May 5, 2024

MALNAD TV

HEART OF COFFEE CITY

ಇದೆಂಥಾ ಪವಾಡ, ಪೂಜೆ ವೇಳೆ ಅಲಗುವ 16 ಅಡಿಯ ಹುತ್ತ!

1 min read

ಚಿಕ್ಕಮಗಳೂರು: ವೈಜ್ಞಾನಿಕ ಲೋಕಕ್ಕೆ ಸವಾಲು ಎನಿಸುವಂತೆ ಉಣ್ಣಕ್ಕಿ ಜಾತ್ರೆಯ ಪೂಜೆಯಲ್ಲಿ 16 ಅಡಿ ಉದ್ದದ ಹುತ್ತ ನಡುಗಿ ವಿಸ್ಮಯ ಮೂಡಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಬಾನಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಕಳೆದ ರಾತ್ರಿ ಹುಣ್ಣಿಮೆಯ ದಿನದಂದು ನಡೆಯುವ ಉಣ್ಣಕ್ಕಿ ಜಾತ್ರೆಯ ಪೂಜೆ ವೇಳೆ ನಡುಗುವ 16 ಅಡಿ ಉದ್ದದ ಹುತ್ತವುನ್ನು ನೋಡಲು ಭಕ್ತಸಾಗರವೇ ಹರಿದುಬಂದಿರುತ್ತದೆ. ಹಲವು ವರ್ಷಗಳಿಂದ ಪೊಜೆಯ ವೇಳೆ ಕ್ಷಣಾರ್ಧದಲ್ಲಿ ಅಲುಗಾಡುವ ಹುತ್ತ ಇಂದಿಗೂ ಒಂದು ವಿಸ್ಮಯವನ್ನು ಮೂಡಿಸುತ್ತದೆ. ಮಹಾ ಮಂಗಳಾರತಿ ಆಗುತ್ತಿದ್ದಂತೆ ಕೆಲವೇ ಸೆಕೆಂಡ್ ಹುತ್ತ ಗಢ…ಗಢ… ಈ ವಿಸ್ಮಯವನ್ನು ಕಣ್ತುಂಬಿಕೊಂಡ ಮಲೆನಾಡಿನ ಭಕ್ತರು.

ನೈಸರ್ಗಿಕವಾಗಿ ಮಣ್ಣಿನಿಂದಲೇ ನಿರ್ಮಾಣವಾಗಿರುವ 10 ಅಡಿ ಉದ್ದದ ಹುತ್ತ ಇದು ಹುಣ್ಣಿಮೆಯ ದಿನದಂದು ನಡೆಯುವ ಈ ಅಚ್ಚರಿಯನ್ನು ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರು ಹುತ್ತಕ್ಕೆ ಮಂಡಕ್ಕಿ ಎರಚಿ ಹರಕೆ ತೀರಿಸಿದರು. ಅಷ್ಟೇ ಅಲ್ಲದೆ ಈ ಹುತ್ತದ ಮಣ್ಣು ಹಲವು ಕಾಯಿಲೆಗಳಿಗೆ ರಾಮಬಾಣ ಅನ್ನೋದು ಇಲ್ಲಿಗೆ ಆಗಮಿಸುವ ಭಕ್ತರ ನಂಬಿಕೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!