April 29, 2024

MALNAD TV

HEART OF COFFEE CITY

ಮಗಳನ್ನು ದಂಧೆಗೆ ದೂಡಿದ್ದ ಪಾಪಿ ತಾಯಿಗೆ 20 ವರ್ಷ ಜೈಲು 25 ಸಾವಿರ ದಂಡ

1 min read

 

 

ಶೃಂಗೇರಿ ಫೋಕ್ಸೋ ಪ್ರಕರಣದಲ್ಲಿ ತಪ್ಪಿತಸ್ತರೆಂದು ಸಾಬೀತಾಗಿದ್ದ ನಾಲ್ವರು ಅಪರಾಧಿಗಳಿಗೆ 20-22 ವರ್ಷ ಜೈಲು ಶಿಕ್ಷೆ ತಲಾ 25 ಸಾವಿರ ದಂಡ ವಿಧಿಸಿ ಚಿಕ್ಕಮಗಳೂರು ತ್ವರಿತಗತಿ ಕೋರ್ಟ್ ತೀರ್ಪು ನೀಡಿದೆ. ಇದರೊಂದಿಗೆ ಮಗಳನ್ನು ವೇಶ್ಯೆ ಮಾಡಿದ ತಾಯಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾಳೆ .

 

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶೃಂಗೇರಿ ಪೋಕ್ಸೋ ಕೇಸ್ ನಲ್ಲಿ ಅಪರಾಧಿ ಗಳೆಂದು ಸಾಬೀತಾಗಿದ್ದ ನಾಲ್ವರಿಗೆ ಚಿಕ್ಕಮಗಳೂರು ಶೀಘ್ರಗತಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ನಾಲ್ವರಿಗೂ ತಲಾ 25 ಸಾವಿರ ದಂಡ ಹಾಗೂ 20 ವರ್ಷ ಶಿಕ್ಷೆ ವಿಧಿಸಿದೆ.

ಬಾಲಕಿ ತಾಯಿ ಗೀತಾ, ಗಿರೀಶ್ , ದೇವಿಶರಣ್ ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಘೋಷಿಸಲಾಗಿದೆ.

ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 22 ವರ್ಷಗಳ ಕಠಿಣ ಜೈಲು ಶಿಕ್ಷೆಯ ಆದೇಶ ನೀಡಲಾಗಿದೆ.

ಅಪ್ರಾಪ್ತ ಮಗಳನ್ನ ತಾಯಿಯೇ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣ ದಲ್ಲಿ 39 ಎಫ್.ಐ.ಆರ್ ದಾಖಲಿಸಿ 53 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು.

ಮೂರು ವರ್ಷಗಳ ಹಿಂದೆ ಶೃಂಗೇರಿ ಯಲ್ಲಿ ನಡೆದಿದ್ದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು, 2020 ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಬಾಲಕಿಗೆ ಬ್ಲಾಕ್ ಮೇಲೆ ಮಾಡಿ ಅತ್ಯಾಚಾರ ನಡೆಸಲಾಗಿತ್ತು, 2021ರ ಜನವರಿ 27 ರಂದು ಪ್ರಕರಣ ದಾಖಲಾಗಿತ್ತು ನೂರಾರು ಜನರ ವಿಚಾರಣೆ ನಡೆದು

 

ಒಟ್ಟು 53 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು, ಕಳೆದ ನಾಲ್ಕು ದಿನಗಳ ಹಿಂದೆ ನಾಲ್ಕು ಜನರ ಮೇಲಿನ ಅಪರಾಧವನ್ನ ಚಿಕ್ಕಮಗಳೂರು ತ್ವರಿತಗತಿ ನ್ಯಾಯಾಲಯದಲ್ಲಿ ಸಾಬೀತು ಆಗಿತ್ತು, ಇದೇ ಪಗರಕರಣದಲ್ಲಿ ಉಳಿದ 49 ಜನರನ್ನು ಪ್ರಕರಣದಿಂದ ಕೋರ್ಟ್ ಖುಲಾಸೆ‌ಗೊಳಿಸಿತ್ತು.

ಈ ಪ್ರಕರಣದಲ್ಲಿ 38 ವಿವಿಧ ರೀತಿಯ ಚಾರ್ಜ್ ಶೀಟ್ ಗಳನ್ನು ಶೃಂಗೇರಿ ಪೊಲೀಸರು ಸಲ್ಲಿಸಿದ್ದರು. ತ್ವರಿತಗತಿ ಕೋರ್ಟ್ ನ

ನ್ಯಾಯಮೂರ್ತಿ ಶಾಂತಣ್ಣ ಆಳ್ವ ಇಂದು ತೀರ್ಪು ಪ್ರಕಟಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!