May 7, 2024

MALNAD TV

HEART OF COFFEE CITY

“ನಮ್ಮವರು ದುರ್ವರ್ತನೆ ತೋರಿಲ್ಲ, ನಿಯಮಗಳಡಿ ಬಂಧಿಸಿದ್ದಾರೆ ಎಸ್ಪಿ ಸ್ಪಷ್ಟನೆ”

1 min read

ಚಿಕ್ಕಮಗಳೂರು. ನಮ್ಮ ಊರಿಗೆ ಬಾರ್ ಬೇಡ ಎಂದು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸುವಾಗ ನಾವೇ ಅವರಿಗೆ ಬಂದೋಬಸ್ತ್ ನೀಡಿದ್ದೇವು. ಆದರೆ, ಕಾನೂನನ್ನ ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಕಾನೂನನ್ನ ಕೈಗೆತ್ತಿಕೊಂಡು ಬಾರ್ ದ್ವಂಸಗೊಳಿಸಿದ್ದಕ್ಕೆ ಅವರನ್ನ ಅರೆಸ್ಟ್ ಮಾಡಿದ್ದೇವೆ. ಆದರೆ, ಬಂಧಿಸುವ ವೇಳೆ ನಮ್ಮ ಪೊಲೀಸರು ದುರ್ವರ್ತನೆ ತೋರಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಬೆಳ್ಳಂಬೆಳಗ್ಗೆಯೇ ಮನೆಗೆ ಬಂದು ಬಾಗಿಲು ಮುರಿದು, ಹೆಂಚುಗಳನ್ನ ಪುಡಿ ಮಾಡಿ ಗೂಂಡಾಗಳಂತೆ ಮನೆಯಲ್ಲಿದ್ದವರನ್ನ ಬಂಧಿಸಿದ್ದಾರೆ ಎಂದು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದ ಜನ ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ಅಕ್ಷಯ್, ಅವರು ಕಳೆದ ಒಂದೂವರೆ ತಿಂಗಳಿಂದಲೂ ಬಾರ್ ಬೇಡ ಎಂದು ಪ್ರತಿಭಟನೆ ನಡೆಸುತ್ತಿದ್ದರು. ಆಗ ನಾವೇ ಅವರಿಗೆ ಬಂದೋಬಸ್ತ್ ನೀಡಿದ್ದೇವು. ಅವರು ಚಿಕ್ಕಮಗಳೂರಿಗೂ ಬಂದು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರು. ಆದರೆ, ನೂತನ ಬಾರ್ ದಾಖಲೆ ಎಲ್ಲಾ ಸರಿ ಇದ್ದ ಕಾರಣ ಬಾರ್ ಮಾಲೀಕರು ಬಾರ್ ಓಪನ್ ಮಾಡಿದ್ದರು. ಕಳೆದ ಎರಡು ದಿನಗಳ ಹಿಂದೆ ಸುಮಾರು 30ಕ್ಕೂ ಹೆಚ್ಚು ಜನ ಬಾರ್ ಅಂಡ್ ರೆಸ್ಟೋರೆಂಟ್‍ಗೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ, ಬಾರ್‍ನಲ್ಲಿದ್ದ ಪೀಠೋಪಕರಣಗಳನ್ನ ದ್ವಂಸ ಮಾಡಿದ್ದರು.

 

“ನಮ್ಮವರು ದುರ್ವರ್ತನೆ ತೋರಿಲ್ಲ, ನಿಯಮಗಳಡಿ ಬಂಧಿಸಿದ್ದಾರೆ ಎಸ್ಪಿ ಸ್ಪಷ್ಟನೆ”

 

ಕಾನೂನನ್ನ ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಬಾರ್ ದ್ವಂಸಗೊಳಿಸಿದ್ದಕ್ಕೆ ಬಾರ್ ಮಾಲೀಕ ಕಡೂರು ಠಾಣೆಯಲ್ಲಿ ದೂರು ನೀಡಿದ್ದರು. ಅವರು ಬಾರ್‍ಗೆ ನುಗ್ಗಿ ಮಾಡಿದ ದಂಧಾಲೆಯ ಎಲ್ಲಾ ವಿಡಿಯೋಗಳು ಇದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿದ್ದವರನ್ನ ಗುರುತಿಸಿ ಇಂದು ಕಡೂರು ಪೊಲೀಸರು ಅವರನ್ನ ಬಂಧಿಸಿ ಕರೆತಂದಿದ್ದಾರೆ. ಪೊಲೀಸರು ಬಂಧಿಸಿದ್ದ ಒಟ್ಟು ಏಳು ಜನರಲ್ಲಿ ಐವರ ಮೇಲೆ ಮಾತ್ರ ಕೇಸ್ ದಾಖಲಿಸಲಾಗಿದೆ. ಉಳಿದ ಇಬ್ಬರನ್ನ ಬಿಟ್ಟಿದ್ದಾರೆ. ವಿಚಾರಣೆ ವೇಳೆ ಒಂದೇ ಹೆಸರಿನವರಾಗಿದ್ದ ಕಾರಣ ಗಲಾಟೆಯಲ್ಲಿ ಅವರು ಇರಲಿಲ್ಲ ಎಂದು ಇಬ್ಬರನ್ನ ಬಿಟ್ಟಿದ್ದಾರೆ. ಅವರನ್ನ ಬಂಧಿಸಿ ಕರೆತರುವಾಗಲೂ ನಮ್ಮ ಪೊಲೀಸರು ದುರ್ವರ್ತನೆ ತೋರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದ ಜನ ಪೊಲೀಸರು ಬೆಳ್ಳಂಬೆಳಗ್ಗೆಯೇ ಬಂದು ಗೂಂಡಾಗಳಂತೆ ಮನೆಯ ಬಾಗಿಲು ಮುರಿದು, ಹೆಂಚುಗಳನ್ನ ಪುಡಿ ಮಾಡಿ ಹಲ್ಲೆ ಮಾಡಿ ಮನೆಯಲ್ಲಿದ್ದವರನ್ನ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದರು. ಸಬ್ ಇನ್ಸ್‍ಪೆಕ್ಟರ್ ಅವರೇ ನಿಂತು ಕದವನ್ನ ಮುರಿಯಿರಿ ಎಂದು ಹೇಳಿದ್ದರು. ಪೊಲೀಸರು ಬೂಟು ಕಾಲಿನಲ್ಲಿ ಒದ್ದು ಕದವನ್ನ ಮುರಿದಿದ್ದಾರೆ ಎಂದು ಹಳ್ಳಿ ಜನ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!