April 29, 2024

MALNAD TV

HEART OF COFFEE CITY

ಸ್ವರ್ಣಾಂಬದೇವಿ ಬ್ರಹ್ಮ ರಥೋತ್ಸವ

1 min read

ಕಡೂರು: ತಾಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಜ. 14 ರಂದು ಸರ್ಕಾರದ ಕೋವಿಡ್ ನಿಯಮ ಅನುಸಾರ ನಡೆಯಲಿದೆ ಎಂದು ದೇಗುಲಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು.ಮಲ್ಲೇಶ್ವರದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೋವಿಡ್ ಕಾರಣದಿಂದ ಕಳೆದ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ರಥೋತ್ಸವವನ್ನು ಮುಂದೂಡಲಾಗಿತ್ತು. ಇದೀಗ ಶ್ರೀ ಸ್ವರ್ಣಾಂಭ ದೇವಿಯವರ ಪ್ರೇರಣೆಯಿಂದ ಪ್ಲವನಾಮ ಸಂವತ್ಸರದ ಪುಷ್ಯಮಾಸದ ಶುಕ್ಲ ದ್ವಾದಶಿ ಜ. 14 ರಂದು ರಥೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದರು.

ಜ.10 ರಂದು ಶ್ರೀಕ್ಷೇತ್ರ ಶಂಖತೀರ್ಥದಲ್ಲಿ ಮೃತ್ತಿಕಾ ಸಂಗ್ರಹದೊಂದಿಗೆ ಸಾಂಪ್ರದಾಯಿಕವಾಗಿ ಕಾರ್ಯಕ್ರಮಗಳು ಆರಂಭವಾಗಲಿವೆ. 11 ರಂದು ಧ್ವಜಾರೋಹಣ ಮತ್ತು ರಥಕಳಶ ಸ್ಥಾಪನೆ,12ರಂದು ಮಹಾಗಣಪತಿ ಹೋಮ ಮತ್ತು ರಜತ ಪಲ್ಲಕ್ಕಿ ಉತ್ಸವ, 13 ರಂದು ಚಿಕ್ಕರಥೋತ್ಸವ ಮತ್ತು ಚಂಡಿಕಾಹೋಮ, ಸಂಜೆ ದೀಪಾರಾಧನೋತ್ಸವ ಜರುಗಲಿದ್ದು, 14 ರ ಶುಕ್ರವಾರ ಬ್ರಹ್ಮ ರಥೋತ್ಸವ ನೆರವೇರಲಿದೆ. 15 ರಂದು ಶನಿವಾರ ಸಿಡಿಸೇವೆ ಮತ್ತು ವಸಂತೋತ್ಸವ,ಸಂಜೆ ಉಯ್ಯಾಲೆ ಉತ್ಸವ ಹಾಗೂ ಸಂಗೀತಸೇವೆ ನಡೆಯಲಿದೆ.ಭಾನುವಾರ ಸತ್ಯನಾರಾಯಣಪೂಜೆ ಮತ್ತು ದೀಪಾರಾಧನೆ, ಸೋಮವಾರ ಸ್ವರ್ಣಾಂಬ ದೇವಿಗೆ ಪುಷ್ಪಯಾಗ ಮತ್ತು ಸಂಜೆ ತೆಪೆÇ್ಪೀತ್ಸವ ನಡೆಯುವುದರೊಂದಿಗೆ ಜಾತ್ರಾಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ನಿಯಮಾವಳಿ ಪ್ರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸ್ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡಲು ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು. ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಿದವರಿಗೆ ಮಾತ್ರ ಪ್ರವೇಶವಿರುತ್ತದೆ.ಒಂದು ಬಾರಿಗೆ ದೇವಾಲಯದೊಳಗೆ ಕೇವಲ 50 ಜನರಿಗೆ ಮಾತ್ರ ಅವಕಾಶವಿರುತ್ತದೆ.
ಜನರು ಗುಂಪುಗೂಡದಂತೆ ಎಚ್ಚರ ವಹಿಸಲಾಗಿದೆ. ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿರುವುದಿಲ್ಲ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರು ಜಾತ್ರಾ ಮಹೋತ್ಸವಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಕೋವಿಡ್ ನಿಯಮಾವಳಿಗೆ ಒಳಪಟ್ಟು ಸಾಂಪ್ರದಾಯಿಕವಾದ ಕ್ರಮಗಳೊಂದಿಗೆ ಉತ್ಸವಗಳು ನಡೆಯುತ್ತವೆ.ಭಕ್ತರು ಸಹಕರಿಸಬೇಕೆಂದು ಕೋರಿದರು.
ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ ಮತ್ತು ಧರ್ಮದರ್ಶಿ ಮಂಡಳಿ ಸದಸ್ಯರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!