April 30, 2024

MALNAD TV

HEART OF COFFEE CITY

12 ವೀಲರ್ ಭಾರೀ ಲಾರಿ ಸಿಲುಕಿ ಚಾರ್ಮಾಡಿ ಘಾಟ್ ಅಸ್ತವ್ಯಸ್ತ

1 min read

 

ಭಾರೀ ವಾಹನಗಳ ನಿಷೇಧವಿದ್ದರೂ ಚಾರ್ಮಾಡಿ ಘಾಟಿಯಲ್ಲಿ 12 ವೀಲರ್ ಲಾರಿಗಳ ಸಂಚಾರ ಮಾತ್ರ ನಿಂತಿಲ್ಲ, ತಿರುವು ರಸ್ತೆಯಲ್ಲಿ ಹೋಗಲಾಗದೆ ಸರಕು ಸಾಗಣೆ ಲಾರಿಯೊಂದು ಘಾಟಿಯಲ್ಲಿ ಸಿಲುಕಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.

ಚಾರ್ಮಾಡಿ ಘಾಟಿಯಲ್ಲಿ ಮತ್ತೊಮ್ಮೆ 12 ಚಕ್ರದ ಲಾರಿ ಲಾಕ್ ಆಗಿದೆ. ಘಾಟಿಯ ತಿರುವಿನಲ್ಲಿ ಟರ್ನ್ ಆಗದೇ 12 ಚಕ್ರದ ಲಾರಿ ನಿಂತಿದ್ದು, ಬೆಳಗ್ಗೆಯಿಂದ ಚಾರ್ಮಾಡಿ ಘಾಟಯಲ್ಲಿ ವಾಹನ ಸವಾರರ ಪರದಾಡುವಂತಾಗಿದೆ. ಘಾಟಿಯ 2ನೇ ತಿರುವಿನಲ್ಲಿ ಘಟನೆ ನಡೆದಿದ್ದು
ಬಳ್ಳಾರಿಯಿಂದ ಮಂಗಳೂರಿಗೆ ಸರಕು ಸಾಗಿಸಲು ತೆರಳುತ್ತಿದ್ದ 12 ಚಕ್ರದ ಲಾರಿ ಸಿಲುಕಿಕೊಂಡಿದೆ.
ಚಾರ್ಮಾಡಿಯಲ್ಲಿ ಭಾರೀ ವಾಹನಗಳಿಗೆ ನಿಷೇದವಿದ್ದರೂ ಈ ಲಾರಿ ಸಂಚಾರ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಕೊಟ್ಟಿಗೆಹಾರ ಬಳಿ ಚೆಕ್ ಪೋಸ್ಟ್ ಇದ್ದರೂ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೂಡಾ ಕೇಳಿ ಬಂದಿದೆ. ಕಳೆದ ಕೆಲ ಗಂಟೆಗಳಿಂದ ತಿರುವಿನಲ್ಲಿ ಸಿಲುಕಿ ಮುಂದೆ ಹೋಗಲಾಗದೆ ಲಾರಿ ಲಾಕ್ ಅಗಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿ ಘಾಟಿಯಲ್ಲಿ ನಿತ್ಯ ಈ ಸಮಸ್ಯೆ ಮರುಕಳಿಸುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!