April 29, 2024

MALNAD TV

HEART OF COFFEE CITY

ಅಡ್ವಾನ್ಸ್ ಪಡೆದು ಕೆಲಸ ಏಕೆ ಮಾಡ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಕಾರ್ಮಿಕರಿಂದ ಮಾಲೀಕರ ಮೇಲೆ ಹಲ್ಲೆ

1 min read

 

ಚಿಕ್ಕಮಗಳೂರು. ಕೆಲಸ ಮಾಡುತ್ತೇವೆ ಎಂದು ಮುಂಗಡ ಹಣ ಪಡೆದು ಕೆಲಸ ಮಾಡದೇ ಇದ್ದರೆ ಹೇಗೆ, ಕೆಲಸ ಮಾಡಿ ಇಲ್ಲ ಅಡ್ವಾನ್ಸ್ ಹಣ ಹಿಂದಿರುಗಿಸಿ ಹೊರಡಿ ಎಂದು ಹೇಳಿದ್ದಕ್ಕೆ ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ತೋಟದ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್‍ನಲ್ಲಿ ನಡೆದಿದೆ. ಈ ಒಂದು ಘಟನೆಯಿಂದ ಹೆಚ್ಚುಕಡಿಮೆ ಹಾಸನ, ಮಡಿಕೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಫಿತೋಟದ ಮಾಲೀಕರು ಎಚ್ಚರಗೊಳ್ಳಬೇಕಾಗಿದೆ. ಇಲ್ಲವಾದರೆ, ಇಂದು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಘಟನೆ ನಾಳೆ ಹಾಸನ, ಮಡಿಕೇರಿಗೂ ಕಾಲಿಡಬಹುದು. ಜೊತೆಗೆ, ಇಂದು ಹಲ್ಲೆಗೆ ಯತ್ನಿಸಿದ್ದಾರೆ. ನಾಳೆ ಕೊಲೆ-ಸುಲಿಗೆಗಂತಹಾ ಕೃತ್ಯಕ್ಕೂ ಕೈಹಾಕುವುದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಇಲ್ಲ. ಹಾಗಾಗಿ, ತೋಟದ ಮಾಲೀಕರು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಹಲ್ಲೆಗೆ ಯತ್ನಿಸಿದವರು ಅಕ್ರಮ ಬಾಂಗ್ಲಾದವರು : ಜಿಲ್ಲೆಯ ಕಾಫಿತೋಟದಲ್ಲಿ ಅಸ್ಸಾಂನವರು ಎಂದು ಹೇಳಿಕೊಂಡು ಕಾಫಿತೋಟದ ಒಳಗೆ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರೋದು ಗುಟ್ಟಾಗೇನು ಉಳಿದಿಲ್ಲ. ಕೆಲ ವೇಳೆ ಸಿಕ್ಕಿಬಿದ್ದಿದ್ದಾರೆ ಕೂಡ. ಆದರೆ, ಅವರನ್ನ ಅಸ್ಸಾಂನವರು ಎಂದು ಯಾರೂ ಒಪ್ಪಲ್ಲ. ನಂಬಲ್ಲ. ಅವರು ಅಕ್ರಮ ಬಾಂಗ್ಲಾ ವಲಸಿಗರು ಎಂದೇ ಹೇಳಲಾಗುತ್ತಿದೆ. ಅವರ ಮಾತು-ಕಥೆ, ಹಾವ-ಭಾವ, ನಡೆ-ನುಡಿ ಎಲ್ಲವೂ ಬಾಂಗ್ಲಾದವರೇ ಎಂದು ಹೇಳುತ್ತೆ. ಇತ್ತೀಚೆಗೂ ಎನ್.ಆರ್.ಪರದಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದರು.

ಲಕ್ಷಕ್ಕೂ ಅಧಿಕ ಹೆಕ್ಟರ್‍ನಲ್ಲಿರೋ ಕಾಫಿ : ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು ಲಕ್ಷಕ್ಕೂ ಅಧಿಕ ಹೆಕ್ಟೇರ್‍ನಲ್ಲಿ ಕಾಫಿ ಬೆಳೆದಿದ್ದಾರೆ. ಕಾಫಿ ಕೆಲಸಕ್ಕೆ ವರ್ಷಪೂರ್ತಿ ಜನಬೇಕು. ಸ್ಥಳಿಯ ಕೆಲಸಗಾರರದ್ದು ನಿಗಧಿತ ಟೈಂ. ಕೂಲಿಯೂ ಹೆಚ್ಚು. ಹಾಗಾಗಿ, ದೊಡ್ಡ-ದೊಡ್ಡ ಪ್ಲಾಂಟರ್‍ಗಳು ಹೊರರಾಜ್ಯದ ಕೆಲಸಗಾರರನ್ನೇ ಆಶ್ರಯಿಸಿಕೊಂಡಿದ್ದಾರೆ. ವಾಸಕ್ಕೆ ಮನೆ ನೀಡಿದರೆ ಕೂಲಿಯೂ ಕಡಿಮೆ. ಜನರೂ ಸಿಗ್ತಾರೆ. ಇಡೀ ದಿನ ಕೆಲಸ ಮಾಡುತ್ತಾರೆ. ಕೆಲಸ ಬೇಗ ಮುಗಿಯುತ್ತೆ ಎಂದು ಹೊರರಾಜ್ಯ-ಜಿಲ್ಲೆಯ ಕಾರ್ಮಿಕರ ಮೇಲೆ ಅವಲಂಬಿತರಾಗಿರೋದು ಈ ಕೃತ್ಯಕ್ಕೆ ದಾರಿಯಾಗಿದೆ.

