May 16, 2024

MALNAD TV

HEART OF COFFEE CITY

ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಅವಕಾಶ ಎನ್ನುವ ಕಾನೂನನ್ನು ಜಾರಿಗೆ ತರಬೇಕು – ಉಮೇಶ್ ವನಸಿರಿ

1 min read

ಚಿಕ್ಕಮಗಳೂರು : ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಅವಕಾಶ ಎನ್ನುವ ಕಾನೂನನ್ನು ಜಾರಿಗೆ ತರಬೇಕು ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ವನಸಿರಿ ಹೇಳಿದರು.
ದುರ್ಗಾ ಫೌಂಡೇಶನ್ ಟ್ರಸ್ಟ್ ಹಾಗೂ ಅನ್ನಪೂರ್ಣೇಶ್ವರಿ ಚಾರಿಟಿ ಫೌಂಡೇಶನ್ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣವಂತರ ಮಕ್ಕಳಿಗೆ ಪ್ರಾಥಮಿಕ, ಪ್ರೌಢಶಿಕ್ಷಣಕ್ಕೆ ಖಾಸಗಿ ಶಾಲೆಯೇ ಆಗಬೇಕು. ಆದರೆ ವೈದ್ಯಕೀಯ, ಇಂಜಿನೀಯರಿAಗ್ ಇನ್ನಿತರೆ ಉನ್ನತ ಶಿಕ್ಷಣದ ಸೀಟುಗಳು ಮಾತ್ರ ಸರ್ಕಾರದ್ದೇ ಆಗಬೇಕು. ಸರ್ಕಾರಗಳು ಇದರ ಬಗ್ಗೆ ಬಹಳ ಚಿಂತನೆ ಮಾಡಿ ಒಳ್ಳೆಯ ಕಾಯ್ದೆ ತರಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಉನ್ನತ ಶಿಕ್ಷಣಗಳಲ್ಲಿ ಶೇ. 90 ರಷ್ಟು ಸೀಟುಗಳನ್ನು ಮೀಸಲಿಡಬೇಕು. ಉಳಿದ ಹತ್ತು ಭಾಗ ಮಾತ್ರ ಖಾಸಗಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ನೀಡಬೇಕು. ಖಾಸಗಿ ಶಾಲೆಗಳಲ್ಲಿ ಓದು ಓದು ಬಿಟ್ಟರೆ ಬೇರೆ ಏನೂ ಇಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಬದುಕಿನ ಪಾಠದ ಜೊತೆಗೆ ಎಲ್ಲಾ ಸಂಸ್ಕಾರಗಳನ್ನ ಬೆಳೆಸಿಕೊಂಡು ಹೋಗುತ್ತಾರೆ. ಖಾಸಗಿ ಶಾಲೆಗಳಲ್ಲಿ ಹಾಗೆ ನಡೆಯುವುದಿಲ್ಲ ಎಂದರು.
ಖಾಸಗಿ ಶಾಲೆಗಳಲ್ಲಿ ಡಿಗ್ರಿ ಫೇಲಾದವರು, ಪಿಯುಸಿ ಫೇಲಾದವರನ್ನು ಕರೆಸಿ ಪಾಠ ಮಾಡಿಸುತ್ತಾರೆ. ಒಳ್ಳೆಯ ಸೀರೆ, ಸೂಟು-ಬೂಟುಗಳನ್ನು ಹಾಕಿಕೊಂಡಿರುತ್ತಾರೆ ಅಷ್ಟೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ ಸರ್ಕಾರದ ಮಾನದಂಡಗಳನ್ನ ಪೂರೈಸಲೇ ಬೇಕಾಗುತ್ತದೆ. ಅಗತ್ಯ ಅರ್ಹತೆಗಳನ್ನು ಗಳಿಸಿರಲೇಬೇಕಾಗುತ್ತದೆ. ತರಬೇತಿ ಪಡೆದು ಎಲ್ಲಾ ಕೌಶಲ್ಯಗಳನ್ನು ಗಳಿಸಿಕೊಂಡು ಮಕ್ಕಳ ಮುಂದೆ ಬಂದು ಪಾಠ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವಂತಾಗಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿ ನೂರಕ್ಕೆ ನೂರು ಅಂಕಗಳಿಸಿದ ಮಕ್ಕಳನ್ನು ಅಭಿನಂದಿಸುವುದು ತುಂಬಾ ಸಂತೋಷದ ವಿಚಾರ. ಜಾತಿ ಸಮುದಾಯದ ಆಧಾರದಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸುವುದರಿಂದ ನಾವೇ ಮಕ್ಕಳಿಗೆ ಜಾತಿ, ಧರ್ಮದ ಬೇಧ, ಭಾವ ಬಿತ್ತಿದಂತಾಗುತ್ತದೆ. ಅದರ ಬದಲು ಯಾವುದೇ ಜಾತಿ ಜಾತಿ ಧರ್ಮದ ಮಕ್ಕಳಾಗಿದ್ದರೂ ಅವರನ್ನು ಗುರುತಿಸಿ ಎಲ್ಲರಿಗೂ ಗೌರವಿಸಬೇಕು ಎಂದರು.

