May 17, 2024

MALNAD TV

HEART OF COFFEE CITY

ಮತ ಏಣಿಕೆಗೆ ಸಕಲ ಸಿದ್ಧತೆ, ಅಭ್ಯರ್ಥಿಗಳಲ್ಲಿ ಕಾತುರ

1 min read

 

 

ಚಿಕ್ಕಮಗಳೂರು: ಡಿ.30 ರಂದು ನಗರಸಭೆ ಚುನಾವಣೆ ಮತ ಏಣಿಕೆ ಕಾರ್ಯ ನಡೆಯಲಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ಐದು ಜನ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದರು.ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ಐಡಿಎಸ್‍ಜಿ ಕಾಲೇಜಿನಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದ್ದು ಐದು ಚುನಾವಣಾಧಿಕಾರಿಗಳಿಗೆ ಐದು ಕೋಠಡಿಗಳನ್ನು ನೀಡಲಾಗಿದ್ದು ಮೊದಲನೆಯವರಿಗೆ 1 ರಿಂದ 7 ವಾರ್ಡ್‍ಗಳ ಮತ ಏಣಿಕೆ, ಎರಡನೇಯವರಿಗೆ 8 ರಿಂದ 14 ವಾರ್ಡ್‍ಗಳ ಮತ ಏಣಿಕೆ ಕಾರ್ಯದ ಜವಾಬ್ದಾರಿ ನೀಡಿದ್ರೆ, ಮೂರನೇಯವರಿಗೆ 15 ರಿಂದ 21ನೇ ವಾರ್ಡ್, ನಾಲ್ಕನೇ ಚುನಾವಣಾಧಿಕಾರಿಗೆ 22_28 ಮತ್ತು ಐದನೇ ಚುನಾವಣಾಧಿಕಾರಿಗಳಿಗೆ 28 ರಿಂದ 35ನೇ ವಾರ್ಡ್‍ಗಳ ಮತ ಏಣಿಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

110 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಒಂದು ಕೊಠಡಿಯಲ್ಲಿ ಮತಏಣಿಕೆ ಮಾಡಲು ಎರಡು ಟೇಬಲ್‍ಗಳನ್ನು ಹಾಕಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಮತ್ತೊಂದು ಟೇಬಲ್ ಚುನಾವಣಾಧಿಕಾರಿಗಳಿಗೆ ನೀಡಲಾಗುವುದು. ಪ್ರತಿಯೊಬ್ಬ ಅಭ್ಯರ್ಥಿಯ ಕಡೆಯಿಂದ ಒಬ್ಬ ಏಜೆಂಟ್‍ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ ಅವರು, ಚುನಾವಣಾಧಿಕಾರಿಯ ಟೇಬಲ್‍ನಲ್ಲಿಯೂ ಸಹ ಅಭ್ಯರ್ಥಿ ಹಾಗೂ ಒಬ್ಬರು ಏಜೆಂಟ್ ಹಾಜರಾತಿಗೆ ಅವಕಾಶ ಇದೆ ಎಂದು ತಿಳಿಸಿದರು. ಒಂದು ವಾರ್ಡ್‍ನಲ್ಲಿ ನಾಲ್ಕು ಜನ ಅಭ್ಯರ್ಥಿಗಳು ಇದ್ದರೆ 16 ಜನರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

 

