May 5, 2024

MALNAD TV

HEART OF COFFEE CITY

ಪಕ್ಷಾಂತರ ಮಾಡುವುದು ತಾಯಿಗೆ ದ್ರೋಹ ಮಾಡಿದಂತೆ,ಕೆ.ಎಸ್.ಈಶ್ವರಪ್ಪ

1 min read

ಪಕ್ಷಾಂತರ ಮಾಡುವುದು ತಾಯಿಗೆ ದ್ರೋಹ ಮಾಡಿದಂತೆ, ಅಂತಹವರಿಗೆ ಸರಿಯಾದ ಸೋಲಿನ ಪಾಠ ಕಲಿಸುವ ಪ್ರತಿಜ್ಞೆ ಮಾಡಬೇಕು- ಕೆ.ಎಸ್.ಈಶ್ವರಪ್ಪಚಿಕ್ಕಮಗಳೂರು-ಪಕ್ಷಾಂತರ ಮಾಡುವುದು ತಾಯಿಗೆ ದ್ರೋಹ ಮಾಡಿದಂತೆ, ಅಂತಹವರಿಗೆ ಸರಿಯಾದ ಸೋಲಿನ ಪಾಠ ಕಲಿಸುವ ಪ್ರತಿಜ್ಞೆ ಮಾಡಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.ಅವರು  ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ನಾವು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಉದ್ಧಾರಕರು ಎಂದು ಸ್ವಾತಂತ್ರö್ಯ ಬಂದಾಗಿನಿAದಲೂ ಕಾಂಗ್ರೆಸಿಗರು ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವ ಹಿಂದುಳಿದ, ದಲಿತರು ಉದ್ಧಾರ ಆಗಲಿಲ್ಲ ಎಂದರು.
ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿ ಮನೆಗೂ ನಲ್ಲಿ ನೀರು ಕೊಡುವ ವ್ಯವಸ್ಥೆ ಮಾಡುತ್ತಿದೆ. ನರೇಂದ್ರ ಮೋದಿ ಅವರು ಪ್ರತಿ ವಿಧಾನ ಸಭೆಗೆ ಮನೆಗಳನ್ನು ನಿರ್ಮಿಸುವ ಪ್ರಯತ್ನದಲ್ಲೂ ಯಶಸ್ವಿಯಾಗುತ್ತಿದ್ದಾರೆ. ಹಿಂದುಳಿದವರಿಗೆ ದಲಿತರಿಗೆ ಬಿಜೆಪಿ ಏನೇನು ಮಾಡಿದೆ ಎನ್ನುವುದನ್ನು ಕಾರ್ಯಕರ್ತರು ತಿಳಿದುಕೊಂಡು ಜನರಿಗೆ ತಲುಪಿಸಬೇಕು. ಒಂದೊAದು ಹಿಂದುಳಿದ ವರ್ಗ ಜಾಗೃತಿಯಾದರೆ ಇಡೀ ಹಿಂದೂ ಸಮಾಜ ಜಾಗೃತಿ ಆದಂತೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವಾರು ಸುಳ್ಳುಗಳನ್ನು ನಾವು ಎದುರಿಸಬೇಕಿದೆ. ಜಾತಿಮೇಲೆ ಸುಳ್ಳು ಹೇಳಿದರು. ಆ ಪ್ರಕರಣದಲ್ಲೂ ಆರೋಪಿ ಬಂಧನವಾಗಿದೆ. ಚುನಾವಣೆ ಎದುರಿಸಲು ಕಾಂಗ್ರೆಸಿಗರಿಗೆ ಯಾವುದೇ ವಿಚಾರಗಳಿಲ್ಲದ ಕಾರಣ ಸುಳ್ಳಿನ ಅಡ್ಡದಾರಿ ಹಿಡಿದಿದೆ ಎಂದು ದೂರಿದರು.

ನಾವು ಅಡ್ಡದಾರಿ ಹಿಡಿಯುವುದಿಲ್ಲ. ನಮ್ಮ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುತ್ತೇವೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರೊಂದಿಗಿದ್ದು, ಪಕ್ಷವನ್ನೂ ಕಟ್ಟುತ್ತಿರುವ ಸಿ.ಟಿ.ರವಿ ಜಾತ್ಯತೀತ ನಾಯಕರಾಗಿದ್ದಾರೆ ಎಂದರು.
ಜೆಡಿಎಸ್‌ನಲ್ಲಿ ಬೇಳೆ ಬೇಯಿಸಿಕೊಳ್ಳಲು ಆಗುವುದಿಲ್ಲ ಎಂದು ಗೊತ್ತಾದ ಕೂಡಲೇ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳಿರುವ ಜೆಡಿಎಸ್ ಎಂಎಲ್ಸಿ ಎಸ್.ಎಲ್.ಬೋಜೇಗೌಡರಿಗೆ ನಾಚಿಕೆಯಾಗಬೇಕು ಎಂದು ಕಲ್ಮರುಡಪ್ಪ ಹೇಳಿದರು.
ಜೆಡಿಎಸ್‌ನಿಂದ ಎಲ್ಲವನ್ನೂ ಪಡೆದಿದ್ದೀರಿ, ಪಕ್ಷ ಇಲ್ಲವಾಗಿದ್ದರೆ ನಿಮ್ಮನ್ನು ನಾಯಿ ಸಹ ಮೂಸುತ್ತಿರಲಿಲ್ಲ. ನಿಮ್ಮ ಪಕ್ಷದವರ ವಿರುದ್ಧವೇ ಮಾತನಾಡುತ್ತಾ ಸಿ.ಟಿ.ರವಿ ಅವರನ್ನು ಸೋಲಿಸಲು ಹೊರಟಿದ್ದೀರಿ. ನಿಮ್ಮ ಕೈನಲ್ಲಿ ಆ ತಾಕತ್ತು ಇಲ್ಲ. ಚಿಕ್ಕಮಗಳೂರಿನ ಜನ ಅಭಿವೃದ್ಧಿ, ಒಳ್ಳೆತನವನ್ನು ಬಯಸುತ್ತಾರೆ. ಹಿಂದೆAದಿಗಿAತಲೂ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ ಎದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ ರಾಜ್ ಅರಸ್ ಮಾತನಾಡಿದರು. ಗ್ರಾಮಾಂತರ ಮಂಡಲದ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಮುಖಂಡರುಗಳಾದ ಕೋಟೆ ರಂಗನಾಥ್, ಪುಷ್ವರಾಜ್, ಬೆಳವಾಡಿ ರವೀಂದ್ರ, ದೇವರಾಜ್ ಶೆಟ್ಟಿ, ವರಸಿದ್ಧಿ ವೇಣುಗೋಪಾಲ್, ರಾಜಪ್ಪ, ನಿರಂಜನ್, ಪುಟ್ಟೇಗೌಡ ಇತರೆ ಮುಖಂಡರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!