ಮನೆ ಕುಸಿದು ವೃದ್ಧ ದಂಪತಿ ಕಂಗಾಲು: ತಪ್ಪಿದ ಅನಾಹುತ
1 min read
ಚಿಕ್ಕಮಗಳೂರು : ಮಳೆಯ ಆರ್ಭಟಕ್ಕೆ ಮನೆ ಕುಸಿದು ವೃದ್ಧ ದಂಪತಿ ಕಂಗಾಲಾಗಿರೋ ಘಟನೆ ತಾಲೂಕಿನಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ಕೆರೆಮಕ್ಕಿ ಗ್ರಾಮದ ನಿವಾಸಿ ದುಗ್ಗೇಗೌಡ-ಜಯಮ್ಮ ದಂಪತಿಗೆ ಸೇರಿದ ಮನೆ ಕುಸಿದಿದ್ದು. ಕಳೆ ವಾರ ಬಿಟ್ಟು ಬಿಡದೆ ಸುರಿದ್ದ ಮಳೆಗೆ ಮನೆಯ ಗೋಡೆ ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಒಂದು ದಿನದ ಹಿಂದೆಯಷ್ಟೇ ಈ ಹಿರಿ ಜೀವಗಳು ಮನೆಯನ್ನು ಖಾಲಿ ಮಾಡಲಾಗಿತ್ತು.
ಗೋಡೆಗಳು ಬಿರುಕು ಬಿಟ್ಟಿದ್ದ ಕಾರಣ ರಾತ್ರೋರಾತ್ರಿ ಮನೆ ಕುಸಿದಿದೆ. ಒಂದು ದಿನದ ಮೊದಲೆ ಮನೆ ಖಾಲಿಮಾಡಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ.
ಮನೆ ಕುಸಿತದಿಂದ ಮನೆಯ ಹಂಚುಗಳು, ಪೀಠೋಪಕರಣಗಳು ಧ್ವಂಸವಾಗಿದ್ದು.. ಮನೆ ಕಳೆದುಕೊಂಡು ವೃದ್ಧ ದಂಪತಿ ಕಣ್ಣೀರಿಡುವಂತಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g