May 19, 2024

MALNAD TV

HEART OF COFFEE CITY

ದುಡ್ಡು ಕೊಟ್ಟು ಕೆಲಸ ಮಾಡಿಸುತ್ತೇನೆ ಎಂಬ ಶಾಸಕ ಟಿ ಡಿ ರಾಜೇಗೌಡ ಮಾತನಾಡಿರುವ ಆಡಿಯೋ ವೈರಲ್

1 min read

ಚಿಕ್ಕಮಗಳೂರು: ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳೋಕೆ ನಾನು ದುಡ್ಡು ಕೊಡ್ತೀನಿ, ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎನ್ನುವ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರವರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶೃಂಗೇರಿ ತಾಲೂಕು ನೆಮ್ಮಾರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ. ಡಿ. ರಾಜೇಗೌಡ ಮಾತನಾಡುವ ಭರದಲ್ಲಿ ಮಲೆನಾಡಿನವರು ಸಹೃದಯಿಗಳು, ಯಾವುದೇ ಕೆಲಸ ಆದರೂ ಅವರು ಹಾಗೆ ಮಾಡಿಸಿಕೊಳ್ಳಲ್ಲ, ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಿದ ಸಂದರ್ಭದಲ್ಲಿ ಅಧಿಕಾರಗಳಿಂದ ಕೆಲಸ ಮಾಡಿಸಿಕೊಳ್ಳೋಕೆ ನಾನು ದುಡ್ಡು ಕೊಡ್ತೀನಿ, ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಮಾತನಾಡಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಮಲೆನಾಡಿನವರು ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ‌. ಲಂಚಕ್ಕೂ…ಟಿಪ್ಸ್ ಗೂ ಭಾರೀ ವ್ಯತಾಸವಿದೆ. ಅವರ ಕೆಲಸ ಮಾಡಿಕೊಟ್ರೆ ಟಿಪ್ಸ್ ಕೊಡ್ತಾರೆ, ಯಾರು ಹಾಗೇ ಹೋಗಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಸಾರ್ವಜನಿಕರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡುವಂತೆ, ಲಂಚ ನೀಡುವುದು ಕಾನೂನು ಅಪರಾಧವಲ್ಲ ಎಂಬಂತೆ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲಲ್ಲಿ ವಿರೋಧಕ್ಕೆ ಕಾರಣವಾಗಿದೆ. ಟಿ.ಡಿ. ರಾಜೇಗೌಡ ಮಾತಿಗೆ ಬಿಜೆಪಿ ಟ್ವಿಟ್ ಮಾಡಿದ್ದು, ಎಟಿಎಂ ಸರ್ಕಾರದಲ್ಲಿ ಕೆಲಸ ಮಾಡಿಕೊಳ್ಳಲು ಶಾಸಕರೂ ಲಂಚ ಕೊಡಬೇಕು ಎಂದು ಟ್ವಿಟ್ ಮೂಲಕ ಕಾಲೆಳೆದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!