May 3, 2024

MALNAD TV

HEART OF COFFEE CITY

ಮಕ್ಕಳ ಮೊಟ್ಟೆಯ ಇ-ಟೆಂಡರ್ ನೀಡಿಕೆಯಲ್ಲಿ ಲಂಚ ಪಡೆದ ಸಚಿವೆ ಜೊಲ್ಲೆ ವಜಾಕ್ಕೆ ಕಾಂಗ್ರೆಸ್ ಆಗ್ರಹ

1 min read

 

ಚಿಕ್ಕಮಗಳೂರು : ಮಾತೃಪೂರ್ಣ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಅಂಗನವಾಡಿಗಳ ಮೂಲಕ ಗರ್ಭೀಣಿಯರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಿಸುವ ಇ-ಟೆಂಡರ್ ನೀಡಿಕೆಯಲ್ಲಿ ಲಂಚ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರು ಮಳೆಯರು, ಮಕ್ಕಳ ಕಲ್ಯಾಣಕ್ಕೆ ಶ್ರಮಿಸುವ ಮೂಲಕ ಉತ್ತಮ ಸಚಿವರಾಗಿ ಹೊರಹೊಮ್ಮಿ ಹೆಸರು ಮಾಡುವ ಬದಲು ಅಂಗನವಾಡಿಯ ಮಕ್ಕಳಿಗೆ ಮೊಟ್ಟೆ ವಿತರಿಸಲು ಇಲಾಖೆ ಕರೆದಿದ್ದ ಇ-ಟೆಂಡರ್ ವಿತರಿಸಲು 25 ಲಕ್ಷ ರೂ.ಗಳ ಲಂಚ ಪಡೆಯುವ ಮೂಲಕ ಅಂನವಾಡಿಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲು ಮುಕ್ಕುವುದು ರಾಜ್ಯದ ಜನರಿಗೆ ಕಳಂಕ ತಂದಿದೆ ಎಂದು ಅವರು ಶನಿವಾರ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆಯಾದ ಕನ್ನಡ ಮಾತನಾಡುವ ಮೊದಲ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಚಿವೆ ಜೊಲ್ಲೆ ಅವರು, ಅದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಶಾಸಕಿ ಎಂಬ ಹಿರಿಮೆಯು ಇದೆ. ಈಗ ಅಂಗನವಾಡಿಯ ಬಡ ಮಕ್ಕಳು ಮತ್ತು ಗರ್ಭೀಣಿಯರು, ಬಾಣಂತಿಯರಿಗೆ ಕೊಡುವ ಮೊಟ್ಟೆಯಲ್ಲೂ ಲಂಚ ಪಡೆದಯುವ ಮೂಲಕ ಮೊದಲಿಗರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಲಂಚ ಪ್ರಕರಣದಲ್ಲಿ ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ಸಚಿವರಿಗೆ ಸಾಥ್ ನೀಡುವ ಮೂಲಕ ತಿಂಗಳಿಗೆ ಇಂತಿಷ್ಟು ಕಿಕ್ ಬ್ಯಾಕ್ ನೀಡಬೇಕು ಎಂದು ವ್ಯವಹಾರ ಕುದುರಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿರುವ ಅವರು, ಸಚಿವರಿಗೆ ತಿಂಗಳಿಗೆ ಒಂದು ಕೋಟಿ ರೂ.ಗಳನ್ನು ಮತ್ತು ತಮಗೆ 50 ಲಕ್ಷ ರೂ.ಗಳನ್ನು ನೀಡಬೇಕು. ಮೊದಲು ತಮಗೆ 30 ಲಕ್ಷ ರೂ.ಗಳನ್ನು ಕೊಡಬೇಕು. ಬಳಿಕ 50 ಲಕ್ಷ ರೂ.ಗಳನ್ನು ಕೊಡಿ ಎಂದು ಶಾಸಕ ಪರಣ್ಣ ಮುನವಳ್ಳಿ ಬೇಡಿಕೆ ಇಟ್ಟಿದ್ದು ಈಗ ಬಯಲಾಗಿದೆ. ಈ ಪ್ರಕರಣದಲ್ಲಿ ಸಚಿವರೊಂದಿಗೆ ಶಾಸಕರು ಶಾಮೀಲಾಗಿರುವುದರಿಂದ ಸಚಿವ ಸಂಪುಟದಿAದ ಸಚಿವೆಯನ್ನು ಹಾಗೂ ಶಾಸಕ ಸ್ಥಾನದಿಂದ ಪರಣ್ಣ ಮುನವಳ್ಳಿ ಅವರನ್ನು ವಜಾಗೊಳಿಸಲು ಒತ್ತಾಯಿಸಿ ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಪಕ್ಷ ಹಮ್ಮಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಪತ್ರಿಕಾ ಕಚೇರಿ ಮೇಲೆ ದಾಳಿಗೆ ಖಂಡನೆ:
