May 5, 2024

MALNAD TV

HEART OF COFFEE CITY

ಯುವ ಜನತೆ ದೇಶದ ಭವಿಷ್ಯ ರೂಪಿಸುವ ರೂವಾರಿಗಳು

1 min read

ಚಿಕ್ಕಮಗಳೂರು-ಯುವ ಜನತೆ ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಯುವಶಕ್ತಿ ಸಾಮಾಜಿಕ ಚಿಂತನೆ ಹಾಗೂ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ನಗರದ ಐಡಿಎಸ್‍ಜಿ ಸರ್ಕಾರಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಉದ್ಯೋಗ ಮಾಹಿತಿ ಕೇಂದ್ರ ಯುವ ರೆಡ್‍ಕ್ರಾಸ್ ಘಟಕ ಚಿಕ್ಕಮಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ. ದೇಶದ ಸಮಗ್ರ ಅಭಿವೃದ್ಧಿ ಆಶಯ ಅಡಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಒದಗಿಸುವುದರ ಜತೆಗೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೂಲಕ ಯಾರು ಯಾವ ಕಾರ್ಯಗಳನ್ನು ಮಾಡಬೇಕು ಎಂಬುದು ಇದರಲ್ಲಿ ಅಡಗಿದೆ ಸಂವಿಧಾನ ಅಧ್ಯಯದ ಇದರಲ್ಲಿನ ಪ್ರತಿಯೊಂದು ಅಂಗಳನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಭಾರತ ಪ್ರಜಾಪ್ರಭುತ್ವ ಸಂಸದೀಯ ಒಕ್ಕೂಟ ಆಡಳಿತ ವ್ಯವಸ್ಥೆ ಹೊಂದಿದೆ. ಇಲ್ಲಿ ಜನರೇ ಪ್ರಭುಗಳು, ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ. ಶಾಸನಗಳನ್ನು ರೂಪಿಸುವ ಕೆಲಸವನ್ನು ಶಾಸಕಾಂಗ ಮಾಡಿದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಕಾರ್ಯಾಂಗದ ಮೇಲಿರುತ್ತದೆ ಇನ್ನು ನ್ಯಾಯಾಂಗ ಸ್ವತಂತ್ರವಾಗಿ ಯಾರ ಅಧೀನಕ್ಕೂ ಒಳಗಾಗದೆ ರೂಪಿತವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷಿಸುವ ಕೆಲಸ ಮಾಡುತ್ತದೆ. ಈ ಮೂಲಕ ಸಂವಿಧಾನದ ಅಡಿಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿದೆ ಎಂದರು.

ಭಾರತ ಜಾತ್ಯಾತೀತ ರಾಷ್ಟ್ರ. ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸರ್ವರಿಗೂ ಸಮಾನ ಸ್ವಾತಂತ್ರ್ಯವನ್ನು ನೀಡಿದೆ, ಆದ್ದರಿಂದಲೇ ಇಂದು ಯಾವ ಹಂತದ ವ್ಯಕ್ತಿಯಾದರೂ ಉನ್ನತ ಮಟ್ಟಕೇರಲು ಸಾಧ್ಯವಾಗಿದೆ. ದೇಶದಲ್ಲಿ ಹೊಸ ಯೋಜನೆಗಳು ರೂಪಿಸಲು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ಅಂತರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಬಗ್ಗೆ ಸಂಸದೀಯ ವ್ಯವಸ್ಥೆ ಕಾರಣೀಭೂತವಾಗಿದೆ ಎಂದರು
ಯಾವುದೇ ಹೊಸ ಕಾಯ್ದೆ, ಮಸೂದೆಗಳು ಜಾರಿಗೊಳಿಸುವ ಮುನ್ನ ಲೋಕಸಭೆಯಲ್ಲಿ ಚರ್ಚೆ ಮೂಲಕ ಮಂಡನೆಗೆ ಒಳಪಡುತ್ತದೆ ಬಳಿಕ ರಾಜ್ಯ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ರಾಷ್ಟ್ರಪತಿ ಅಂಕಿತದ ಮೂಲಕ ಶಾಸನಗಳಾಗಿ ರೂಪುಗೊಳ್ಳುತ್ತದೆ. ಸಂ¸ದೀಯ ವ್ಯವಸ್ಥೆಯಲ್ಲಿ ಕೇಂದ್ರಪಟ್ಟಿ, ರಾಜ್ಯಪಟ್ಟಿ, ಸಮವರ್ತಿ ಪಟ್ಟಿಗಳಿದ್ದು ತಮ್ಮದೇ ಆದ ಕಾರ್ಯಗಳನ್ನು ನಿಭಾಯಿಸುತ್ತದೆ ಎಂದು ಮಾಹಿತಿ ನೀಡಿದರು.

ಯುವಜನತೆಯೇ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ. ಯುವಜನತೆ ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು, ಅದಕ್ಕಾಗಿ ಸಂಸ್ಕಾರದ ಜತೆಗೆ ನಾಯಕತ್ವಗುಣವನ್ನು ಬೆಳೆಸಿಕೊಳ್ಳಬೇಕು. ಯುವಜನತೆ ಆತ್ಮಪೂರ್ವಕವಾಗಿ ಶಕ್ತಿಯನ್ನು ಒಗ್ಗೂಡಿಸಿದಲ್ಲಿ ಉತ್ತಮ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಹುರಿದುಂಬಿಸಿದರು.
ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಆಯೋಜನೆ ಮುಂದೆ ಉತ್ತಮ ದೇಶ ಕಟ್ಟಲು ಯುವಜನತೆಗೆ ದಾರಿದೀಪವಾಗಲಿದೆ, ಆಡಳಿತ ವೈಖರಿ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ಹೊಂದಿದ ಮಹನೀಯರ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಈ ಮೂಲಕ ತಮ್ಮಲ್ಲಿನ ಬೌದ್ಧಿಕ ಸಾಮರ್ಥವನ್ನು ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದರು .
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯೋಗ ನಿಮಿತ್ತಂ ಸಂಸ್ಥೆ ಸಂಸ್ಥಾಪಕ ಅಚ್ಯುತಾನಂದ ಎಸ್. ಐಡಿಎಸ್‍ಜಿ ಕಾಲೇಜು ಉದ್ಯೋಗ ಮಾಹಿತಿ ಕೇಂದ್ರ ಸಂಚಾಲಕರು ಕಿರಣ್ಮಯಿನಾಗವಂದ, ಯೂತ್ ರೆಡ್ ಕ್ರಾಸ್ ಘಟಕದ ಸಂಚಾಲಕ ಪುಟ್ಟಸ್ವಾಮಿ, ಎನ್.ಎಸ್,ಎಸ್ ಘಟಕ 1 ರ0 ಅಧಿಕಾರಿ ಸತೀಶ್ ಈ, ಮತ್ತು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್‍ಚೌವರೆ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!