May 14, 2024

MALNAD TV

HEART OF COFFEE CITY

ಹವಾಮಾನ ವೈಪರಿತ್ಯ, ಹೈರಾಣಾದ ಮಲೆನಾಡ ಕಾಫಿ-ಅಡಿಕೆ ಬೆಳೆಗಾರರು

1 min read

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಗಾಗ್ಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಡಿಕೆ-ಕಾಫಿ ಬೆಳೆಗಾರರು ಕಾಫಿ-ಅಡಿಕೆಯನ್ನ ಒಣಗಿಸಲಾಗದೆ ಹೈರಾಣಾಗಿದ್ದಾರೆ. ಈಗಾಗಲೇ ಮಲೆನಾಡಿಗರು ಬಿಸಿಲು ನೋಡದೆ 15 ದಿನಗಳೇ ಕಳೆದಿದೆ. ಜಿಲ್ಲಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣವಿದ್ದು ಬಿಸಿಲಿಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ-ಅಡಿಕೆಯನ್ನ ಮನೆಯಲ್ಲಿ ಹರಡಿ ಒಣಗಿಸುವ ಸ್ಥಿತಿ ನಿರ್ಮಾಣವಾಗಿದೆ. ನಿಡ್ನಳ್ಳಿ ಗ್ರಾಮದ ಸುಂದರೇಶ್ ಎಂಬುವರು ಮನೆಯ ಶೆಡ್‍ನಲ್ಲಿ ದೊಡ್ಡ-ದೊಡ್ಡ ಒಲೆಗಳನ್ನ ನಿರ್ಮಿಸಿ ಕಬ್ಬಿಣದ ತಗಡಿನ ಮೇಲೆ ಅಡಿಕೆ-ಕಾಫಿಯನ್ನ ಹರಡಿ ಬೆಂಕಿ ನೀಡಿ ಕಾಫಿ-ಅಡಿಕೆಯನ್ನ ಒಣಗಿಸುವಂತಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆ ಪ್ರಮಾಣವೂ ಹೆಚ್ಚಿದ್ದು ಬಿಸಿಲು ಸಂಪೂರ್ಣ ಇಲ್ಲದಂತಾಗಿದೆ. ಈಗಾಗಲೇ ಕೊಯ್ಲು ಮಾಡಿರೋ ಕಾಫಿ-ಅಡಿಕೆಯನ್ನ ಕಂಡು ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ.

 

ಮೂಡಿಗೆರೆ ತಾಲೂಕಿನ ನಿಡ್ನಳ್ಳಿ, ಗಬ್ಗಲ್, ಕೆಳಗೂರು, ಬಾಳೂರು ಸುತ್ತಮುತ್ತ ಮಳೆ ಪ್ರಮಾಣ ಹೆಚ್ಚಿದ್ದು ಬೆಳೆಗಾರು ಕಂಗಲಾಗಿದ್ದಾರೆ. ಜೇನುಬೈಲು ಗ್ರಾಮದ ಸಂದೀಪ್ ಎಂಬುವರ ಮನೆಯೊಳಗೆ ಕಾಫಿಯನ್ನ ಒಣಗಿಸುವಂತಾಗಿದೆ. ನಿರಂತರ ಮಳೆಯಿಂದ ಕಾಫಿ-ಅಡಿಕೆ-ಮೆಣಸು ರಕ್ಷಿಸಿಕೊಳ್ಳಲಾಗದೆ ಬೆಳೆಗಾರರು ಹೈರಾಣಗಿದ್ದಾರೆ. ಒಂದೆಡೆ ಬಿಟ್ಟು-ಬಿಟ್ಟು ಸುರಿಯೋ ಮಳೆ. ಮತ್ತೊಂದೆಡೆ ಇರೋ ಕಾಫಿ-ಮೆಣಸು-ಅಡಿಕೆಯನ್ನ ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಮಲೆನಾಡಿಗರು. ಜೊತೆಗೆ ಮಳೆ-ಗಾಳಿಗೆ ಉದುರುತ್ತಿರೋ ಕಾಫಿ-ಅಡಿಕೆ. ಮಳೆಯಲ್ಲೇ ಕೊಯ್ದಿದ್ದ ಕಾಫಿ-ಅಡಿಕೆ ಈಗಾಗಲೇ ಕೊಳೆತು ಹೋಗುತ್ತಿದೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವು ನೀಡುವ ವರುಣದೇವ ಆಗಾಗ್ಗೆ ಧಾರಾಕಾರವಾಗಿ ಸುರಿಯುತ್ತಿದ್ದ. ಆದರೆ, ಕಳೆದ 20 ದಿನಗಳಿಂದ ಮಳೆಯ ಪ್ರಮಾಣ ಬಹುತೇಕ ಕ್ಷೀಣಿಸಿದೆ. ಜಿಲ್ಲಾದ್ಯಂತ ಇಡೀ ದಿನ ಮೋಡಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಮನಸ್ಸೋ ಇಚ್ಛೆ ಸುರಿಯುತ್ತಿದ್ದಾನೆ.

 

 

ಇದರಿಂದ ಕಾಫಿ-ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಮಲೆನಾಡಿಗರು ಸಂಪೂರ್ಣ ಬಿಸಿಲು ನೋಡದೇ ಎರಡು ವಾರವೇ ಕಳೆದಿದೆ. ಹವಾಮಾನ ವೈಪರಿತ್ಯದಿಂದ ಕಂಗಾಲಾಗಿರೋ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹೋರಾಡುವಂತಾಗಿದೆ. ಜಿಲ್ಲೆಯಲ್ಲಿ ಅಡಿಕೆ-ಕಾಫಿಯನ್ನೇ ನೆಚ್ಚಿಕೊಂಡು ಸಣ್ಣ-ಸಣ್ಣ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಂದು ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಬೆಳೆಗಾರರು ಈ ವರ್ಷ 11 ತಿಂಗಳಿಂದ ಸುರಿಯುತ್ತಿರೋ ಮಳೆಯಿಂದ ಈ ವರ್ಷ ಮತ್ತೆ ಬೆಳೆ ಕಳೆದುಕೊಳ್ಳುವ ಆತಂಕದಿಂದಿದ್ದಾರೆ. ಹಾಗಾಗಿ, ಸರ್ಕಾರ ಅಡಿಕೆ-ಕಾಫಿ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬಡ ಬೆಳೆಗಾರರ ಬದುಕು ಬೀದಿಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೆಳೆಗಾರರು ಸರ್ಕಾರದ ದಾರಿ ಎದುರು ನೋಡುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!