May 5, 2024

MALNAD TV

HEART OF COFFEE CITY

ಮರದ ಬುಡದಲ್ಲಿ ಬೆಚ್ಚಗೆ ಮಲಗಿದ್ದ 14 ಅಡಿ ಉದ್ದದ ಬೃಹತ್ ಗಂಡು ಕಾಳಿಂಗ ಸೆರೆ

1 min read

 

ಮರದ ಬುಡದಲ್ಲಿ ಬೆಚ್ಚಗೆ ಮಲಗಿದ್ದ ಸುಮಾರು 14 ಅಡಿ ಉದ್ದದ ಬೃಹತ್ ಗಂಡು ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆ ಗ್ರಾಮದಲ್ಲಿ ನಡೆದಿದೆ. ಬಾಳೆ ಗ್ರಾಮದ ಮಧು ಹಾಗೂ ಗೋವಿಂದ ಎಂಬುವರ ಮನೆ ಮುಂದೆ ಇದ್ದ ಬೃಹತ್ ಮರದ ಬುಡದಲ್ಲಿ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ವಾಸವಿತ್ತು. ಕಾಳಿಂಗ ಸರ್ಪ ಎಷ್ಟು ದಿನದಿಂದ ವಾಸವಿತ್ತೋ ಗೊತ್ತಿಲ್ಲ. ಆದರೆ ಆಗಾಗ, ಹೊರಬಂದು ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೆದರಿ ತೋಟಕ್ಕೆ ಕೆಲಸಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಕಾರ್ಮಿಕರಿಗೆ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪ ದಿಢೀರ್ ಎಂದು ತೋಟದಲ್ಲಿ ಕಣ್ಮರೆಯಾಗುತ್ತಿತ್ತು. ಇದರಿಂದ ಕಾರ್ಮಿಕರು ತೀವ್ರ ಆತಂಕಕ್ಕೀಡಾಗಿದ್ದರು. ಆದ್ರೆ, ಕಾಳಿಂಗ ಸರ್ಪ ಮರದ ಬುಡದಲ್ಲಿ ಇರುವುದನ್ನ ಖಚಿತಪಡಿಸಿಕೊಂಡು ತೋಟದ ಮಾಲೀಕರು ಸ್ಥಳಕ್ಕೆ ಸ್ನೇಕ್ ಹರೀಂದ್ರ ಅವರನ್ನ ಕರೆಸಿ ಕಾಳಿಂಗನನ್ನ ಸೆರೆ ಹಿಡಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಹರೀಂದ್ರ ಕೂಡ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಸುಮಾರು 14 ಅಡಿ ಉದ್ದದ ಕಪ್ಪಾಗಿರುವ ಬೃಹತ್ ಕಾಳಿಂಗ ಸರ್ಪವನನ್ನ ನೋಡಿ ಸ್ಥಳಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ನೇಕ್ ಹರೀಂದ್ರ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳಿಯ ಅಭಯಾರಣಕ್ಕೆ ಬಿಟ್ಟಿದ್ದಾರೆ. ಇನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚಕ್ಕೋಡು ಕಾಫಿ ತೋಟದಲ್ಲೂ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಚಕ್ಕೋಡು ಜಗದೀಶ್ ಗೌಡ ಎಂಬುವರ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ತೋಟದ ಕಾರ್ಮಿಕರಿಗೆ ಕಾಣಿಸಿಕೊಂಡಿತು, ಈಗ ಕಾಫಿ ತೋಟದಲ್ಲಿ ತೋಟದ ಕೆಲಸಗಳು ನಡೆಯುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಗಳಲ್ಲಿ ನಿರತರಾಗಿದ್ದಾಗ ಕಾಳಿಂಗ ಸರ್ಪ ಕಂಡು ಭಯಬೀತರಾದರು. ಕೂಡಲೇ ಮಾಲೀಕರಾದ ಜಗದೀಶ್ ಗೌಡರ ಸ್ನೇಕ್ ಆರೀಫ್ ಗಮನಕ್ಕೆ ತಂದರು, ಬಣಕಲ್ ಉರಗತಜ್ಞ ಆರೀಫ್ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗನ ಸೆರೆಯಿಂದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!