May 2, 2024

MALNAD TV

HEART OF COFFEE CITY

ವಿಶ್ವ ಮಾನವ ದಿನಾಚರಣೆ

1 min read

ಚಿಕ್ಕಮಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬಸವನಹಳ್ಳಿ ಬಾಲಿಕ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಹದಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಹಾಗೂ ಜಲಗಾರ ನಾಟಕ ಪ್ರದರ್ಶನ ನಡೆಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನ ವಿಜ್ಞಾನ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಸಂಸ್ಕಾರಗಳು ಲೋಪವಾದ್ರೆ ಸಮಾಜ ಅಧ:ಪತನವಾಗುತ್ತದೆ. ಒಂದು ಉತ್ತಮ ಬದುಕಿಗಾಗಿ ಪೂರ್ಣತ್ವದ ಕಡೆಗೆ ಮುಖ ಮಾಡಬೇಕಾಗಿದೆ ನಮ್ಮ ಮನಸ್ಸು ಬಹುತ್ವದ ಕಡೆಗೆ ತಿರುಗಬೇಕಾಗುತ್ತದೆ. ಬಹುತ್ವದ ಬುನಾದಿಯೇ ಕುವೆಂಪು ಅವರ ವಿಶ್ವಮಾನವ ಸಂದೇಶದ ಆಶಯವಾಗಿದೆ ಎಂದು ಹೇಳಿದರು.

ಈ ಜಗತ್ತು ಒಂದು ಹಿಡಿಯಾಗಿ ವಿಶ್ವಮಾನವತ್ವದ ಕಡೆಗೆ ಮುಖಮಾಡದೆ ಹೋದರೆ ಶಾಂತಿ, ಸಮೃದ್ಧಿ, ಸಹಕಾರ ಸಹಭಾಳ್ವೆಗೆ ಅರ್ಥ ದೊರೆಯುವುದಿಲ್ಲ. ಒಂದು ಪ್ರಜ್ಞೆ ಮತ್ತು ಪರಂಪರೆಯೊಂದಿಗೆ ಅರಳಬೇಕಾದರೆ ವೈಚಾರಿಕ ಜಗತ್ತನ್ನು ಬೆಳಸಬೇಕಾದರೆ ಕುವೆಂಪು ಸಾಹಿತ್ಯ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಡಯಟ್ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಲತಾ ಉದ್ಘಾಟನೆ ಮಾಡಿದರು. ಈ ವೇಳೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಸ್ಲೇಹಳ್ಳಿ ಸೋಮಶೇಖರ್ ಅವರನ್ನು ಸನ್ಮಾನಿಸಿದರು.

 

ಬಸವನಹಳ್ಳಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕುಮಾರಸ್ವಾಮಿ ಉಪನ್ಯಾಸ ನಿಡಿದರು. ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ದಯಾನಂದ, ಉಪ ಪ್ರಾಂಶುಪಲರಾದ ಚಂದ್ರಮ್ಮ, ಭದ್ರೇಗೌಡ, ಪರಮೇಶ್, ವೆಂಕಟೇಶ್, ಬೈರೇಗೌಡ, ಹಿರೇಗೌಜ ಶಿವಕುಮಾರ್ ಹೆಚ್.ಎಸ್ ಇದ್ದರು. ಶಣ್ಮುಖಪ್ಪ ಸ್ವಾಗತಿಸಿ, ರಂಗಣ್ಣ ವಂದಿಸಿದರು.ಕಾಲೇಜಿನ ಉಪನ್ಯಾಸಕಿ ಹಾಗೂ ಕೆಜೆವಿಎಸ್ ಜಿಲ್ಲಾ ಸಂಚಾಲಕಿ ಅನಿತಾ ನಿರೂಪಿಸಿ, ನಿರ್ದೇಶಿಸಿದ ಜಲಗಾರ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!