May 14, 2024

MALNAD TV

HEART OF COFFEE CITY

ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಕಾಫಿ ಗಿಡಗಳು

1 min read

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆರ್ಭಟಿಸುತ್ತಿರು ಮಳೆ ಮುಂದೂ ವರೆದಿದ್ದು, ಎರಡು ದಿನಗಳಿಂದ ಇನಷ್ಟು ತೀವ್ರತೆ ಪಡೆದುಕೊಂಡಿದೆ. ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯು ತ್ತಿವೆ.
ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಹಲವೆಡೆ ಗುಡ್ಡಕುಸಿದಿದೆ. ಕಲ್ಲು ಮಣ್ಣು ರಸ್ತೆಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕು ಅರೆನೂರು ಗ್ರಾಮದ ರಾಮು ಎಂಬುವರಿಗೆ ಸೇರಿದ ಕಾಫಿತೋಟದಲ್ಲಿ ಗುಡ್ಡಕುಸಿದು ಅಪಾರ ಹಾನಿಯಾಗಿದೆ. ಅಂದಾಜು 100 ಅಡಿಗಳಿಂದ ಗುಡ್ಡಕುಸಿದು ಕಾಫಿ ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಹಾನಿಯಾಗಿದೆ.

ಆವತಿ ಹೋಬಳಿ ಕಸ್ಕೆಮನೆ ಗ್ರಾಮದ ಧರ್ಮೇಗೌಡ ಎಂಬುವರಿಗೆ ಸೇರಿದ ಕಾಫಿ ತೋಟ ದಲ್ಲಿ ಗುಡ್ಡಕುಸಿದು ಕಾಫಿಗಿಡಗಳು ಮಣ್ಣು ಪಾಲಾಗಿದೆ. ಕಳಸ ತನೂಡಿ ಗ್ರಾಮದ ಉಮೇಶ್ ಮನೆ ಕುಸಿದು ಬಿದ್ದಿದೆ. ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ತಾಲ್ಲೂಕು ಸಬ್ಬಿಗ್ರಾಮದ ರಾಮಮ್ಮ ಎಂಬುವರ ಮನೆ ನೆಲಸಮಗೊಂಡಿದೆ.
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕು ಬಾಳೆಹೊನ್ನೂರು ಸಮೀಪ ಮಣಬೂರು ಗ್ರಾಮದ ಕಿರುಸೇತುವೆ ಹಳ್ಳದ ನೀರಿನಲ್ಲಿ ಮುಚ್ಚಿದ್ದು, ಹಳ್ಳದಾಟಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ರಸ್ತಬದಿ ಧರೆಕುಸಿದಿ ದೆ. 24ಗಂಟೆಯಲ್ಲಿ 33 ಮನೆಗಳಿಗೆ ಹಾನಿಯಾಗಿದೆ. 19.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. 147 ವಿದ್ಯುತ್ ಕಂಬ, 9ಸೇತುವೆ, 2.9ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ.

ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹಿರಿಯುತ್ತಿವೆ. ನದಿಪಾತ್ರದ ತೋಟ ಗಳು ಜಾಲವೃತಗೊಂಡಿವೆ. ಮಂಗಳವಾರ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋ ಷಣೆ ಮಾಡಲಾಗಿದೆ. ಹೊಸಪೇಟೆ ಗ್ರಾಮದ ತೋಟದ ಹಳ್ಳದಲ್ಲಿ ಕೊಚ್ಚಿಹೋದ ವಿದ್ಯಾ ರ್ಥಿನಿ ಸುಪ್ರೀತ ಶೋಧಕಾರ್ಯ 8ನೇ ದಿನವು ಮುಂದೂವರೆದಿದೆ. ನಿರಂತರವಾಗಿ ಸುರಿಯು ತ್ತಿರುವ ಮಳೆ ಕಾಫಿನಾಡಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!