿ.ರವಿ ಮುಂದಿನ ಹೋರಾಟದ ಬಗ್ಗೆ ಸೂಚನೆ ನೀಡಿದ್ದಾರೆ.

ಚುನಾವಣೆ ಸಮೀಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಖಾಕಿ ಪಡೆ 4500 ಪೊಲೀಸರೊಂದಿಗೆ ಹೈ ಅಲರ್ಟ್ ಘೋಷಿಸಿದ್ದು. ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್‍ಗೆ ಬೆನ್ನೆಲುಬಾಗಿದ್ದಾರೆ. ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್‍ಗಳನ್ನ ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದ್ರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಕಾಫಿನಾಡು ಬೂದಿಮುಚ್ಚಿದ ಕೆಂಡದಂತಿರೋದ್ರಲ್ಲಿ ಎರಡು ಮಾತಿಲ್ಲ. ಜಿಲ್ಲಾಡಳಿತ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಪೂಜೆ-ಕೈಂಕರ್ಯಗಳನ್ನ ಮುಗಿಸಿಕೊಳ್ಳುವಂತೆ ಮನವಿ ಮಾಡಿದೆ. ಹಿಂದೂ ಸಂಘಟನೆಗಳು ದತ್ತಪೀಠದ ಉಮೇದುವಾರಿಕೆಗಾಗಿ ದಶಕಳಿಂದ ಹೋರಾಡಿ ತಕ್ಕಮಟ್ಟಿಗೆ ಜಯ ಕಂಡಿದ್ದರೂ ಹೋರಾಟ ಇನ್ನೂ ನಿಂತಿಲ್ಲ. ನಿಲ್ಲಲ್ಲ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ಇರೋದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಆದರೆ, ಸದಾ ತಣ್ಣಗಿರೋ ಕಾಫಿನಾಡಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದತ್ತಜಯಂತಿ ಮುಗಿಯಲಿ ಅನ್ನೋದು ಚಿಕ್ಕಮಗಳೂರಿಗರ ಆಶಯವಾಗಿದೆ. ದತ್ತಾತ್ರೇಯನಿಗೆ ಅದೇ ರೀತಿ ಬೇಡಿಕೊಂಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!