May 1, 2024

MALNAD TV

HEART OF COFFEE CITY

30ಕ್ಕೂ ಹೆಚ್ಚು ಗೋ ಹಂತಕರಿಗೆ ಕಾಫಿನಾಡ ಖಾಕಿಗಳಿಂದ ಖಡಕ್ ವಾರ್ನಿಂಗ್

1 min read

ಚಿಕ್ಕಮಗಳೂರು: 30ಕ್ಕೂ ಹೆಚ್ಚು ಗೋ ಹಂತಕರಿಗೆ ಪೆರೇಡ್ ನಡೆಸಿರೋ ನಗರ ಠಾಣಾ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಗೋ ಹತ್ಯಾ ಕೇಂದ್ರಗಳ ಮೇಲೆ ನಗರಸಭೆ ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದಂತೆ ನಗರ ಠಾಣಾ ಪೊಲೀಸರು ಕೂಡ ಕಾರ್ಯಚರಣೆಗಿಳಿದಿದ್ದು, ಗೋ ಹಂತಕರು ಹಾಗೂ ಮಾರಾಟಗಾರರಿಗೆ ಪೆÇಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವುದರ ಜೊತೆ ಗೋಮಾಂಸ ಮಾರಾಟದಲ್ಲಿ ತೊಡಗಿದವರ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ನಗರ ಠಾಣಾ ಪೊಲೀಸರು ಎಲ್ಲರನ್ನೂ ಗುರುತಿಸಿ ಠಾಣಾ ಆವರಣದಲ್ಲಿ ಪರೇಡ್ ನಡೆಸಿ ಕೂಡಲೇ ದಂಧೆಯನ್ನ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನಗರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಗುರುಪ್ರಸಾದ್ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿ ಅವರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.

ಅಕ್ರಮವಾಗಿ ಗೋಹತ್ಯೆ ಹಾಗೂ ಸಾಗಾಟ ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆಯನ್ನ ಸಮರ್ಪಕವಾಗಿ ಜಾರಿಗೆ ತರಲು ನಗರಸಭೆ ಹಾಗೂ ಪೆÇಲೀಸ್ ಇಲಾಖೆ ಹೊಂದಾಣಿಕೆ ಮೇಲೆ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ನಗರಸಭೆ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡುತ್ತಿದ್ದು, ಒಂದನ್ನ ಈಗಾಗಲೇ ತೆರವು ಮಾಡಿದೆ. ಎಂಟತ್ತು ಕಟ್ಟಡಗಳಿಗೆ ನೋಟೀಸ್ ಕೂಡ ಅಂಟಿಸಿದ್ದಾರೆ. ಗೋಹತ್ಯೆ ಹಾಗೂ ಗೋಮಾಂಸ ಮಾರಾಟವನ್ನ ಮುಂದುವರೆಸಿದ್ದಲ್ಲಿ ಗೋ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಯಾವುದೇ ಮುನ್ಸೂಚನೆ ನೀಡದೆ ಕಟ್ಟಡವನ್ನು ತೆರವುಗೊಳಿಸಲಾಗುವುದು ಎಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಗೋಹತ್ಯೆ ಹಾಗೂ ಹಂತಕರ ಮೇಲೆ ಕಾನೂನಿನ ಸಮರ ಸಾರಿರುವ ನಗರಸಭೆ ಹಾಗೂ ಪೊಲೀಸುರ ಕಟ್ಟುನಿಟ್ಟಿನ ಕ್ರಮಕೈಗಳ್ಳಲು ಮುಂದಾಗಿದ್ದಾರೆ. ಹಾಗಾಗಿ, ಗೋ ಹಂತಕರ ಪರೇಡ್ ನಡೆಸುವ ಮೂಲಕ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಗೋಹತ್ಯೆ ಹಾಗೂ ಸಾಗಾಟ ಮುಂದುವರೆದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!