May 14, 2024

MALNAD TV

HEART OF COFFEE CITY

ಜೆಡಿಎಸ್ ತೊರೆಯಲು ಷಡ್ಯಂತ್ರ, ಗುಂಪುಗಾರಿಕೆ ಕಾರಣ

1 min read

ಚಿಕ್ಕಮಗಳೂರು: ಷಡ್ಯಂತ್ರ ಮತ್ತು ಗುಂಪುಗಾರಿಕೆಯಿoದ ಜಾತ್ಯತೀತ ಜನತಾದಳದಿಂದ ಹೊರನಡೆಯಲು ಕಾರಣವೆಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ಎಚ್.ಎಚ್.ದೇವರಾಜ್ ತಿಳಿಸಿದರು.

, ನಾನು ಪಕ್ಷದಿಂದ ಹೊರನಡೆಯಲು ರಾಜಕೀಯ ಷಡ್ಯಂತ್ರ ಮತ್ತು ಗುಂಪುಗಾರಿಕೆ ಮಾಡಿದವರಿಗೆ ಒಳ್ಳೆಯದಾಗಲಿ, ಕಟ್ಟಿದ ಮನೆ ಮತ್ತು ಕಾರ್ಯಕರ್ತರನ್ನು ತೊರೆಯಬೇಕಾಯಿತ್ತಲ್ಲ ಎಂಬ ನೋವಿದೆ ಎಂದು ಹೇಳಿದರು.

ಪಕ್ಷದಲ್ಲಿ ೨ನೇ ಹಂತದ ಮುಖಂಡರು ಮತ್ತು ಕಾರ್ಯಕರ್ತರು ಒಳ್ಳೆಯವರು ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ವೇದಿಕೆ ಕಲ್ಪಿಸಿಕೊಡಲು ಸಿದ್ಧನಿದ್ದೇನೆ. ಜೆಡಿಎಸ್ ನಾಯಕರ ನಡವಳಿಕೆ ಮೇಲೆ ಆ ಪಕ್ಷ ಕಾರ್ಯಕರ್ತರ ಇರುತ್ತಾರೆಂದರು.

ಐದು ವರ್ಷಕ್ಕೊಮ್ಮೆ ಜೆಡಿಎಸ್ ಮುಖಂಡರ ನಿಲುವು ಬದಲಾಗುತ್ತದೆ. ಎಂಎಲ್‌ಎ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಮದುಮಾಡಿಕೊಳ್ಳಲಾಗುತ್ತದೆ. ಕಳೆದ ಚುನಾವಣೆಯಲ್ಲಿ ಬಿ.ಎಚ್.ಹರೀಶ್ ಅವರನ್ನು ಕರೆತರಲಾಗಿತ್ತು. ಮುಂದಿನ ಚುನಾವಣೆಯಲ್ಲಿ ತಿಮ್ಮಶೆಟ್ಟೆ ಎಂಬುವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ನುಡಿದರು.

ಈ ಹಿಂದೆ ರಾಜ್ಯಮಟ್ಟದಲ್ಲಿ ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿದಾಗಲೇ ವಿರೋಧಿಸಿದ್ದೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪೂಜನೀಯ ಗೌರವ ಇದೆ ಆದರೆ ಅವರ ನಿರ್ಧಾರಗಳು ಪಕ್ಷದಲ್ಲಿ ಕಾರ್ಯರೂಪಕ್ಕೆ ಬಾರದು ಎಂದು ಆರೋಪಿಸಿದರು.

ಡಿ.3 ಕ್ಕೆ ಸೇರ್ಪಡೆ:

ನಗರದ ವಕ್ಕಲಿಗರ ಸಮುದಾಯಭವನದಲ್ಲಿ ಕಾಂಗ್ರೆಸ್‌ಪಕ್ಷದ ಸಮಾವೇಶದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದು, ಅವರ ಸಮ್ಮುಖದಲ್ಲಿ ಬೆಂಬಲಿಗರೊoದಿಗೆ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.

ನೋವಿನಿಂದ ಜೆಡಿಎಸ್ ಎಂಬ ಮನೆಯನ್ನು ಬಿಟ್ಟುಹೋಗುತ್ತಿದ್ದೇನೆ. ಆದರೆ ಉಂಡ ಮನೆಗೆ ವಿಷ ಬಗೆಯಲ್ಲ, ಬೆಂಗಳೂರು, ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಿಲ್ಲ, ಇದನ್ನು ಗಮನಿಸಿದರೆ ನನ್ನ ಧ್ವನಿ ಅಡಗಿಸುವ ಯತ್ನ ನಡೆದಿತ್ತು. ಇವನ್ನೆಲ್ಲ ಗಮನಿಸಿದರೆ ಜೆಡಿಎಸ್‌ನಲ್ಲಿ ಗರ್ಭಗುಡಿ ಸಂಸ್ಕೃತಿ ಇದಿಯಾ ಎಂದೆನಿಸುತ್ತವೆ ಎಂದು ಹೇಳಿದರು.

ದಲಿತರು, ಬಡವರು, ಅಲ್ಪಸಂಖ್ಯಾತರ ಪರವಾಗಿ, ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬರಲಾಗಿತ್ತು. ಮುಂದೆಯೂ ಜಾತ್ಯತೀತ ನಿಲುವಿಗೆ ಬದ್ಧವಾಗಿಯೇ ನಡೆದುಕೊಳ್ಳುತ್ತೇನೆ. ಕಾಂಗ್ರೆಸ್ ಮುಖಂಡರು ಗೌರವಾನ್ವಿತವಾಗಿ ನಡೆಸಿಕೊಳ್ಳುತ್ತಾರೆಂಬ ನಂಬಿಕೆ ಇದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದೆ. ಈಗ ಮರಳಿ ಮನೆಗೆ ಹೋಗುತ್ತಿದ್ದೇನೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!