May 18, 2024

MALNAD TV

HEART OF COFFEE CITY

ಬಿಜೆಪಿ ಪಕ್ಷದಿಂದ ವೇಣುಗೋಪಾಲ್ ಅಮಾನತು

1 min read

ಚಿಕ್ಕಮಗಳೂರು: ಪಕ್ಷದ ತೀರ್ಮಾನಗಳನ್ನು ಪದೇ ಪದೇ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡು, ಪಕ್ಷದ ಘನತೆಗೆ ಧಕ್ಕೆ ಉಂಟುಮಾಡಿದ್ದಕೆ ನಗರಸಭೆ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷವು ಆಂತರಿಕವಾಗಿ ಒಡಂಬಡಿಕೆಯನ್ನು ಮಾಡಿಕೊಂಡಿತ್ತು . ಆ ಒಡಂಬಡಿಕೆಯ ಪ್ರಕಾರ ಅವರು ರಾಜೀನಾಮೆಯನ್ನು ಕೊಡಬೇಕಾಗಿತ್ತು ಹಾಗೂ ಪಕ್ಷದ ಹಲವು ಸೂಚನೆಗಳನ್ನು ಪಾಲನೆ ಮಾಡದೆ ಪಕ್ಷಕ್ಕೆ ಮುಜುಗರ ತಂದ ಪರಿಣಾಮವಾಗಿ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದರು.

ಈ ಸಮಯದಿಂದ ಪಕ್ಷಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಸಿಟಿ ರವಿ ಅವರ ಜೊತೆ ಕೂತು ಚರ್ಚೆಯನ್ನ ಮಾಡಿದರೂ ಸಹ ಅವರ ಮಾತಿಗೆ ಬೆಲೆ ಕೊಡಲಿಲ್ಲ. ಸಿ ಟಿ ರವಿ ಅವರು ಕೂಡ ಅವರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ವೇಣುಗೋಪಾಲ್ ಅವರ ಈ ನಡೆಯನ್ನ ಎಲ್ಲಾ ಜಿಲ್ಲಾ ನಾಯಕರುಗಳು ಕೂಡ ಪ್ರಶ್ನಾರ್ಥಕವಾಗಿ ನೋಡುತ್ತಿದ್ದಾರೆ. ಏಕೆಂದರೆ ಇವರನ್ನು ಪಕ್ಷದ ಕಟ್ಟಾಳು ಎಂದು ಎಲ್ಲರೂ ನಂಬಿದ್ದೆವು. ಅವರು ಸ್ವಾರ್ಥಕ್ಕಾಗಿ ಇದ್ದರೂ ಎಂದು ಅವರ ಈ ನಡವಳಿಕೆಯಿಂದ ಗೊತ್ತಾಗುತ್ತದೆ. ಇವರೆಲ್ಲರೂ ಅಧಿಕಾರ ಹಿಂದೆ ಹೋಗುವರು ಎಂದು ಸಾಬೀತುಪಡಿಸಿದಂತಾಗಿದೆ ಎಂದು ತಿಳಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ನಗರಸಭೆ ಸದಸ್ಯರು ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದರು. ಆ ಕಾರಣದಿಂದ ಇಂದು ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಸುಮಾರು 20 ವರ್ಷಗಳಿಂದ ಸಿ.ಟಿ.ರವಿ ಆಪ್ತ ವಲಯದಲ್ಲಿ ವೇಣುಗೊಪಾಲ್ ಗುರುತಿಸಿಕೊಂಡಿದ್ದರು. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಿದರು ರಾಜೀನಾಮೆ ನೀಡಲು ವೇಣುಗೋಪಾಲ್ ನಿರಾಕರಿಸಿದ್ದರು. ಎರಡು ಬಾರಿ ರಾಜೀನಾಮೆ ನೀಡಿ ಅಂಗೀಕಾರವಾಗುವ ಮುನ್ನವೆ ವೇಣುಗೋಪಾಲ್ ಅದನ್ನು ಹಿಂಪಡೆಡಿದ್ದರು. ನಂತರ ರಾಜೀನಾಮೆ ಹಿಂಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಧ್ಯಕ್ಷ ವರಸಿದ್ಧಿ 8 ದಿನಗಳ ಕಾಲ ಕಣ್ಮರೆಯಾಗಿದ್ದರು.

ಬಿಜೆಪಿ ಪಕ್ಷದ ಆಂತರಿಕ ತೀರ್ಮಾನವನ್ನ ಉಲ್ಲಂಘಿಸಿದ ಹಿನ್ನೆಲೆ ಅಮಾನತು ಮಾಡಲಾಗಿದೆ. 18-12 ತಿಂಗಳಿಗೆ ನಗರಸಭೆ ಅಧ್ಯಕ್ಷ ಸ್ಥಾನವನ್ನ ಬಿಜೆಪಿಯು ವಿಭಜಿಸಿತ್ತು. ಮೊದಲ ಅವಧಿಗೆ 18 ತಿಂಗಳು, ಎರಡನೇ ಅವಧಿಗೆ 12 ತಿಂಗಳು ಎಂದು ವಿಭಜಿಸಿದ್ದ ಪಕ್ಷದ ನಿರ್ಣಯವನ್ನು ಲೆಕ್ಕಿಸದೆ ವೇಣುಗೋಪಾಲ್ 18 ತಿಂಗಳ ನಂತರವು ರಾಜೀನಾಮೆ ನೀಡದೆ ಸತಾಯಿಸಿದರು. ಪಕ್ಷ ಸೂಚಿಸದರೂ ರಾಜೀನಾಮೆ ನೀಡಿರಲಿಲ್ಲ. ಚಿಕ್ಕಮಗಳೂರು ನಗರಸಭೆಯು 20 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿತ್ತು, ಪಕ್ಷ ವಿರೋಧಿ ಚಟುವಟಕೆ ಹಾಗೂ ಮುಜುಗರ ತಂದ ಹಿನ್ನೆಲೆ ವೇಣು ವಿರುದ್ಧ ಬಿಜೆಪಿಯ 17 ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು ಇದರಿಂದ ಅವರನ್ನು ಅಮಾನತುಗೊಳಿಸಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!