May 17, 2024

MALNAD TV

HEART OF COFFEE CITY

ದಸರಾದಂದು ದೀಕ್ಷೆ ಪಡೆದ ಅಂಬೇಡ್ಕರ್‍ರವರ ದೀಕ್ಷಾ ಭೂಮಿ ದರ್ಶನಕ್ಕೆ ಹೊರಟ 140 ಜನ ಕಾಫಿನಾಡಿಗರು

1 min read

 

 

ಚಿಕ್ಕಮಗಳೂರು : ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಆರು ಲಕ್ಷ ಅನುಯಾಯಿಗಳ ಜೊತೆ ದಸರಾ ದಿನದಂದು ದೀಕ್ಷೆ ಪಡೆದ ಪುಣ್ಯಸ್ಥಳ ನಾಗ್ಪುರಕ್ಕೆ ಚಿಕ್ಕಮಗಳೂರಿನಿಂದ 140 ಜನ ಪುಣ್ಯ ಸ್ಥಳದ ವೀಕ್ಷಣೆಗೆ ಹೊರಟಿದ್ದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಯಾತ್ರಾರ್ಥಿಗಳಿಗೆ ಶುಭಕೋರಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕ ಸಿ.ಟಿ.ರವಿ, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚಧಾಮಗಳನ್ನ ಪಂಚತೀರ್ಥಗಳು ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿಯವರು ಕರೆದು ಆ ಪಂಚತೀರ್ಥಗಳ ಅಭಿವೃದ್ಧಿಗೆ ವಿಶೇಷವಾದ ಯೋಜನೆಯನ್ನ ರೂಪಿಸಿದ್ದಾರೆ. ಅದರಲ್ಲಿ ಮೊದಲನೆಯದ್ದು ಮಧ್ಯಪ್ರದೇಶದ ಮಹುಹಾ ಗ್ರಾಮ. ಅದು ಅವರ ಜನ್ಮಸ್ಥಳ. ಅದನ್ನ ಗುರುತಿಸಿ ಅದನ್ನ ತೀರ್ಥಕ್ಷೇತ್ರವನ್ನಾಗಿಸುವ ಕೆಲಸವನ್ನ ಮಧ್ಯಪ್ರದೇಶ ಹಾಗೂ ಭಾರತ ಸರ್ಕಾರ ಮಾಡಿದೆ ಎಂದರು. ಎರಡನೇಯದ್ದು ಅವರ ಕರ್ಮಭೂಮಿ ನಾಗ್ಪುರ. ಅದು ಅವರ ದೀಕ್ಷಾ ಭೂಮಿ-ಕರ್ಮ ಭೂಮಿ ಎರಡೂ ಹೌದು ಎಂದರು.

ನಾಗ್ಪುರದಲ್ಲಿ ಇದ್ದ ಸ್ಮಾರಕಕ್ಕೆ ಮತ್ತಷ್ಟು ವಿಶೇಷ ಅನುದಾನ ನೀಡಿ ಅದರ ಕೆಲಸವೂ ನಡೆಯುತ್ತಿದೆ. ಅಲ್ಲಿ ಅಂಬೇಡ್ಕರ್ ಹೆಸರಲ್ಲಿ ಕಾಲೇಜು ಕೂಡ ಇದೆ ಎಂದರು. ಹೀಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಂಬೇಡ್ಕರ್ ಸಂಬಂಧಿಸಿದ ಪಂಚತೀರ್ಥಗಳ ಬಗ್ಗೆ ಮಾಹಿತಿ ನೀಡಿ, ಅವರು ದೀಕ್ಷೆ ಪಡೆದ ಸ್ಥಳ ಇಂದು ಎಲ್ಲರಿಗೂ ಪವಿತ್ರ ಸ್ಥಾನವಾಗಿದೆ. ಆ ಪುಣ್ಯ ಸ್ಥಳಕ್ಕೆ ಹೋಗಿ ಬರುವುದು ಯಾತ್ರೆ ರೀತಿ ಆಗಿದೆ ಎಂದರು. ಅಂತಹಾ ಪವಿತ್ರ ದೀಕ್ಷಾ ಭೂಮಿಗೆ ನಮ್ಮ ಚಿಕ್ಕಮಗಳೂರು ಜಿಲ್ಲೆಯಿಂದ 140 ಜನ ಹೊರಟಿದ್ದಾರೆ. ಅದರಲ್ಲಿ 100 ಜನ ಚಿಕ್ಕಮಗಳೂರಿನವರು. 40 ಜನ ಕಡೂರು, ತರೀಕೆರೆ, ಅಜ್ಜಂಪುರದಿಂದ ಹೋಗುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಹೊರಟಿರುವ ನೂರು ಜನರ ಬಸ್‍ಗೆ ಸಿ.ಟಿ.ರವಿ ಚಾಲನೆ ನೀಡಿ ಶುಭಕೋರಿದ್ದಾರೆ. ಇದೇ ವೇಳೆ ಮಾತನಾಡಿದ ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಎಲ್ಲರೂ ಸುಖವಾಗಿ ಕ್ಷೇಮವಾಗಿ ಬನ್ನಿ ಎಂದು ಹಾರೈಸಿದರು. ಕಳೆದ ವರ್ಷ ಸರ್ಕಾರಿ ಕೆಂಪು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ, ಈ ವರ್ಷ ತುಂಬಾ ದೂರದ ಪ್ರಯಾಣ ಎಂದು ಲಕ್ಸುರಿ ಬಸ್ಸಿನಲ್ಲಿ ಹೊರಟಿದ್ದಾರೆ. ಹಾಗಾಗಿ, ಯಾತ್ರಾರ್ಥಿಗಳು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾರಿ ಯಾತ್ರೆಗೆ 20 ಮಹಿಳೆಯರು ಹೊರಟಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ರೂಪ ಸಮಾಜ ಕಲ್ಯಾಣ ಅಧಿಕಾರಿ ಚೈತ್ರ ತಾಲೂಕು ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!