ಅಡ್ವಾನ್ಸ್ ಪಡೆದು ಕೆಲಸಕ್ಕೆ ಹಿಂದೇಟು : ಕಾಫಿತೋಟದ ಕೆಲಸಕ್ಕೆ ಉತ್ತರ ಕರ್ನಾಟಕ-ಉತ್ತರ ಭಾರತದದಿಂದಲೂ ಕಾರ್ಮಿಕರು ಬರುತ್ತಾರೆ. ಬಂದವರು ಅಡ್ವಾನ್ಸ್ ಪಡೆದು, ಕೆಲಸ ಮುಗಿಸಿಕೊಂಡು ಹೋಗುತ್ತಾರೆ. ಮತ್ತೆ ಬರುತ್ತಾರೆ. ಅದು ಕಾರ್ಮಿಕರು-ಮಾಲೀಕರ ನಂಬಿಕೆ-ಸಂಬಂಧ. ಆದರೆ, ಅಸ್ಸಾಂ ಎಂದು ಹೇಳಿಕೊಂಡು ಬರುವವರು ಒಂದು ತೋಟದಲ್ಲಿ ಕೆಲಸ ಮಾಡುತ್ತೇವೆಂದು ಮುಂಗಡ ಹಣ ಪಡೆದು ತಿಂಗಳು ಕೆಲಸ ಮಾಡಿ, ಮತ್ತೊಂದು ತೋಟಕ್ಕೆ ಹೋಗಿ ಅಲ್ಲೂ ಹಣ ಪಡೆದು ಎಲ್ಲೂ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ. ಇಂತವರೇ ಹೀಗೆ ಹಲ್ಲೆಗೆ ಯತ್ನಿಸಿರೋದು. ಮುಂಗಡ ಹಣ ಪಡೆದು ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ತೋಟದ ಮಾಲೀಕ ಅಜ್ಗರ್ ಎಂಬುವರಿಗೆ ಮಚ್ಚು-ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ.

ತೋಟದ ಮಾಲೀಕರು-ಪೊಲೀಸರು ಎಚ್ಚೆತ್ತುಕೊಳ್ಳಬೇಕು : ಕೂಡಲೇ ತೋಟದ ಮಾಲೀಕರು ಹಾಗೂ ಪೊಲೀಸ್ ಇಲಾಖೆ ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ, ಇಂದು ಹಲ್ಲೆಗೆ ಯತ್ನಿಸಿದವರು ನಾಳೆ ಮತ್ತೊಂದಕ್ಕೆ ಕೈ ಹಾಕಿದರೂ ಹಾಕಬಹುದು. ಸಾವಿರಾರು ಎಕರೆ ಕಾಫಿತೋಟ. ಯಾವುದೇ ಅನಾಹುತವಾದರೂ ಹೊರಬರೋದಕ್ಕೆ ನಾಲ್ಕೈದು ದಿನಗಳೇ ಬೇಕಾಗಬಹುದು. ಅಷ್ಟರಲ್ಲಿ ಅವರು ದೇಶವನ್ನೇ ಬಿಟ್ಟು ಹೋಗುವ ಸಾಧ್ಯತೆಯೂ ಇರುತ್ತೆ. ಹಾಗಾಗಿ, ಕೆಲಸಗಾರರ ಬಗ್ಗೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರು ಹೊರರಾಜ್ಯದವರ ಮೇಲೆ ಕಣ್ಣಿಡಬೇಕಾಗಿದೆ. ಇಲ್ಲವಾದರೆ, ನಾಳೆ ಈ ಪರಿಸ್ಥಿತಿ ಎಲ್ಲರಿಗೂ ಬರಬಹುದು.

ನಮ್ಮ ಹಣ ನೀಡಿ ಒದೆ ತಿನ್ನಬೇಕಾ : ಇಂದೆಂಥಾ ಕರ್ಮ. ನಮ್ಮ ತೋಟದಲ್ಲಿ ನಮ್ಮದೇ ಮನೆಗಳನ್ನ ಉಚಿತವಾಗಿ ನೀಡಿ. ಕೆಲಸ ಕೊಟ್ಟು. ಊಟ ನೀಡಿ. ಆರೋಗ್ಯ ನೋಡಿಕೊಂಡು. ಅವರ ಮಕ್ಕಳನ್ನ ಪ್ರೀತಿಸಿ. ಬಟ್ಟೆ-ಬರೆ ಕೊಡಿಸಿ. ಕೊನೆಗೆ ನಮ್ಮ ದುಡ್ಡು ಕೊಟ್ಟು ಕೊನೆಗೆ ಅವರಿಂದ ನಾವೇ ಒದೆ ತಿನ್ನೋದು ಅಂದರೆ ನಿಜಕ್ಕೂ ಇದು ದುರಾದೃಷ್ಟವಲ್ಲದೆ ಮತ್ತೇನು ಅಲ್ಲ. ಹಾಗಾಗಿ, ನಿಜಕ್ಕೂ ಕಾಫಿತೋಟದ ಮಾಲೀಕರು ಸೂಕ್ತ ನಿರ್ಣಯ-ತೀರ್ಮಾನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!