ದುರ್ಗಾ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, ಪ್ರತಿಯೊಂದು ಮಕ್ಕಳಿಗೆ ಸ್ಫೂರ್ತಿ ಆಗಬೇಕು ಎನ್ನುವ ಕಾರಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಸ್ಟೆಲ್‌ಗಳಲ್ಲಿ ಓದುವ ಪ್ರತಿ ವಿದ್ಯಾರ್ಥಿಗಳು ಉತ್ತಮವಾಗಿ ಓದುವ ಮೂಲಕ ತಮ್ಮ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು. ನೂರಕ್ಕೆ ನೂರು ಅಂಕಗಳನ್ನು ಗಳಿಸಿದ ಎಷ್ಟೇ ಮಕ್ಕಳಿದ್ದರೂ ಮುಂದೆ ಪುರಸ್ಕರಿಸಲಾಗುವುದು ಎಂದರು.
ಉಪನ್ಯಾಸಕ ಕಲ್ಕಟ್ಟೆ ನಾಗರಾಜ್ ರಾವ್ ಮಾತನಾಡಿ, ಸಾಲು ಮರದ ತಿಮ್ಮಕ್ಕ ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿಡುವ ಕೆಲಸ ಮಾಡಿದ್ದಾರೆ. ಸಾಧಕರೆಲ್ಲರೂ ಸತ್ತಿದ್ದರೂ ಅವರು ನಮ್ಮ ಜೊತೆಗೆ ಸದಾ ಇರುತ್ತಾರೆ. ಸರ್ಕಾರಿ ಲೆಕ್ಕದ ಬದುಕು, ಮತ್ತೊಂದು ಸಂಸ್ಕೃತಿ ಲೆಕ್ಕದ ಬದುಕು ಎಂದು ಎರಡು ವಿಧವಿದೆ. ಹುಟ್ಟು ಸಾವಿನ ನಡುವೆ ಯಾವುದೇ ಸರ್ಟಿಫಿಕೇಟನ್ನು ಜನರು ನೀಡಲಿಲ್ಲವೆಂದರೆ ಅದು ಸರ್ಕಾರಿ ಲೆಕ್ಕದ ಬದುಕು, ಆದರೆ ಮಹನೀಯರು ಸಂಸ್ಕೃತಿಗೆ ನೀಡಿದ ಕೊಡಗೆಯಿಂದಾಗಿ ಸದಾ ಬದುಕಿರುತ್ತಾರೆ ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಕೆ.ಎಂ.ನಾಗೇಶï,ಮಾತನಾಡಿ ನನ್ನ ಪೂರ್ವಜನ್ಮದ ಕೃಪೆಯಿಂದ ಸಾಲು ಮರದ ತಿಮ್ಮಕ್ಕ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಳ್ಳುವ ಅವಕಾಶ ದೋರೆತಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರು ಇಂತಹ ದಿನಗಳಲ್ಲಿ ಶಾಲಾ ದಿನಗಳಲ್ಲಿ ಬಾಲ್ಯದಿದಲೆ ನೈತಿಕ ಶಿಕ್ಷಣ ಅವಶ್ಯಕವಾಗಿ ಬೇಕಾಗಿದೆ, ರಾಜ ಮಹಾರಾಜರ ಕಾಲದಲ್ಲಿ ಗುರುಕುಲಗಳಲ್ಲಿ ಕಾಡಿನ ಕಥೆ ಹಾಗೂ ಪ್ರಾಣಿಗಳ ಕಥೆಗಳನ್ನು ಹೇಳುವುದರ ಮೂಲಕ ನೈತಿಕತೆಯನ್ನು ಬೋಧÀನೆ ಮಾಡಲಾಗುತಿತ್ತು ಇದರಿಂದ ಸರಿ ತಪ್ಪುಗಳು, ಮನವೀಯತೆ, ಅಂತಕರಣ, ಮತ್ತೋಂದು ಜೀವಿಗಳನ್ನು ಗೌರವಿಸುವುದರ ಅರಿವಾಗುತಿತ್ತು ಎಂದರು.
ಸಾಮಾಜಿಕ ಮೀಡಿಯಾಗಳು ಎಲ್ಲಾ ವಿಷಯಗಳಲ್ಲಿ ಹಿಂದಿಕ್ಕಿ ನೈತಿಕ ಶಿಕ್ಷಣ ದೋರೆಯದಂತೆ ಮಾಡಿದೆ, ಮಕ್ಕಳು ಇಂದು ತಮಗೆ ಬೇಕಾದುದ್ದನ್ನು ತಾವೇ ಪಡೆಯುತ್ತಿದ್ದಾರೆ ಇದರಲ್ಲಿ ಮಗುವಿನ ವಯಸ್ಸಿಗೆ, ಬೌತಿಕ ಬೆಳವಣಿಗೆಗೆ ಪೂರಕವಾದ ಇದೆಯೇ ಎಂದು ಗಮಿನಿಸುವುದು ಮುಖ್ಯವಾಗಿದೆ ಎಂದರು.
ನನ್ನ 12ನೇ ವರ್ಷದ ವೃತ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತಾಳ್ಮೆ ಇಲ್ಲ, ದಿಡೀರ್ ಶ್ರೀಮಂತರಾಗುವ ಮನೋಭಿಲಾಷೆಯಿಂದ ಭ್ರಷ್ಟಾಚಾರ ಮಿತಿ ಮೀರುತ್ತಿದೆ, ನಮ್ಮ ದಿನ ನಿತ್ಯದ ಪರಿಪೂರ್ಣತೆಯನ್ನು ಪಡೆಯುವ ರೀತಿಯೆ ನಿಜವಾದ ಶಿಕ್ಷಣ, ನಮ್ಮ ಕಾರ್ಯಗಳು ಸಮಾಜಮುಖಿಯಾಗಿ ಮಾದರಿಯಾಗಿದ್ದಾಗ ಮಾತ್ರ ಸಮಾಜ ಸುಧಾರಣೆ ಮಾಡಲು ಸಾದ್ಯ ಎಂದರು
ಕಾರ್ಯಕ್ರಮವನ್ನು ವೃಕ್ಷ ಮಾತೆ, ಪರಿಸರ ರಾಯಬಾರಿ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ಚಾರಿಟಿ ಫೌಂಡೇಷನ್ ಟ್ರಸ್ಟಿ ವಿನಾಯಕ ಜಿ.ಗಾಣಿಗ, ಮೈಸೂರಿನ ಸಮಾಜ ಸೇವಕ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಸೀಮಾ ಕಿರಣ್, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಶಿವಮೊಗ್ಗ ಮಹಾ ನಗರ ಪಾಲಿಕೆ ಸದಸ್ಯೆ ಗೌರಿ ಶ್ರೀನಾಥ್ ಇತÀರರು ಇದ್ದರು. ದೀಪ ಸ್ವಾಗತಿಸಿ ರೂಪನಾಯಕ್ ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!