April 28, 2024

MALNAD TV

HEART OF COFFEE CITY

ಪರಿಸರ ಕಾಳಜಿ ಹೊಂದಿದ ಸಾಮಾಜಿಕ ಸಂದೇಶದ ಚಿತ್ರ “ಜಲಪಾತ” ಇದೆ ಅ.13 ರಂದು ತೆರೆಗೆ

1 min read

ಚಿಕ್ಕಮಗಳೂರು: ಇಂಡಸ್ ಹರ್ಬ್ಸ್’ನ ಟಿ ಸಿ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿರುವ ಮತ್ತು ಜಿಲ್ಲೆಯ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ‘ಜಲಪಾತ’ ಎಂಬ ಸಿನಿಮಾ ಇದೇ ಅಕ್ಟೋಬರ್ 13 ರಿಂದ ರಾಜ್ಯಾದ್ಯಂತ ತೆರೆಕಾಣಲಿದ್ದು ಚಿಕ್ಕಮಗಳೂರಿನ ನಾಗಲಕ್ಷ್ಮೀ ಥಿಯೇಟರ್’ನಲ್ಲಿ 1 ವಾರ ಪ್ರತೀದಿನ ಸಂಜೆ 5 – 30 ಕ್ಕೆ ಪ್ರದರ್ಶನ ಕಾಣಲಿದೆ.


ಪರಿಸರ ಕಾಳಜಿ ಮತ್ತು ರಕ್ಷಣೆಯ ವಿಚಾರವನ್ನು ಹೊಂದಿದ ಸಾಮಾಜಿಕ ಸಂದೇಶದ ಚಿತ್ರ ಜಲಪಾತ. ಮಲೆನಾಡ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯ ಹಿನ್ನೆಲೆಯಲ್ಲಿ ಫ್ಯಾಮಿಲಿ ಡ್ರಾಮ ಶೈಲಿಯ ಕಥೆಯನ್ನು ಹೊಂದಿದ್ದು ಕಲಾವಿದ ಮತ್ತು ತಂತ್ರಜ್ಞರೆಲ್ಲರೂ ಮಲೆನಾಡಿಗರೇ ಆಗಿದ್ದಾರೆ ಎಂದು ನಿರ್ದೇಶಕ ರಮೇಶ್ ಬೇಗಾರ್ ಅವರು ಚಿತ್ರತಂಡದ ಜೊತೆಗೆ ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರ ಗೀತೆಯೊಂದನ್ನು ಚಿತ್ರಕ್ಕೆ ಅಳವಡಿಸಿದ್ದು ಅದನ್ನು ನಾಡಿನ ಪ್ರಸಿದ್ಧ ಗಾಯಕ ವಿಜಯಪ್ರಕಾಶ್ ಹಾಡಿದ್ದು ಚಿತ್ರದ 3 ಹಾಡುಗಳಿಗೆ ಸಾದ್ವಿನಿಕೊಪ್ಪ ಸಂಗೀತ ನೀಡಿದ್ದಾರೆ. ವನಿತಾ ವೆಂಕಟೇಶ್ ಮತ್ತು ಮಧುರ ಕವಿಲುಕೊಡಿಗೆ ಇವರ ಸಾಹಿತ್ಯವನ್ನು ಚಿತ್ರ ಒಳಗೊಂಡಿದೆ.
ಶಶಿರ ಶೃಂಗೇರಿ – ಛಾಯಾಗ್ರಹಣ , ಅವಿನಾಶ್ ಶೃಂಗೇರಿ – ಸಂಕಲನ , ಅಭಿಷೇಕ್ ಹೆಬ್ಬಾರ್ – ಕಲಾ ನಿರ್ದೇಶನ , ಕಾರ್ತಿಕ್ ನಿರ್ಮಾಣ ನಿರ್ವಹಣೆಯ ಜಲಪಾತ ಚಿತ್ರದಲ್ಲಿ ಪ್ಲಾಸ್ಟಿಕ್ ಬಳಸದೇ ಅದರ ಕಲಾನಿರ್ದೇಶನ ಮಾಡಿರುವುದು ವಿಶೇಷ ವಾಗಿದೆ.
ಪ್ರಸಿದ್ಧ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿ ಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು ಶೃಂಗೇರಿಯ ರಂಗಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ.
ಚಿಕ್ಕಮಗಳೂರಿನ ಕಲಾವಿದೆ ರೇಖಾ ಪ್ರೇಮ್ ಕುಮಾರ್ ಜಲಪಾತದ ಪ್ರಮುಖ ಪೋಷಕ ನಟಿಯಾಗಿದ್ದು ಬಿ.ಎಲ್ ರವಿಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ.
ಎ.ಎಸ್ ನಯನ , ವಿಶ್ವನಾಥ್ ಶೆಟ್ಟಿ ,ಎಸ್ ಎನ್ ವಿಶ್ವನಾಥ್ , ಸುನೀತಾ , ಜ್ಯೋತಿ ಕಾಮತ್ , ಎಂ ಆರ್ ಸುರೇಶ್ , ಕೃಷ್ಣ ಮೂರ್ತಿ ನಟರಾಜ್ ತೋರಣ ಗದ್ದೆ , ವೈಶಾಲಿ , ಸ್ವಾತಿ , ರಮಂತ , ದತ್ತಾತ್ರಿ ಎಂ ಎನ್ , ಸುಧಾಕರ ಶೆಟ್ಟಿ , ವಿಜಯಲಕ್ಷ್ಮ್ಮೀ ಕೋಟಿಬೈಲು , ಶ್ರೀ ಹರ್ಷ, ಪ್ರಸನ್ನ ಕೊಪ್ಪ , ಚಗತೆ ರಾಮದಾಸ್, ಚಂದ್ರಶೇಖರ ತುಂಬರಮನೆ ಸೇರಿದಂತೆ ಸಂಪೂರ್ಣ ಮಲೆನಾಡು ಕಲಾವಿದರು ನಟಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!