April 28, 2024

MALNAD TV

HEART OF COFFEE CITY

ಗಣರಾಜ್ಯೋತ್ಸವ ವೇಳೆ ತಲೆ ಸುತ್ತಿ ಕುಸಿದು ಬಿದ್ದ ವಿದ್ಯಾರ್ಥಿನಿ

1 min read

ಚಿಕ್ಕಮಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಸಮೂಹ ಗೀತ ಗಾಯನ ಮಾಡುವಾಗ ವಿದ್ಯಾರ್ಥಿನಿಯೊಬ್ಬಳು ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿದ್ದಾಳೆ .

ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನದ ವೇಳೆ ವೇದಿಕೆ ಕಾರ್ಯಕ್ರಮ ಮುಗಿದ ನಂತರ ಶಾಲಾ ಮಕ್ಕಳ ಸಮೂಹ ಗೀತೆ ಹಾಡುವ ವೇಳೆ ಎಸ್.ಟಿ ಜೆ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಮೆಹ್ತಾಜ್ ಎಂಬ ಬಾಲಕಿ ತಲೆ ತಿರುಗಿ ಕುಸಿದು ಬಿದ್ದಿದ್ದಾಳೆ. ತೀವ್ರ ಬಿಸಿಲಿನ ಝಳ ಇದ್ದದ್ದರಿಂದ ಗಂಟೆಗಟ್ಡಲೇ ನಿಂತು ನಿತ್ರಾಣಗೊಂಡ ವಿದ್ಯಾರ್ಥಿನಿ ತಲೆ ಸುತ್ತು ಬಂದು ಏಕಾಏಕಿ ಕುಸಿದು ಬಿದ್ದಳು. ತಕ್ಷಣ ಬಾಲಕಿಯನ್ನು ವೇದಿಕೆ ಮುಂಭಾಗದ ಆಸನದಲ್ಲಿ ಕೂರಿಸಿ ನೀರು ಕುಡಿಸಿದ ಶಾಲೆ ಶಿಕ್ಷಕಿಯರು ಶುಶ್ರೂಷೆ ಮಾಡಿದರು. ಪಥ ಸಂಚಲನ ಮುಗಿದ ನಂತರ ಎಚ್.ಎಸ್ ವೆಂಕಟೇಶ್ ಮೂರ್ತಿ ರಚಿತ ಮೊಳಗಲಿ ಮೊಳಗಲಿ ನಾಡಗೀತವು ಸಮೂಹ ಗೀತೆಯನ್ನು 2000 ವಿದ್ಯಾರ್ಥಿಗಳು ಒಟ್ಟಾಗಿ ಆಡುತ್ತಿದ್ದರು ಈ ವೇಳೆ ವಿದ್ಯಾರ್ಥಿನಿ ಮೆಹರಾಜ್ ಸುಸ್ತಾಗಿ ಬಿದ್ದಳು. ಇದೇ ವೇಳೆ ಸ್ಥಳದಲ್ಲೇ ಇದ್ದ ವೈದ್ಯರಾದ ಅನಿಕೇತ್ ಬಾಲಕಿ ನಾಡಿಮಿಡಿತ ಪರೀಕ್ಷಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!