May 14, 2024

MALNAD TV

HEART OF COFFEE CITY

ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಅ. 21 ರಂದು ದೇಹದಾರ್ಢ್ಯ ಸ್ಪರ್ಧೆ ಆಯೋಜನೆ

1 min read

 

 

ಚಿಕ್ಕಮಗಳೂರು: 29ನೇ ವರ್ಷದ ಶ್ರೀ ದುರ್ಗಾ ಮಾತೆಯ, ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಅ. 21 ರಂದು ವಿಜಯಪುರದಲ್ಲಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಎಲ್ಲಾ ಯುವಕರು ಪಾಲ್ಗೊಳ್ಳಬೇಕು ಎಂದು ಶ್ರೀ ವಿಜಯಪುರ ದುರ್ಗಾ ಸೇವಾ ಸಮಿತಿ ಸದಸ್ಯ ಧನಂಜಯ್ ಗೌಡ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ವಿಷೇಶತೆ ಎಂದರೆ ಶ್ರೀ ದುರ್ಗಾ ಸೇವಾ ಸಮಿತಿ ಮತ್ತು ನಂದಿ ಟ್ರಸ್ಟ್ ವತಿಯಿಂದ ಯುವಕರಿಗಾಗಿ ಅ.21 ಜಿಲ್ಲಾ ಮಟ್ಟದ ದೇಹದಾರ್ಢ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ರಾಜ್ಯದ ವಿವಿದೆಡೆಯಿಂದ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದಾರೆ. ಅ.24 ರ ವಿಜಯದಶಮಿಯಂದು ಶ್ರೀ ದುರ್ಗಾ ಮಾತೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೇರವಣಿಗೆ ನೆಡೆಸಿ ಶ್ರೀ ಮಾತೆಯನ್ನು ವಿಸರ್ಜಿಸಲಾಗುವುದು. ಇದು ಸಾರ್ವಜನಿಕರ ಕಾರ್ಯಕ್ರಮ ಸಾರ್ವಜನಿಕರು ಪಾಲ್ಗೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು. 

 

ದುರ್ಗಾ ಸೇವಾ ಸಮಿತಿಯ ಗೌರವಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಈ ಬಾರಿ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲು ಮೂಲ ಕಾರಣವೆಂದರೆ ಯುವಕರಿಗೆ ಮೊದಲ ಆದ್ಯತೆನೀಡಿ ಅವರ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಅದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನವನ್ನು ಸಹ ನೀಡಲಾಗುತ್ತದೆ. ಪ್ರಥಮ ಬಹುಮಾನ 15,000, ದ್ವಿತೀಯ ಬಹುಮಾನ 10,000, ತೃತೀಯ ಬಹುಮಾನ 5000 ಮನ ಎಂದು ನಿಗದಿ ಮಾಡಲಾಗಿದ್ದು ಆಸಕ್ತ ಎಲ್ಲಾ ಸ್ಪರ್ಧಿಗಳು ತಮ್ಮ ಹೆಸರನ್ನು ಸಮಿತಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ಅಷ್ಟೇ ಅಲ್ಲದೆ ಅನ್ನದಾನ ಕಾರ್ಯಕ್ರಮವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. 

ದುರ್ಗಾ ಸೇವಾ ಸಮಿತಿ ಮತ್ತು ನಂದಿ ಟ್ರಸ್ಟ್ ಸದಸ್ಯರುಗಳು ಕಾರ್ಯಕ್ರಮವನ್ನು ಆಯೋಜಿಸಿದ್ದು, ಉಪಸ್ಥಿತರಿರಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!