May 5, 2024

MALNAD TV

HEART OF COFFEE CITY

ಪಕ್ಷಾತೀತ ಆಧಾರದಲ್ಲಿ ಬೆಂಬಲಿಸುತ್ತಾರೆ: ಹೆಚ್.ಡಿ ತಮ್ಮಯ್ಯ ವಿಶ್ವಾಸ

1 min read

ಚಿಕ್ಕಮಗಳೂರು-ವಾಮ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿರುವ ಶಾಸಕ ಸಿ.ಟಿ ರವಿಯವರನ್ನು ತಿರಸ್ಕರಿಸಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಜನಾಭಿಪ್ರಾಯದ ಆಧಾರದಲ್ಲಿ ಮತದಾರರು ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ತಿಳಿಸಿದರು.ಅವರು ಹಿರೇಮಗಳೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಹಿರೇಮಗಳೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿದ್ದು ಎಲ್ಲಾ ದೇವರು ಇಲ್ಲಿ ನೆಲೆಸಿವೆ ಎಂದು ತಿಳಿಸಿದರು.
ಹಿರೇಮಗಳೂರು ನನ್ನ ರಾಜಕೀಯ ಜೀವನ ಪ್ರಾರಂಭ ಮಾಡಿದ ಊರು ಹಾಗಾಗಿ ಇಲ್ಲಿನ ಗ್ರಾಮಸ್ಥರು ಅತಿ ಹೆಚ್ಚು ನನ್ನ ಸ್ನೇಹಿತರು, ಹಿತೈಷಿಗಳು, ಬಂಧುಗಳು ಇದ್ದಾರೆ ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡುವುದರ ಮೂಲಕ ತಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಜನಪರವಾದ, ಶೋಷಿತ ವರ್ಗಗಳ ಜೊತೆ ಇದ್ದು ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸವಲತ್ತುಗಳನ್ನು ಕೊಡಿಸುವಲ್ಲಿ ಸಫಲರಾಗಿದ್ದೇವೆ. ಬಿಜೆಪಿಯಲ್ಲಿ ಗುರ್ತಿಸಿಕೊಂಡಿದ್ದ ನಾನು ಎಂಎಲ್‌ಎ ಸ್ಥಾನದ ಆಕಾಂಕ್ಷಿ ಎಂದು ಟಿಕೆಟ್ ಕೇಳಿದ್ದೇ ತಪ್ಪಾಯಿತು ಉಸಿರುಗಟ್ಟಿದ ವಾತಾವರಣ ಬಿಜೆಪಿಯಲ್ಲಿ ನಿರ್ಮಾಣವಾಗಿದ್ದರಿಂದ ಆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡೆ ಎಂದರು.
ಶಾಸಕರು ಮತ್ತು ಆರ್.ಎಸ್.ಎಸ್ ಮುಖಂಡರೊಬ್ಬರು ನನಗೆ ಬಹಾಳ ತೇಜೋವಧೆಮಾಡಿ ನೋವುಂಟುಮಾಡಿದ್ದರಿAದ ರಾಜಕಾರಣನೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ, ನನ್ನ ಹಿತೈಷಿಗಳು, ಬೆಂಬಲಿಗರು, ಸ್ನೇಹಿತರ ಒತ್ತಾಸೆಯಂತೆ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರಿದೆ ಜನ ಸಾಮಾನ್ಯರ ಜನಾಭಿಪ್ರಾಯದ ಆಧಾರದಲ್ಲಿ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಗ್ಗೆ ಪಕ್ಷದ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸಿದರು.ಮೇ.10. ರಂದು ನಡೆಯಲಿರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಕ್ಷೇತ್ರದ ಶಾಸಕ ಸಿ.ಟಿ ರವಿಯವರನ್ನು ಸೋಲಿಸುವ ಮೂಲಕ ನನ್ನನ್ನು ಬೆಂಬಲಿಸುತ್ತಾರೆAಬ ವಿಶ್ವಾಸ ಹಿರೇಮಗಳೂರಿನಿಂದ ಪ್ರಾರಂಭವಾಗುತ್ತದೆ ನನ್ನ ಜನಬಲ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ದೇಣಿಗೆ ನೀಡುವ ಮೂಲಕ ನನಗೆ ಆಶೀರ್ವದಿಸುತ್ತಾರೆ ಎಂದು ಹೇಳಿದರು.
ಆತ್ಮ ಒಪ್ಪಿ ರಾಜಕಾರಣ ಮಾಡುತ್ತಿದ್ದೇನೆ ಹೊರತು ಇದರಲ್ಲಿ ವಯಕ್ತಿಕ ಹಿತಾಸಕ್ತಿ ಏನು ಇಲ್ಲ ಎಂದ ಅವರು ನಾನು ಯಾವುದೇ ಗುತ್ತಿಗೆ ಮಾಡಿಲ್ಲ ಕ್ಷೇತ್ರದಲ್ಲಿ ನಡೆದಿರುವ ಅವ್ಯವಹಾರಗಳನ್ನು ನನ್ನ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಸಹಿತ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಭ್ರಷ್ಠಾಚಾರ, ದುರಹಂಕಾರದಿAದ ಮೆರೆಯುತ್ತಿರುವ ಶಾಸಕರನ್ನು ಬದಲಿಸಲು ಕ್ಷೇತ್ರದ ಮತದಾರರು ತೀರ್ಮಾನಿಸಿದ್ದಾರೆ ಅವರ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ ಹೆಚ್.ಡಿ ತಮ್ಮಯ್ಯ ಬಿಜೆಪಿಯಲ್ಲಿದ್ದಾಗ ಶಾಸಕರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮೊದಲ ವ್ಯಕ್ತಿ ನಾನೇ ಆದರೆ ಹೊರಗೆ ಬಂದಾಗ ಮಾತನಾಡುವುದನ್ನು ಬಿಡಿ ಎಂದು ಅಲ್ಲಿನ ಮುಖಂಡರಿಗೆ ಹೇಳುತ್ತಿದ್ದೆ ಎಂದರು.
ಈ ಜಗತ್ತಿನಲ್ಲಿ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಈ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್.ಪಿ.ಸುರೇಶ್, ಜಗಧೀಶ್ ಹೆಚ್.ಎನ್, ರಾಮಚಂದ್ರ, ಉಮೇಶ್, ಲೋಕೇಶ್, ಸಿದ್ದೇಗೌಡ, ಸುರೇಶ್, ವೆಂಕಟೇಶ್, ಚಂದ್ರಪ್ಪ, ಕಲ್ಲೇಶ್, ರಾಜು, ಮೋಹನ್, ಗಂಗಾಧರ್, ಹಿರೇಮಗಳೂರು ಮತ್ತು ಲಕ್ಷಿö್ಮÃಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!