May 16, 2024

MALNAD TV

HEART OF COFFEE CITY

ನಿವೇಶನಕ್ಕಾಗಿ ಸ್ಥಳೀಯರು, ಪೊಲೀಸರ ಜಟಾಪಟಿ

1 min read

ಮೂಡಿಗೆರೆ :

ಮೂಡಿಗೆರೆಯ ಸರ್ವೆ ನಂಬರ್ 34 ರಲ್ಲಿರುವ ಎರಡು ಎಕರೆ ಜಾಗದ ವಿವಾದ ಸ್ಥಳಿಯರು ಹಾಗೂ ಪೊಲೀಸ್ ಇಲಾಖೆ ನಡುವೆ ಜಟಾಪಟಿಗೆ ಕಾರಣವಾಗಿದೆ. ಸ್ಥಳಿಯ ಬಣಕಲ್ ಗ್ರಾಮ ಪಂಚಾಯಿತಿ 1994 ರಲ್ಲಿ ಪೊಲೀಸ್ ಇಲಾಖೆಗೆ ಎರಡು ಎಕರೆ ಜಾಗವನ್ನು ನೀಡಿತ್ತು. ಪೊಲೀಸ್ ಇಲಾಖೆಗೆ ನಿವೇಶನ ಹಾಗೂ ಆಟದ ಮೈದಾನಕ್ಕೆ ಮೀಸಲಿರಿಸಿದ್ದ  ಜಾಗವನ್ನು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿಡಲಾಗಿತ್ತು. ಈ ಸ್ಥಳದಲ್ಲಿ ಸ್ಥಳಿಯರು ನಿತ್ಯ ಆಟವಾಡಿಕೊಂಡು ಬಂದಿದ್ದು, ಇದೀಗ ಪೊಲೀಸ್ ಇಲಾಖೆ ಈ ಸ್ಥಳಕ್ಕೆ ಬೇಲಿ ಹಾಕಿತ್ತು, ಆದರೆ ಇದನ್ನು ವಿರೋಧಿಸಿ ಸ್ಥಳಿಯರು ಆಕ್ರೋಶ ವ್ಯಕ್ತ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ರೆ,  ಸ್ಥಳಿಯ ವರ್ತಕರು ತಮ್ಮ ಅಂಗಡಿ ಬಾಗಿಲುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡಿದ್ರು. ಪ್ರತಿಭಟನೆ ಕಾವಿನಿಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿ ಸ್ಥಳಿಯರ ಮನ ಒಲಿಸಲು ಪ್ರಯತ್ನಿಸಿದರು.

ಇದೇ ವೇಳೆ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಸ್ಥಳಿಯ ಬಣಕಲ್ ಗ್ರಾಮ ಪಂಚಾಯಿತಿಯಿAದ 1994 ರಲ್ಲಿ ಪೊಲೀಸ್ ಇಲಾಖೆಗೆ ನಿವೇಶನ ಮತ್ತು ಪೆರೆಡ್ ಮೈದಾನಕ್ಕೆಂದು ಎರೆಡು ಎಕರೆ ಜಾಗವನ್ನು ನೀಡಿತ್ತು. ಸ್ಥಳಿಯರು ಆಟದ ಮೈದಾನಕ್ಕೆ ಬೇಡಿಕೆ ಇಟ್ಟಿರುವುದರಿಂದ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.  ನಂತರ ಮಾತನಾಡಿದ ಎಸ್‌.ಪಿ ಎಚ್.ಎಂ ಅಕ್ಷಯ್ ಎಲ್ಲಾ ಗ್ರಾಮಸ್ಥರ ಕೋರಿಕೆಯ ಮೇರೆಗೆ ಪೊಲೀಸ್ ಇಲಾಖೆಗೆ ಸೇರಿದ ಜಾಗದಲ್ಲಿ ಸ್ಥಳಿಯರಿಗೂ ಆಟದ ಮೈದಾನ ಬೇಕಾಗಿರುವುದರಿಂದ ಈ ಸಮಸ್ಯೆ ಬಗೆಹರಿಸುವ ಕುರಿತು ಆರೋಗ್ಯಕರ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಇಲಾಖೆಯೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!