May 8, 2024

MALNAD TV

HEART OF COFFEE CITY

ಸಂಸ್ಕಾರ ಪಡೆದ ವ್ಯಕ್ತಿ ಭಗವಂತನಾಗುತ್ತಾನೆ : ಶಾಸಕ ಸಿ.ಟಿ. ರವಿ

1 min read

ಸಂಸ್ಕಾರ ಪಡೆದ ವ್ಯಕ್ತಿ ಭಗವಂತನಾಗುವ ಅವಕಾಶ ಭಾರತ ಹೊರತುಪಡಿಸಿ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ಅವರು ಇಂದು ನಗರದ ಶ್ರೀ ಬಸವತತ್ವ ಪೀಠದ ಬಸವ ಮಂದಿರ ಆವರಣದಲ್ಲಿ ಮೂರು ಕೋಟಿ ರೂ. ವೆಚ್ಚದ ನೂತನ ಮಠ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದರು. ನೀರಿಗೆ ಸಂಸ್ಕಾರ ಕೊಟ್ಟರೆ ನೀರು ತೀರ್ಥ ಆಗುತ್ತೆ. ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಮನುಷ್ಯ ಭಗವಂತನೇ ಆಗುತ್ತಾನೆ. ಜಗತ್ತಿನಲ್ಲಿ ನರಹರನಾಗುವ ಅವಕಾಶ ಬೇರೆಲ್ಲೂ ಇಲ್ಲ. ಭಾರತದಲ್ಲಿ ನರ ಹರನಾಗುವ ಅವಕಾಶವಿದೆ ಎಂದರು. ವ್ಯಕ್ತಿಗೆ ಸಂಸ್ಕಾರ ನೀಡುವ ಮಠಗಳು, ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಗವಂತನ ಸಂಕಲ್ಪದಿಂದ ಮಾತ್ರ ಎಲ್ಲ ಕಾರ್ಯಗಳು ನಡೆಯುತ್ತವೆ ಎಂಬುದು ಭಾರತೀಯರ ನಂಬಿಕೆಯಾಗಿದೆ. ಭಗವಂತನ ಹಾಗೂ ಭಕ್ತರ ಸಂಕಲ್ಪದಿಂದ ಬಸವ ಮಂದಿರ ಮಠ ಪುನರ್ ನಿರ್ಮಾಣವಾಗುತ್ತಿದೆ ಎಂದರು.ಸಾಮೂಹಿಕ ಪ್ರಯತ್ನದಿಂದ ಮಾತ್ರ ದೊಡ್ಡ ಕೆಲಸಗಳು ಕೈಗೂಡುತ್ತವೆ. ಬಸವ ತತ್ವ ಪೀಠವು ಕೇವಲ ಸರ್ಕಾರಿ ಕಟ್ಟಡ ಆಗದೆ, ಭಕ್ತರ ಸಹಕಾರದಿಂದ ಭವ್ಯ ಮಂದಿರವಾಗಿ ನಿರ್ಮಾಣವಾಗಲಿ ಎಂದರು.ಮಠಗಳು ಸಂಸ್ಕಾರ ನೀಡುವ ಪ್ರಧಾನ ಕೇಂದ್ರಗಳಾಗಿದ್ದು, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ.

ಮಠಗಳ ಜೊತೆ ಭಕ್ತರ ಭಾವನೆಗಳು ಒಂದಾದಾಗ ಮಾತ್ರ ಶ್ರೇಷ್ಠ ಶ್ರದ್ಧಾ ಕೇಂದ್ರ ರೂಪಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವ ತತ್ವ ಪೀಠದ ಬಸವ ಮರಳುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಮಠ ಭಕ್ತರಿಗೆ ಹೊರತು ಸ್ವಾಮೀಜಿಗಳದಲ್ಲ. ಮಠ ಶ್ರದ್ಧಾ ಕೇಂದ್ರ. ಇಲ್ಲಿ ಸಂಸ್ಕಾರದ ಜೊತೆ ಜೀವನದ ನೈತಿಕ ಬೋಧನೆ ಸಹ ಮಾಡಲಾಗುತ್ತದೆ. ಧರ್ಮ ಸಂಸ್ಕಾರ ಉಳಿಸಿ-ಬೆಳೆಸುವ ಕರ್ತವ್ಯ ಸ್ವಾಮೀಜಿಗಳದ್ದಾಗಿದೆ ಎಂದರು.ಭಕ್ತರಿಗೆ ಶಾಂತಿ ನೀಡುವ ತಾವಣವಾಗಿ ಮಠ ನಿರ್ಮಾಣವಾಗಬೇಕಿದೆ. ಸ್ವಾಮೀಜಿಗಳ ಅನುಕೂಲಕ್ಕೆ ಮಠ ಅಲ್ಲ. ಭಕ್ತರ ಒಳಿತಿಗಾಗಿ ಇಲ್ಲಿ ಮಠ ಕಟ್ಟಲಾಗುತ್ತಿದೆ ಎಂದರು. ಸರ್ಕಾರ ಮೂರು ಕೋಟಿ ರೂ. ನೀಡಿದ್ದು, ಭಕ್ತರ ಸಹಾಯದ ಮೂಲಕ ಉತ್ತಮ ಮಠ ನಿರ್ಮಸಲು ಯೋಚಿಸಲಾಗಿದೆ ಎಂದರು.ಮಠಗಳು ಭಕ್ತರಿಗಾಗಿಯೇ ಹೊರತು ಸ್ವಾಮೀಜಿಗಳಿಗೆ ನಿರ್ಮಾಣ ಆಗಬಾರದು. ಮಠಕ್ಕೆ ಬರುವ ವ್ಯಕ್ತಿಗೆ ಶಾಂತಿ-ಸಮಾಧಾನ ಲಭ್ಯವಾಗುವಂತೆ ಬಸವ ಮಂದಿರ ಮಠ ರೂಪಿಸಲಾಗುವುದು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!