* ಅಭ್ಯರ್ಥಿಗಳು, ಏಜೆಂಟ್‍ಗೆ ಬಣ್ಣದ ಪಾಸ್

ಮೊದಲನೇ ಸುತ್ತಿನಲ್ಲಿ ಮತ ಏಣಿಕೆ ಮಾಡುವ ಸಂದರ್ಭದಲ್ಲಿ ಆಯಾ ವಾರ್ಡ್‍ಗಳಿಗೆ ಒಂದು ರೀತಿಯ ಬಣ್ಣದ ಪಾಸ್‍ಗಳನ್ನು ನೀಡಿದ್ರೆ ನಂತರ ಮತ ಏಣಿಕೆ ಮಾಡುವ ಸಂದರ್ಭದಲ್ಲಿ ಬರುವ ಅಭ್ಯರ್ಥಿಗಳು, ಏಜೆಂಟ್‍ಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇನ್ನೊಂದು ರೀತಿಯ ಬಣ್ಣದ ಪಾಸ್‍ಗಳನ್ನು ನೀಡಲಾಗುತ್ತದೆ. ಮತ ಏಣಿಕೆಯಾದ ಬಳಿಕ ಆ ಅಭ್ಯರ್ಥಿಗಳ ಹಾಗೂ ಏಜೆಂಟ್‍ಗಳು ಮತ ಏಣಿಕೆ ಕೇಂದ್ರದಲ್ಲಿ ಜನದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಈ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದರು.

* ಸೂಕ್ತ ಪಾಕಿಂಗ್ ವ್ಯವಸ್ಥೆ

ಮತ ಏಣಿಕೆ ಸಂದರ್ಭದಲ್ಲಿ ಸಾಕಷ್ಟು ಜನರು ಬರುವ ಉದ್ದೇಶದಿಂದ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹಾಗೂ ಮತ ಏಣಿಕೆ ಬಳಿ ತೆರಳಲು ಹಾಗೂ ಮತ ಏಣಿಕೆ ಕೇಂದ್ರಕ್ಕೆ ಬರಲು ಸಹ ಬೇರೆ ಬೇರೆ ಮಾರ್ಗಗಳನ್ನು ಮಾಡಲಾಗಿದೆ. ಇನ್ನು ಅಭ್ಯರ್ಥಿಗಳ ಕಡೆಯವರು ಹೊರಗೆ ನಿಲ್ಲಲು ಸಹ ದೊಡ್ಡ ಶಾಮಿಯಾನ ಹಾಕಿಸಿ ವ್ಯವಸ್ಥೆ ಮಾಡಲಾಗಿದೆ.

* ಫಲಿತಾಂಶದ ಕಾತುರದಲ್ಲಿ ಅಭ್ಯರ್ಥಿಗಳು

ಸರಿಸುಮಾರು ಮೂರುವರೆ ವರ್ಷದ ಬಳಿಕ ನಗರಸಭೆ ಚುನಾವಣೆ ನಡೆದಿದ್ದು, ಬುಧವಾರ ಗುರುವಾರ ಫಲಿತಾಂಶ ಹೊರಬೀಳಲಿದ್ದು ಗೆಲುವು, ಸೋಲಿನ ಲೆಕ್ಕಾಚಾರಗಳು ವಾರ್ಡ್‍ಗಳಲ್ಲಿ ಶುರುವಾಗಿದೆ. ಕಳೆದ ಹದಿನೈದು ದಿನಗಳಿಂದ ಅಭ್ಯರ್ಥಿಗಳು ಹಾಗೂ ಪ್ರಮುಖ ಪಕ್ಷದ ಮುಖಂಡರು ಕಾಲಿಗೆ ಚಕ್ರಕಟ್ಟಿಕೊಂಡು ನಗರಸಭೆ ಚುಕ್ಕಾಣಿ ಹಿಡಿಯಲು ಹರಸಾಹಸ ಪಟ್ಟಿದ್ದು ಗುರುವಾರ ಮಧ್ಯಾಹ್ನದ ಒಳಗೆ ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ. ಈ ಬಾರಿ ನಗರಸಭೆ ಚುನಾವಣೆಯಲ್ಲಿ ಶೇ.60 ರಷ್ಟು ಕಡಿಮೆ ಮತದಾನವಾಗಿದ್ದು ಇದು ಯಾರಿಗೆ ವರವಾಗಲಿದೆ ಅಥವಾ ಮತ್ಯಾರಿಗೆ ಶಾಪವಾಗಿ ಪರಿಣಮಿಸಲಿದೆ ಎಂಬುದನ್ನು ಕಾದುನೋಡ್ಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!