May 1, 2024

MALNAD TV

HEART OF COFFEE CITY

ಬಿ ರಿರ್ಪೋಟ್ ವಜಾಗೊಳಿಸಿದ ಕೋರ್ಟ್, ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್

1 min read

ಚಿಕ್ಕಮಗಳೂರು: ಸಂತಜೊಸೆಫರ ಎಜುಕೆಷನಲ್ ಸೊಸೈಟಿಯ ನಿವೇಶನದ ಹಗರಣದಲ್ಲಿ ಆರೋಪಿತರಾಗಿರುವ ಬಿಷಪ್ ಟಿ.ಅಂತೋಣಿಸ್ವಾಮಿ ಹಾಗೂ ಫಾದರ್ ಎ.ಶಾಂತರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನಗರಠಾಣೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ವಜಾಗೊಳಿಸಿ ವಿಶ್ವಾಸ ದ್ರೋಹದಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಮನ್ಸ್ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಸಂತಜೊಸೆಫರ ಎಜುಕೇಷನಲ್ ಸೊಸೈಟಿ ಸದಸ್ಯ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತಜೊಸೆಫರ ಎಜುಕೇ ಷನಲ್ ಸೊಸೈಟಿಗೆ ಸೇರಿರುವ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 20 ಗುಂಟೆ ನಿವೇಶನವನ್ನು ದಾನಿ ಎಫ್‍ಜಿಎಚ್ ಫರ್ನಾಂಡೀಸ್ ಬಡಮಕ್ಕಳ ಶಿಕ್ಷಣಕ್ಕೆ ಅನು ಕೂಲಕ್ಕೆಂದು ಹಾಸ್ಟೆಲ್ ನಿರ್ಮಾಣ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತಿಸಿ 1984ರಲ್ಲಿ ದಾನ ನೀಡಿದ್ದರು. ಸಂತಜೊಸೆಫರ ಬಾಲಕರ ಪ್ರೌಢಶಾಲೆಯ ಕಾಂಪೌಂಡ್ ಒಳಗೆ 1976ರಲ್ಲಿ ಖಾತೆ ಹೊಂದಿದ್ದ 21ಗುಂಟೆ ನಿವೇಶನ ಹಾಸ್ಟೇಲ್ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿವೇಶನವನ್ನು ತೋರಿಸಿ, ಶಾಲಾವರಣದಲ್ಲಿರುವ ಏಕನಿವೇ ಶನದ ದಾಖಲೆಗಳನ್ನು ಮುಂದಿಟ್ಟುಕೊಂಡು, ಹಾಸ್ಟೆಲ್ ಉಪಯೋಗದ ಭೂಪರಿವರ್ತನೆ ಆದೇಶಕ್ಕೆ ವಿರುದ್ಧವಾಗಿ ಸೊಸೈಟಿಯ ಅಧ್ಯಕ್ಷ ಬಿಷಪ್ ಟಿ.ಅಂತೋಣಿಸ್ವಾಮಿ ಮತ್ತು ಎ.ಶಾಂತರಾಜ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನಿವೇಶ ನ ಇಂದಿನ ಮಾರುಕಟ್ಟೆ ದರದಂತೆ ಚದರ ಅಡಿಗೆ 4ಸಾವಿರ ರೂ.ನಂತೆ 8.7ಕೋಟಿ ರೂ.ಆಗು ತ್ತದೆ. ಆರೋಪಿತರು ಈ ಸ್ವತ್ತನ್ನು ಚದರ ಅಡಿಗೆ ಕೇಲವ 950ರೂ.ನಂತೆ 2.10ಕೋಟಿ ರೂ. ಬೆಲೆಗೆ ಒಪ್ಪಂದ ಮಾಡಿಕೊಂಡು 40ಲಕ್ಷ ರೂ. ಮುಂಗಡ ಹಣ ಪಡೆದು ಮಾರಾಟಕ್ಕೆ ಮುಂ ದಾಗಿ ಸಂಸ್ಥೆಗೆ ವಂಚಿಸಲು ಮುಂದಾಗಿದ್ದರು ಎಂದು ತಿಳಿಸಿದರು.
ಈ ಅವ್ಯವಹಾರಗಳನ್ನು ರೋಮ್ ರಾಯಭಾರಿಯಾಗಿರುವ ಉನ್ನತ ಸ್ಥಾನದಲ್ಲಿರುವ ದೆಹಲಿಯ ನ್ಯೂನ್ಸಿಯೋ ಅವರ ಗಮನಕ್ಕೆ ತಂದರು ಯಾವುದೇ ಕ್ರಮವನ್ನು ಜರುಗಿಸದಿ ದ್ದಾಗ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಹೇಳಿದರು.

ಸಂತಜೊಸೆಫರ ಎಜುಕೇಷನಲ್ ಸೊಸೈಟಿ ನಿವೇಶನ ಹಗರಣ ವಿಚಾರವಾಗಿ ಈಗಾಗಲೇ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ವಜಾಗೊಳಿಸಿ ಆರೋಪಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮನ್ಸ್ ಜಾರಿಗೊಳಿಸುವ ಆದೇಶವನ್ನು ನ್ಯಾಯಾಲಯ ನೀಡಿದೆ ಎಂದರು.

ವಾಸ್ತವ ಸಂಗತಿಯನ್ನು ಮರೆಮಾಚಲು ನಮಗೆ ಸಂಬಂಧ ಇಲ್ಲದ, ಪಾತ್ರವಿಲ್ಲದ ಭಾಷಾ ವಿಷಯವನ್ನು ಪ್ರಸ್ತಾಪಿಸಿ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಸಮು ದಾಯದವರ ನಡುವೆ ಭಿನ್ನಾಭಿಪ್ರಾಯದೊಂದಿಗೆ ಒಡಕು ಹುಟ್ಟಿಸುವ ಸಂಚನ್ನು ಕೆಲವರು ನಡೆಸುತ್ತಿದ್ದಾರೆ. ಇದಕ್ಕೆಲ್ಲ ಜಗ್ಗುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮುದಾ ಯದ ಮುಖಂಡರಾದ ಬೆನಿಟಿಕ್‍ಜೇಮ್ಸ್, ಫ್ರಾನ್ಸಿಸ್ ಜೇವಿಯರ್, ಜೆರ್ಮಿಲೋಬೋ, ವಿಕ್ರಮ್, ಸಲ್ಡಾನ ಸೇರಿದಂತೆ ಅನೇಕರು ಇದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!