May 5, 2024

MALNAD TV

HEART OF COFFEE CITY

ನನ್ನ ಸೇವಾ ಅವಧಿಯ ಅವಿಸ್ಮರಣೆಯ ದಿನ; ಜಿಲ್ಲಾಧಿಕಾರಿ ಮೀನಾ ನಾಗರಾಜ್

1 min read

ಚಿಕ್ಕಮಗಳೂರು: ರಾಜ್ಯದ ಸಮಗ್ರ ಸುರಕ್ಷತೆಗೆ ಹಾಗೂ ಭದ್ರತೆಯಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿ ನನ್ನ ಸೇವಾ ಅವಧಿಯ ಅವಿಸ್ಮರಣೆಯ ದಿನ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಜಿಲ್ಲಾ ಪೊಲೀಸ್ ವತಿಯಿಂದ ರಾಮನಹಳ್ಳಿಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಹುತಾತ್ಮರ ಸ್ಮಾರಕದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸೇವೆಯನ್ನು ನೆನೆಯುತ್ತ ಮಾತನಾಡಿದ ಅವರು 1959 ರಿಂದ ಹಿಡಿದು ಇಲ್ಲಿಯವರೆಗೆ ಇಂದು ದೇಶದಾದ್ಯಂತ ಹುತಾತ್ಮರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುವಂತಹ ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿ ನನ್ನ ಸೇವ ಅವಧಿಯ ಅವಿಸ್ಮರಣೆಯ ದಿನವೂ ಹೌದು. ಕಾನೂನು ವ್ಯವಸ್ಥೆಯನ್ನು ಕಾಪಾಡುವುದು, ಅಪರಾಧ ಪ್ರಕರಣಗಳನ್ನು ಬಗೆಹರಿಸುವುದು, ವಿಪತ್ತು ನಿರ್ವಹಣೆಯಲ್ಲಿ ಸಹಾಯ ಮಾಡುವುದರಿಂದ ಹಿಡಿದು ಕೋವಿಡ್ 19 ನಲ್ಲಿ ಹೋರಾಡಿರುವವರೆಗೂ ಯಾವುದೇ ಹಿಂಜರಿಕೆ ಇಲ್ಲದೆ ಪೊಲೀಸ್ ಸಿಬ್ಬಂದಿಗಳು ದಿನನಿತ್ಯ ಅತ್ಯುತ್ತಮ ಕರ್ತವ್ಯ ಸೇವೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಜನರ ಸೇವೆಗಾಗಿ ತಮ್ಮನ್ನೇ ಸಮರ್ಪಣೆಗೊಳಿಸಿಕೊಂಡು ಕರ್ತವ್ಯ ಮಾಡುವ ಮೂಲಕ ಕರ್ತವ್ಯ ನಿಷ್ಠೆಯನ್ನು ದಿನನಿತ್ಯ ಪ್ರದರ್ಶಿಸುತ್ತಿದ್ದಾರೆ. ನಾನು ಕೂಡ ಈ ಇಲಾಖೆಯ ಬಗ್ಗೆ ಎರಡು ವರ್ಷ ಅನುಭವವನ್ನು ಹೊಂದಿದ್ದೇನೆ. ಅತ್ಯಂತ ಕ್ಲಿಷ್ಟಕರ ಇಲಾಖೆ ಇದು. ವರ್ಷದ 365 ದಿನವೂ ಒಂದಲ್ಲ ಒಂದು ಹೊಸ ಅನುಭವಗಳು ಎದುರಾಗುತ್ತಿರುತ್ತದೆ ಎಂದರು.
ಪೊಲೀಸ್ ಸಿಬ್ಬಂದಿ ವರ್ಗದವರ ಕರ್ತವ್ಯದಿಂದ ರಾಜ್ಯವು ಅತ್ಯಂತ ಶಾಂತಿಯುತವಾದ ರಾಜ್ಯ ಎಂಬ ಹೆಗ್ಗಳಿಕೆ ಪಡೆಯುವಲ್ಲಿ ಇವರ ಪಾತ್ರ ಬಹಳಷ್ಟು ಇದೆ. ಚುನಾವಣೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕ ರಾಜ್ಯ ಶಾಂತಯುತವಾಗಿ ಚುನಾವಣೆ ನಡೆಸುತ್ತದೆ ಎಂದರೆ ಅದಕ್ಕೆ ನಿಮ್ಮ ಕರ್ತವ್ಯ ನಿಷ್ಠೆಯೇ ಕಾರಣ ಇದರಿಂದ ನೀವು ಎಲ್ಲರ ಮನೆ ಮಾತಾಗಿದ್ದೀರಾ ಎಂದು ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ಕರ್ತವ್ಯದಲ್ಲಿದ್ದಾಗ ಪ್ರಾಣಾರ್ಪಣೆ ಮಾಡಿದ 129 ಹುತಾತ್ಮರ ಹೆಸರನ್ನು ಸಂಸ್ಮರಣೆ ಮಾಡಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಪೊಲೀಸ್ ತರಬೇತಿಯ ಶ್ವಾನದಳಕ್ಕೆ ಸನ್ಮಾನ ಕೂಡ ಮಾಡಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!