May 17, 2024

MALNAD TV

HEART OF COFFEE CITY

ಕಾಡೂಗೊಲ್ಲರ ಸಂಘಟಿತ ಹೋರಾಟ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.- ಸಿ.ಟಿ.ರವಿ

1 min read

ಚಿಕ್ಕಮಗಳೂರು-ಕಾಡುಗೊಲ್ಲರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಈ ಸಂಬoಧ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು.ಕರ್ನಾಟಕ ರಾಜ್ಯ ಕಾಡೂಗೊಲ್ಲರ ಸಂಘ ಹಾಗೂ ಜಿಲ್ಲಾ ಸಂಘದ ಆಶ್ರಯದಲ್ಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘಟಿತ ಹೋರಾಟ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ವಿಚಾರದಲ್ಲಿ ಕಾಡುಗೊಲ್ಲರ ಸಮಾಜದೊಂದಿಗೆ ತನು, ಮನ, ಧನ ಎಲ್ಲ ರೀತಿಯಲ್ಲೂ ನಿಂತುಕೊಳ್ಳುತ್ತೇವೆ. ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ ವರೆಗೆ ಕಾಯ, ವಾಚಾ ಮನಸಾ ನಿಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಗುರಿ ಮುಟ್ಟಿಸುವವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಇದು ಹೇಳಿದಷ್ಟು ಸುಲಭದಲ್ಲ. ಹಾಗೆಯೇ ಅಸಾಧ್ಯವಾದದ್ದೂ ಅಲ್ಲ. ನಾವು ಸಂಘಟಿತ ಹೋರಾಟವನ್ನು ನಿರಂತರವಾಗಿ ಮಾಡಿದರೆ ಮಾತ್ರ ಕಲ್ಲೂ ಸಹ ಕರಗುತ್ತದೆ. ವಿಧಾನ ಸಭೆಯ ಒಳಗೂ ಹೊರಗೂ ಹೋರಾಟಕ್ಕೆ ಧ್ವನಿಯಾಗುತ್ತೇವೆ ಎಂದರು.

