May 17, 2024

MALNAD TV

HEART OF COFFEE CITY

ಶಿಕ್ಷಕ ವೃತ್ತಿ ಪ್ರಾಮಾಣಿಕವಾದದು – ಹೆಚ್.ಡಿ.ತಮ್ಮಯ್ಯ

1 min read

 

ಚಿಕ್ಕಮಗಳೂರು-ಶಿಕ್ಷಕ ವೃತ್ತಿ ಪ್ರಾಮಾಣಿಕವಾದದು, ಹಣಕಾಸು ವ್ಯವಹಾರದಲ್ಲೂ  ಈ ವೃತ್ತಿಪರತೆ ತೋರಿದ್ದರಿಂದ ಟೀಚರ್ಸ್ ಕೋ ಅಪರೇಟಿವ್ ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ  ಟೀಚರ್ಸ್ ಕೋ ಅಪರೇಟವ್ ಬ್ಯಾಂಕ್ ಶಾಖೆಯ ಸ್ಥಳಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ರಾಜ್ಯದಲ್ಲಿ ಉತ್ತಮಸಾಧನೆ ಮಾಡಿದೆ. ಇತರೆ ಇಲಾಖೆಯಲ್ಲಿ ಏನಾದರೂ ಆರ್ಥಿಕ ಲಾಭ ಮಾಡಿಕೊಳ್ಳಬಹುದೇನೋ ಆದರೆ, ಶಿಕ್ಷಕರದ್ದು ಪ್ರಾಮಾಣಿಕ ವೃತ್ತಿ.ಶಿಕ್ಷಕರು ಮದುವೆ, ಮುಂಜಿ, ಮನೆ ನಿರ್ಮಿಸುವ ಕಷ್ಟದ ಸಂದರ್ಭದಲ್ಲಿ ಮಾತ್ರ  ಈ ಬ್ಯಾಂಕಿನಿಂದ ಸಾಲಪಡೆದು ಅದನ್ನು ಮರಳಿಸಿ.ಸುಮ್ಮನೆ ಪಡೆದು ಸಾಲಗಾರರಾಗಬೇಡಿ ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಣಕಾಸು ಸಂಸ್ಥೆಗಳು ಬಹಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಈ ಬ್ಯಾಂಕಿನ ಆಡಳಿತ ಮಂಡಳಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವುದರಿಂದ ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ.ರಾಜ್ಯದ ಕೆಲ ಸಹಕಾರಿ ಬ್ಯಾಂಕ್‍ಗಳು ಅವ್ಯವಹಾರದ ಸರಮಾಲೆಯಿಂದ ಮುಚ್ಚಿಹೋಗಿವೆ. ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ಅನೇಕರು ಇಲ್ಲಿ ಠೇವಣೆ ಇಟ್ಟಿದ್ದಾರೆ.ಯಾವುದೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಒಳಿತಿಗಾಗಿ ರಾಜಕೀಯ ಪ್ರವೇಶಿಸಬಾರದು.ದುರಾದೃಷ್ಠ  ಬಹುತೇಕ ಸಹಕಾರಿ ಬ್ಯಾಂಕ್‍ಗಳಲ್ಲಿ ರಾಜಕೀಯ ನುಸುಳಿದೆ ಎಂದರು.

 

 

ಬ್ಯಾಂಕಿನ ಅಧ್ಯಕ್ಷ ಅಶೋಕ್ ಕುಮಾರ್‍ಶೆಟ್ಟಿ ಪ್ರಾಸ್ತಾವಿಸಿ, ಟೀಚರ್ಸ್ ಸೊಸೈಟಿ ಈಗ ಬ್ಯಾಂಕ್ ಆಗಿದೆ. ಸಿರಾಲಿ ಸುಬ್ಬರಾವ್ 1975 ರಲ್ಲಿ ಆರಂಭಿಸಿದ್ದು ಇದು ಆರ್‍ಬಿಐ ನಿರ್ದೇಶನದಡಿ ನಡೆಯುತ್ತಿದೆ. ಶಿಕ್ಷಕರಿಗಾಗಿಯೇ ಇರುವ ಬ್ಯಾಂಕಿನಲ್ಲಿ ಬಡ್ಡಿ ದರವೂ ಕಡಿಮೆ. 18 ಸಾವಿರ ಸದಸ್ಯರಿದ್ದಾರೆ. 14 ಶಾಖೆಗಳಿವೆ. ಮುಖ್ಯ ಕಚೇರಿ ಉಡುಪಿಯಲ್ಲಿದೆ. 10 ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿದ್ದ ಇಡೀ ರಾಜ್ಯಕ್ಕೆ ವಿಸ್ತರಿಸುವ ಗುರಿಯಿದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥಶೆಟ್ಟಿ, ಮಹಾಪ್ರಬಂಧಕ ಮಂಜುನಾಥಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಹೆಗ್ಡೆ, ಶಾಖಾಕಾರಿ ಚೇತನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ತಾಲೂಕು ಅಧ್ಯಕ್ಷ ಕಿರಣ್‍ಕುಮಾರ್ ಮತ್ತಿತರೆ ಗಣ್ಯರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!