May 18, 2024

MALNAD TV

HEART OF COFFEE CITY

ಜಿಲ್ಲೆಯಲ್ಲಿ 4ನೇ ಜಾನಪದ ಸಮ್ಮೇಳ

1 min read

ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಘಟಕದಿಂದ ಜಿಲ್ಲಾ ಮಟ್ಟದ 4ನೇ ಜಾನಪದ ಸಮ್ಮೇಳನವನ್ನು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದ ವರೆಗೆ ಜಾನಪದ ನೃತ್ಯದ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಪೂರ್ಣಕುಂಭ ಸ್ವಾಗತದೊಂದಿಗೆ ಮಹಿಳೆಯರು ಜಾನಪದ ಸಮ್ಮೇಳನದ ಅಧ್ಯಕ್ಷರನ್ನ ಸ್ವಾಗತಿಸಿದರು. ಮೆರವಣಿಗೆಯಲ್ಲಿ ಜಾನಪದ ಸಾಂಪ್ರಾದಾಯಿಕ ಕಲಾ ಪ್ರಕಾರಗಳಾದ ದೊಡ್ಡ ಗೊಂಬೆಯಾಟ, ವೀರಗಾಸೆ, ಡೊಳ್ಳು ಕುಣಿತ, ಭಜನೆ, ಕಂಸಾಳೆ, ತಮಟೆ ವಾದ್ಯ, ಕೋಲಾಟ ನೃತ್ಯ ಸೇರಿದಂತೆ ಹಲವಾರು ರೀತಿಯ ಜಾನಪದ ನೃತ್ಯಗಳನ್ನೂ ಪ್ರದರ್ಶಿಸುವ ಮೂಲಕ ನೆರೆದಿದ್ದ ಜನರನ್ನ ಮನೋರಂಜಿಸಿದರು.
ಅಷ್ಟೇ ಅಲ್ಲದೆ ಕಲಾಮಂದಿರದಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಜಾನಪದ ದಿನಬಳಕೆ ವಸ್ತುಗಳ ಪ್ರದರ್ಶನದಲ್ಲಿ ಹಳೆ ಕಾಲದ ದೀಪಗಳು, ಊದುಬತ್ತಿ ಬಟ್ಟಲು, ತಕ್ಕಡಿ, ಪಂಚದಾರತಿ ಭಟ್ಟಲು, ಪೀಕ್ ಸನ್ನೆ, ಬೀಸೋ ಕಲ್ಲು, ಹಸೆಮಣೆ, ಕೇಲ್ ಕಂಬ, ಮರುಗಲು, ಕೊಳಗ, ಕಳಸ ಸೇರಿದಂತೆ ಮತ್ತಿತರ ಆಕರ್ಷಕ ವಸ್ತುಗಳು ನೋಡುಗರ ಕಣ್ಮನ ಸೆಳೆದವು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!