May 17, 2024

MALNAD TV

HEART OF COFFEE CITY

ರಾಜ್ಯದಲ್ಲಿ ಪ್ರಸ್ತುತ ಮನುಷ್ಯರ ಸಮಸ್ಯೆಯನ್ನು ಕೇಳುವವರೇ ಇಲ್ಲ..ಇನ್ನು ಮೂಕ ಪ್ರಾಣಿಗಳ ಬಗ್ಗೆ ಯಾರ್ ಕೇಳ್ತಾರೆ..? ಸಿ.ಟಿ ರವಿ

1 min read

ಚಿಕ್ಕಮಗಳೂರು: ಪ್ರಸ್ತುತ ದಿನದಲ್ಲಿ ಮನುಷ್ಯರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ ಇನ್ನು ಮೂಕ ಪ್ರಾಣಿಗಳ ಬಗ್ಗೆ ಯಾರು ಗಮನಹರಿಸುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದರು.
ನಗರದ ಅವರ ನಿವಾಸದಲ್ಲಿ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಅವರು ಮಲೆನಾಡು ಭಾಗದಲ್ಲಿ ಶೇ. 70 ರಷ್ಟು ಮಳೆ ಕಡಿಮೆಯಾಗಿದೆ. ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಎಂದು ಹೇಳಿದರು ಇನ್ನೂ ಕೂಡ ಘೋಷಣೆ ಆಗಿಲ್ಲ. ರಾಜ್ಯದಲ್ಲಿ ಬರ ಆವರಿಸಿದೆ 220 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರವು ರೈತರನ್ನು ಭಿಕ್ಷುಕರ ರೀತಿಯಲ್ಲಿ ನೋಡುತ್ತಿದ್ದು, ಎರಡು ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿ ಅದನ್ನು ಕೂಡ ಸಮರ್ಪಕವಾಗಿ ರೈತರಿಗೆ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಬರಪೀಡಿತ ಪ್ರದೇಶಗಳಿಗೆ ಪರಿಹಾರ ಕ್ರಮವಾಗಿ ರಾಜ್ಯ ಸರ್ಕಾರ ಏನು ಮಾಡಿದೆ ಎಂದ ಅವರು ಉದ್ಯೋಗ ಸೃಷ್ಟಿಯಾಗಬೇಕು ಉದ್ಯೋಗ ಸೃಷ್ಟಿಗೆ ಯಾವ ಕ್ರಮ ಕೈಗೊಂಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇದೆ. ಆ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲು ಏನು ಕ್ರಮ ಕೈಗೊಂಡಿದ್ದಾರೆ. ರೈತರಿಗೆ ಪರಿಹಾರವನ್ನು ನೀಡದೆ ನಾವು ರೈತರ ಪರ ಎಂದು ಬಾಯಿ ಮಾತಿನ ಉಪಚಾರ ಮಾಡಿದರೆ ಸಾಕೆ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದರು.

ವಿರೋಧಪಕ್ಷದ ನಾಯಕರುಗಳು ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ ಮಾಡಿ ಬರವೀಕ್ಷಣೆ ಮಾಡಿದ ನಂತರ ಈ ಜಿಲ್ಲೆಯ ಉಸ್ತುವಾರಿಗಳು ನಾಮಕಾವಸ್ಥೆಗೆ ಬಂದು ಪರಿಶೀಲನೆ ಮಾಡುತ್ತಿದ್ದಾರೆ ಅಷ್ಟೇ. ರಾಜ್ಯ ಸರ್ಕಾರ ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ಎಲ್ಲೂ ಕೂಡ ಮಾಡಿಲ್ಲ, ವಿಧಾನಸಭೆ ಅಧಿವೇಶನ ನಡೆಯುತ್ತೆ ಈ ಹಿನ್ನೆಲೆ ಕಾಟಾಚಾರಕ್ಕೆ ನಾಟಕೀಯವಾಗಿ ಹಾಗೆ ವರ್ತಿಸಿದ್ದಾರೆ ಅಷ್ಟೇ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!