May 2, 2024

MALNAD TV

HEART OF COFFEE CITY

ಪೂರ್ಣಗೊಳ್ಳದ ನಾಲೆ : ಕೋಡಿ ಬಿದ್ದ ಅಯ್ಯನಕೆರೆ ನೀರಿನಿಂದ ಸಂಕಷ್ಟಕ್ಕೆ ಸಿಲುಕಿದ ರೈತ

1 min read

ಚಿಕ್ಕಮಗಳೂರು : ವರುಣನ ಕೃಪೆಯಿಂದ ಸಖರಾಯಪಟ್ಟಣ ದ ಅಯ್ಯನಕೆರೆ ಕೋಡಿ ಬಿದ್ದು ಪ್ರವಾಸಿಗಳಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದರೆ ಮತ್ತೊಂದೆಡೆ ರೈತರ ಬದುಕನ್ನು ಹಸನಾಗಿಸಬೇಕಾದ ಕೋಡಿ ಬಿದ್ದ ನೀರು ರೈತರ ಸಂಕಷ್ಟಕ್ಕೆ ಕಾರಣವಾಗಿದೆ
ಆಷಾಡ ಮಾಸದಲ್ಲಿ ವರುಣನು ವಾಡಿಕೆಯಂತೆ ಸುರಿಯುತ್ತಿದ್ದು, ಇದರಿಂದ ಜಿಲ್ಲೆಯ ಬಹಳಷ್ಟು ಕೆರೆಗಳು ತುಂಬಿ ಕೋಡಿ ಬಿದ್ದು ಹರಿಯುತ್ತಿದೆ. ಸಖರಾಯಪಟ್ಟಣದ ಅಯ್ಯನಕೆರೆಯು ಸಹ ಕೋಡಿ ಬಿದ್ದ ಬೆನ್ನಲ್ಲೇ ಅವಾಂತರವನ್ನು ಸೃಷ್ಟಿ ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದ ಬಳಿ ಕೆರೆಯ ನೀರು ನುಗ್ಗಿ ರೈತರಿಗೆ ಸಂಕಷ್ಟಕ್ಕೀಡಾಗಿದ್ದಾರೆ. ಅಯ್ಯನಕೆರೆ ಅಚ್ಚುಕಟ್ಟು ಪ್ರದೇಶಗಲ್ಲಿ ನಾಲೆಯ ಕಾಮಗಾರಿಗಳು ಪೂರ್ಣಗೊಂಡಿಲ್ಲದೆ ಹಿನ್ನೆಲೆ ನಾಲೆಯ ದಂಡೆಯ ಪಕ್ಕದ ಜಮೀನುಗಳಿಗೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಕೋಡಿ ಬಿದ್ದ ನೀರು ನುಗ್ಗಿದೆ. ಇದರಿಂದ ಅಡಿಕೆ ತೋಟದಲ್ಲಿ ನಾಲ್ಕೈದು ಅಡಿಗಳಿಗು ಹೆಚ್ಚು ನೀರು ನಿಂತ್ತಿದ್ದು, ರೈತರು ಕಣ್ಣಿರು ಹಾಕುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಮಳೆಯೊಂದಿಗೆ ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಉದ್ದೇಬೋರನಹಳ್ಳಿ – ಬಿಳೇಕಲ್ಲಹಳ್ಳಿ ರಸ್ತೆಯ ಪಕ್ಕದಲ್ಲಿದ್ದ ಬೃಹತ್ತಾದ ಅರಳಿ ಮರ ಧರೆಗೆ ಉರುಳಿದೆ. ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಮರ ಬಿದ್ದು ಎರಡು ದಿನಗಳು ಕಳೆಯುತ್ತಿದ್ದರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವುಗೊಳಿಸದೆ ಇರುವುದರಿಂದ ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!