May 17, 2024

MALNAD TV

HEART OF COFFEE CITY

ಬಿಜೆಪಿ ಪಕ್ಷ ಎಸ್.ಡಿ. ಪಿ.ಐ ಬೆಂಬಲವನ್ನು ಕೇಳಿಲ್ಲ; ಕಲ್ಮುರುಡಪ್ಪ ಸ್ಪಷ್ಟನೆ

1 min read

ಚಿಕ್ಕಮಗಳೂರು: ವರಸಿದ್ದಿ ವೇಣುಗೋಪಾಲ್‌ ಅವರನ್ನು ನಗರಸಭಾ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಬಿಜೆಪಿ ಸದಸ್ಯರು ಎಸ್.ಡಿ. ಪಿ.ಐ ಬೆಂಬಲ‌ ಪಡೆಯಲು ಮುಂದಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಈ ಹಿನ್ನಲೆ ಬಿಜೆಪಿ ಪಕ್ಷವು ಯಾರ ಬೆಂಬಲವನ್ನು ಕೇಳಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಮಂತ್ರಿಯವರು ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿಯನ್ನು ಕೊಡುವಂತಹ ಕಾರ್ಯವನ್ನ ಮತ್ತೆ ಐದು ವರ್ಷಕ್ಕೆ ಮುಂದುವರೆಸಿರುವುದು ಎಲ್ಲಾ ಬಡವರಿಗೂ ಸಂತೋಷ ತಂದಿದೆ. ಚಿಕ್ಕಮಗಳೂರು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಸಮಸ್ತ ಜನತೆಯ ಪರವಾಗಿ ಹೃದಯ ಪೂರಕವಾದಂತಹ ಅಭಿನಂದನೆಯನ್ನು ಸಲ್ಲಿಸಿದರು.

ಭಾರತೀಯ ಜನತಾ ಪಾರ್ಟಿ ಎಸ್.ಡಿ. ಪಿ.ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯು ಒಂದು ಸೈದ್ಧಾಂತಿಕವಾದ ಹಿನ್ನೆಲೆಯನ್ನು ಹೊಂದಿರುವಂತಹ ಪಾರ್ಟಿ, ಆ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡಿಕೊಂಡು ಬಂದಿರುವಂತಹದ್ದು, ಕೋಮುವಾದಿ ಎಸ್.ಡಿ. ಪಿ.ಐ ಜೊತೆ ಯಾವುದೇ ಸಂಪರ್ಕ ಸಂಬಂಧವನ್ನು ಭಾರತೀಯ ಜನತಾ ಪಾರ್ಟಿ ಮಾಡಿಲ್ಲ ಮುಂದೆಯೂ ಕೂಡ ಸಂಬಂಧವನ್ನು ಮಾಡುವುದಿಲ್ಲ ಎಂದು ತಿಳಿಸಿದರು.

ವಾಜಪೇಯಿ ಅವರ ಅಧಿಕಾರವನ್ನು ಮಾದರಿಯಾಗಿ ಇಟ್ಟುಕೊಂಡಿರುವಂತಹ ಪಾರ್ಟಿ ಇದು. ಈಗ ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಕಳೆದುಕೊಂಡಿದ್ದೇವೆ, ನಗರಸಭೆಯಲ್ಲಿಯೂ ಸಹ ಅಧಿಕಾರವನ್ನು ಕಳೆದುಕೊಳ್ಳಲು ಹಿಂದುಮುಂದೆ ಯೋಚಿಸುವುದಿಲ್ಲ, ಅವರೊಂದಿಗೆ ಸೇರಿ ಅಧಿಕಾರ ಪಡೆಯಬಹುದು ಎಂದಾದರೆ ಆ ರೀತಿ ಅಧಿಕಾರ ಭಾರತೀಯ ಜನತಾ ಪಾರ್ಟಿಗೆ ಖಂಡಿತವಾಗಿಯೂ ಬೇಡ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಹಿರಿಯರು ನಡೆದುಕೊಂಡ ಬಂದ ದಾರಿಯಲ್ಲಿ ಅವರ ಯಾವುದೇ ಭಾವನೆಗಳಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಪದಾಧಿಕಾರಿಗಳ ಕರ್ತವ್ಯ ಅದನ್ನು ನಾವು ಚಾಚು ತಪ್ಪದೇ ಮಾಡುತ್ತೇವೆ ಪಾಲಿಸುತ್ತೇವೆ ಎಂದು ತಿಳಿಸಿದರು.