ಸ್ವತಂತ್ರ ಮತ್ತು ಮುಕ್ತ ಪತ್ರಿಕೋದ್ಯಮವನ್ನು ಹತ್ತಿಕ್ಕುವ ಯತ್ನವಾಗಿ ಕೇಂದ್ರದ ಬಿಜೆಪಿ ಸರ್ಕಾರ ದೇಶದ ವಿವಿಧ ಕಡೆಗಳಲ್ಲಿ ದೈನಿಕ್ ಭಾಸ್ಕರ್ ಮತ್ತು ಉತ್ತರ ಪ್ರದೇಶದ ಲಖನೌ ಮೂಲದ ಸ್ವತಂತ್ರ ಸುದ್ದಿ ಸಂಸ್ಥೆ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕೋವಿಡ್-19 ಸಂಬಂಧಿಸಿದಂತೆ ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಸತ್ಯ ಸಂಗತಿಗಳನ್ನು ತನಿಖಾ ವರದಿಗಳ ಮೂಲಕ ಪ್ರಕಟಿಸಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದೆ. ದೇಶದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವ ಯತ್ನ ನಡೆಸಿದರೆ ಐಟಿ ಮತ್ತಿತರ ಕೇಂದ್ರ ಸರ್ಕಾರಗಳ ಇಲಾಖೆಗಳ ಮೂಲಕ ಹತ್ತಿಕ್ಕುವ ಯತ್ನವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ಹರಣವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಂತಹ ಸೇಡಿನ, ದ್ವೇಷದ ಘಟನೆಗಳು ನಡೆದಿರಲಿಲ್ಲ. ಈಗ ತುರ್ತು ಪರಿಸ್ಥಿತಿಯನ್ನೂ ಮೀರಿಸುವಂತ ಪರಿಸ್ಥಿತಿ ದೇಶದಲ್ಲಿದ್ದು, ಸುದ್ದಿ ಸಂಸ್ಥೆಗಳು ಒಂದು ರೀತಿಯಲ್ಲಿ ಉಸಿರುಗಟ್ಟಿದ ವಾತಾವರಣದಲ್ಲೇ ಕೆಲಸ ಮಾಡುತ್ತಿವೆ ಎಂದು ಹೇಳಿರುವ ಅವರು, ಸತ್ಯ ಮತ್ತು ವಾಸ್ತವ ಸಂಗತಿಗಳನ್ನು ಜನರಿಗೆ ತಿಳಿಸುವ ಯತ್ನ ನಡೆಸಿದರೆ ದೇಶ ದ್ರೋಹದ ಪಟ್ಟ ಕಟ್ಟಿ ಜೈಲಿಗೆ ಹಟ್ಟುವ ಕೆಲಸವನ್ನು ಕೇಂದ್ರ ಸರ್ಕಾರ ನಿರಂತರ ನಡೆಸಿಕೊಂಡು ಬರುತ್ತಿರುವುದು ದೇಶ ಗಂಡಾಂತರದಲ್ಲಿ ಸಿಕ್ಕಿರುವುದಕ್ಕೆ ನಿದರ್ಶನವಾಗಿದೆ ಎಂದು ವಿವರಿಸಿದ್ದಾರೆ.
ಈ ರೀತಿಯ ಯಾವುದೇ ದಾಳಿಗಳಿಂದ ಸಂವಿಧಾನ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಕ್ಕೆ ಮುಂದೊಂದು ದಿನ ದೇಶದ ಜನ ಪಾಠ ಕಲಿಸುತ್ತಾರೆ ಎಂದಿರುವ ಅವರು, ಈ ರೀತಿಯ ದಾಳಿ ಪ್ರಕರಣಗಳನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ. ಸರ್ಕಾರಗಳ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರು ಮತ್ತು ಸುದ್ದಿ ಸಂಸ್ಥೆಗಳು ಬೆದರುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!