April 30, 2024

MALNAD TV

HEART OF COFFEE CITY

ಹಳ್ಳಿ-ಹಳ್ಳಿಗೂ ವ್ಯಾಪಿಸಿದೆ ಕೊರೋನ : ಗ್ರಾಮಸ್ಥರೆ ಎಚ್ಚರ

1 min read

ಚಿಕ್ಕಮಗಳೂರು : ಕೊರೋನ ಹೆಮ್ಮಾರಿಯು ದೇಶದಲ್ಲಿ 2ನೇ ಅಲೆಯ ರುದ್ರ ನರ್ತನ ತೋರಿಸುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಕೊರೋನ ನಗರಕಷ್ಟೇ ಸೀಮಿತಗೊಳ್ಳದೆ ಹಳ್ಳಿ-ಹಳ್ಳಿಯನ್ನು ಬಿಡದೆ ವ್ಯಾಪಿಸಿದೆ. ಇದು ಮದುವೆ ಮನೆಯನ್ನು ನೋಡದೆ, ಸತ್ತವರ ಮನೆಯನ್ನು ನೋಡದೆ ಕಣ್ಣಿಗೆ ಕಾಣದ ಕೊರೋನ ಹಮ್ಮಾರಿ ತನ್ನ ಅಟ್ಟಹಾಸವನ್ನು ತೋರುತ್ತಿದೆ.

                ಕೊರೋನ 2 ನೇ ಅಲೆ ತನ್ನ ಭೀಕರತೆಯಿಂದ ಇತ್ತಿಚೆಗೆ ಮೂಡಿಗೆರೆಯಲ್ಲಿ ಮದುವೆ ಮನೆಗೆ ಹೋಗಿ ದಂಪತಿಗಳಿಗೆ ಆಶೀರ್ವಾದಿಸಲು ಹೋಗಿದ್ದ ಬಹಳಷ್ಟು ಮಂದಿಗೆ ಕೊರೋನ ಸೋಂಕು ತಗುಲಿದೆ. ಜನರ ಗುಂಪನ್ನು ಗುರಿಯಾಗಿಸಿಕೊಂಡಿರುವ ಕೊರೋನ 2ನೇ ಅಲೆ ಇತ್ತಿಚೆಗೆ ಉಳುವಾಗಿಲು ಗ್ರಾಮದಲ್ಲಿ ಸಾಮೂಹಿಕವಾಗಿ ಹಬ್ಬುವ ಭೀತಿ ಎದುರಾಗಿದೆ. ಇನ್ನೂ ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಹತ್ತಿರದ ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿ ವ್ಯಕ್ತಿಯ ಕಳೆಬರಹವನ್ನು ಅಂತ್ಯಕ್ರಿಯೆ ಮಾಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವ ಒಂದೇ ಗ್ರಾಮದ 27 ಮಂದಿಗೆ ಕೊರೋನ ಲಕ್ಷಣಗಳು ಕಂಡುಬಂದಿದೆ. ಪರೀಕ್ಷೆಯ ನಂತರ  27 ಜನರಿಗೂ ಕೊರೋನ ಪಾಸಿಟಿವ್ ಎಂದು ಗೊತ್ತಾಗಿದೆ. ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೂ 33 ಕೊರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮಂದಿ ಸಾವನಪ್ಪಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೊಡ್ಡ ತಲೆ ನೋವಾಗಿದೆ.

ಇನ್ನೂ ಹಳ್ಳಿ-ಹಳ್ಳಿಗೂ ವ್ಯಾಪಿಸಿರುವ ಹೆಮ್ಮಾರಿ ಕೊರೋನಾ, ತೋಟ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಕಂಡು ಬರುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಹೆಚ್ಚಿದೆ. ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನ ಸಾಮೂಹಿಕ ಪರೀಕ್ಷೆ ನಡೆಸುತ್ತಿದ್ದು, ಕೊರೋನ ಪ್ರಕರಣಗಳು ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ಕಳೆದ ಬಾರಿ ಕೊರೋನ ಕಂಡು ಬಂದು ವ್ಯಕ್ತಿಯನ್ನು ಗುರುತಿಸಿ, ಪ್ರತ್ಯೇಕಗೊಳಿಸಿ, ಮನೆಯನ್ನು ಗುರುತು ಮಾಡುವ ಕಾರ್ಯದಿಂದ ಕೊರೋನ ಹರಡುವಿಕೆ ತಡೆಯಲಾಗುತ್ತಿತ್ತು. ಆದರೆ ಇಂದು ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಹಾಗೂ ಕೊರೋನ ಪಾಸಿಟಿವ್ ವರದಿ ಬಂದ ಜನರು ಕೂಡ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವುದರಿಂದ ಜನ ಸಾಮಾನ್ಯರಲ್ಲಿ ಕೊರೋನ ವೇಗವಾಗಿ ಹರಡುತ್ತಿದೆ. ಇನ್ನಾದರೂ ಜನ ಸಾಮಾನ್ಯರು ಎಚ್ಚರದಿಂದ ಇದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ಇದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!