ಈ ಕುರಿತು ನಗರಸಭೆ ಸದಸ್ಯ ಟಿ ರಾಜಶೇಖರ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಿಜೆಪಿಯೊಂದಿಗೆ ಎಸ್.ಡಿ. ಪಿ.ಐ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ರೀತಿಯ ಅಪಪ್ರಚಾರವು ಯಾರೋ ಕಿಡಿಗೇಡಿಗಳಿಂದ ಆಗಿರುವುದು. ಬಿಜೆಪಿಗೆ ಬೆಂಬಲ ಕೊಡಿ ಅಂತ ಎಸ್.ಡಿ. ಪಿ.ಐ ಗೆ ನಾವು ಅಧಿಕೃತವಾಗಿ ಮನವಿ ಮಾಡಿಲ್ಲ ಎಂದು ತಿಳಿಸಿದರು.

ನಗರಸಭೆಯಲ್ಲಿ ಎಸ್.ಡಿ. ಪಿ.ಐ ನಿಂದ ದಲಿತ ಮಹಿಳ ಸದಸ್ಯರೊಬ್ಬರು ಆಯ್ಕೆಯಾಗಿ ಬಂದಿದ್ದಾರೆ. ಆ ಮಹಿಳ ಸದಸ್ಯೆಗೆ ಸಂಬಂಧಿಸಿದ ವಾರ್ಡಿಗೆ ಯಾವುದೇ ಅನುದಾನಗಳನ್ನ ಅಧ್ಯಕ್ಷರು ಕೊಡದೆ, ಸದಸ್ಯಗೆ ತೊಂದರೆ ಕೊಟ್ಟಿದ್ದರಿಂದ ಅವರು ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ ಅಷ್ಟೇ ಎಂದು ಸ್ಪಷ್ಟನೆಕೊಟ್ಟಿದ್ದಾರೆ.

ದೇಶ ಮೊದಲು ವ್ಯಕ್ತಿ ಆಮೇಲೆ ಎಂಬ ಎಂಬ ತತ್ವ ಸಿದ್ಧಾಂತದ ಸೈದಾಂತಿಕತೆಗೆ ಬದ್ಧವಾಗಿ ಜನಸೇವೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ನಗರಸಭೆಯಲ್ಲಿ ಅಧಿಕಾರ ಇರಲಿ ಹೋಗಲಿ ಚಿಕ್ಕಮಗಳೂರ ಜನರ ಸೇವೆಯನ್ನು ಮಾಡಬೇಕು ಎಂಬ ಉದ್ದೇಶದಿಂದ ನಾವಿಲ್ಲಿದ್ದೇವೆ ಹೊರತು ಅಧಿಕಾರ ನಡೆಸಲು ಬಂದಿಲ್ಲ. ನಗರಸಭೆ ಅಧ್ಯಕ್ಷರಾಗಿ ಯಾರಾದರೂ ಮುಂದುವರೆಯಲಿ ಅವಿಶ್ವಾಸ ನಿರ್ಣಯದ ಪರವಾಗಿ 17 ಜನ ಬಿಜೆಪಿ ಸದಸ್ಯರು ಮತವನ್ನು ಹಾಕುತ್ತೇವೆ. ನಗರ ಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ವಿರುದ್ಧವಾಗಿ ಮತವನ್ನ ಚಲಾಯಿಸುತ್ತೇವೆ ಎಂದು ಹೇಳಿದರು.

ನಮಗೆ ಎಸ್.ಡಿ. ಪಿ.ಐ ಅವರ ಬೆಂಬಲ ಬೇಕಾಗಿಲ್ಲ. ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ನಾವು ಅವರ ಬೆಂಬಲವನ್ನ ಕೋರಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿರುವವರ ಮೇಲೆ ದೂರನ್ನು ನೀಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಇದರ ಉಪಯೋಗವನ್ನು ಪಡೆದುಕೊಳ್ಳಲು ಕೆಲವು ಸಂಘಟನೆಗಳು ಈ ರೀತಿಯ ಕಾರ್ಯಗಳನ್ನು ಮಾಡುತ್ತಿವೆ. ಇದನ್ನ ನಾವು ಖಂಡಿಸುತ್ತೇವೆ ಎಂದ ಅವರು ಚಿಕ್ಕಮಗಳೂರು ಬಿಜೆಪಿ ಘಟಕಕ್ಕೆ ಎಸ್.ಡಿ. ಪಿ.ಐ ಅವರ ಬೆಂಬಲ ಕೇಳುವಂತಹ ಅಗತ್ಯತೆ ಇಲ್ಲ ನಾವು ಸೇವೆಗಾಗಿ ಬಂದವರು ಅಧಿಕಾರಕ್ಕೋಸ್ಕರ ಅಲ್ಲ ಪಕ್ಷದ ಆದೇಶವನ್ನು ಪಾಲಿಸಲು ನಾವು ಬದ್ಧವಾಗಿದ್ದೇವೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!