ನಮ್ಮನ್ನು ನೀವು ನಮ್ಮವರೆಂದು ಭಾವಿಸಿದ ಮೇಲೆ, ನಿಮ್ಮನ್ನು ನಾನು ನಮ್ಮವರು ಎಂದು ಭಾವಿಸಿದ ಮೇಲೆ ನಾವೆಲ್ಲರೂ ಒಂದೇ, ದೇಹ ಎರಡಿರಬಹುದು, ಜೀವ ಒಂದೆ ಎನ್ನುವಂತೆ ನಿಮ್ಮೊಂದಿಗೆ ನಿಂತು ಹೋರಾಟಕ್ಕೆ ಬಲ ಕೊಡುತ್ತೇವೆ ಎಂದರು.
ಈ ಸಮುದಾಯವು ರಾಜಕೀಯ, ಶೈಕ್ಷಣಿಕ, ಸಮಾಜಿಕ ಹಾಗೂ ಆರ್ಥಿವಾಗಿ ಅತ್ಯಂತ ಹಿಂದುಳಿದಿದೆ. ಈ ಸಮುದಾಯಕ್ಕೆ ಬಲ ಕೊಡುವುದು ನಮ್ಮ ಕರ್ತವ್ಯ ಎಂದರು.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಚಿಕ್ಕಮಗಳೂರು ಪಂಚ ಪಾಂಡವರ ಜಿಲ್ಲೆ. ಇಲ್ಲಿ ಶಾಸಕ ಸಿ.ಟಿ.ರವಿ ಅವರು ಅರ್ಜುನ ಇದ್ದಂತೆ ಅವರೊಂದಿಗೆ ನಾನು ಭೀಮನಂತೆ ನಿಂತು ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದರು.
ಸದನವೇ ನಮ್ಮ ಯುದ್ಧಭೂಮಿ ಅಲ್ಲಿ ಕಾಡುಗೊಲ್ಲರ ಸಮಾಜದ ಬೇಡಿಕೆಗೆ ಧ್ವನಿಗೂಡಿಸುವ ಮೂಲಕ ಎಲ್ಲ ರೀತಿ ಬೆಂಬಲ ನೀಡುತ್ತೇವೆ. ನಮ್ಮ ಕ್ಷೇತ್ರದ ಗೆದ್ಲೆಹಳ್ಳಿ ಗೊಲ್ಲರಟ್ಟಿ ರಸ್ತೆ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಮುಂಬರುವ ಚುನಾವಣೆಗೆ ಮತ ಕೇಳುವ ಮುನ್ನ ಆ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಚಿಕ್ಕಮಗಳೂರು ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಡಿ.ಪ್ರಭುದೇವ್ ಮಾತನಾಡಿ, ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಯಾವುದೇ ಅನುಕೂಲಗಳಿಲ್ಲ. ಉನ್ನತ ವರ್ಗಗಳ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ, ಖಾರ, ಮುದ್ದೆ ತಿಂದುಕೊಡು ಕುರಿ, ದನಗಳನ್ನು ಕಾಯುತ್ತಿದ್ದೇವೆ. ನಮ್ಮ ಕುರಿಗಳು ಕೊನೆಗೆ ನಮಗೂ ಸಹ ಯಾವುದೇ ಭದ್ರತೆ ಇಲ್ಲ. ಕುರಿಯೊಂದಗೆ ಕುರಿ ಮಂದೆಯೊAದಿಗೆ ಸುತ್ತುತ್ತಾ ಜೀವನ ಸಾಗಿಸಬೇಕಿದೆ. ವ್ಯವಸ್ಥಿತವಾಗಿ ನಮ್ಮನ್ನು ತುಳಿಯಲಾಗಿದೆ. ಉಮಾಪತಿ ಅವರನ್ನು ಹೊರತುಪಡಿಸಿ ಯಾರೊಬ್ಬರೂ ನಮ್ಮ ಜನಾಂಗದಿದ ಶಾಸಕರಾಗಿಲ್ಲ. ಈ ಕಾರಣಕ್ಕೆ ನಮ್ಮ ಜನಾಂಗವನ್ನು ಎಸ್‌ಟಿಗೆ ಸೇರ್ಪಡಿಸಬೇಕು ಎಂದು ಒತ್ತಾಯಿಸುತ್ತಿದೇವೆ ಎಂದರು.

ಸ್ವಾತತ್ರö್ಯ ಬಂದು ೭೫ ವರ್ಷ ಕಳೆದರೂ ಯಾರೋಬ್ಬರೂ ನಮ್ಮ ಸಮಸ್ಯೆ ಆಲಿಸಲಿಲ್ಲ. ಆದರೆ ಶಾಸಕ ಸಿ.ಟಿ.ರವಿ ಅವರನ್ನು ಕಾಣಲು ಹೋದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಪೊಲೀಸ್ ಇಲಾಖೆಯ ಎಸಿಪಿ ಬೆಂಗಳೂರಿನ ಬಸವರಾಜು, ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ರಾಜ್ಯ ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ದೇವರಾಜು, ಜಿಲ್ಲಾಧ್ಯಕ್ಷ ಈರಪ್ಪ, ತಿಪಟೂರಿನ ಮಾಜಿ ಅದ್ಯಕ್ಷ ಶಂಕರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ತಮ್ಮಣ್ಣ, ಬೆಂಗಳೂರು ನಗರಾಧ್ಯಕ್ಷ ರಾಮಣ್ಣ, ದಾವಣಗೆರೆ ಜಿಲ್ಲಾಧ್ಯಕ್ಷ ಸುಂಕಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಸಣ್ಣ ಬಾಲಪ್ಪ, ಶಿವಮೊಗ್ಗದ ಅಧ್ಯಕ್ಷ ರವಿಕುಮಾರ್, ಚಿಕ್ಕಮಗಳೂರು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ನಾಗರಾಜು, ಚಿಕ್ಕನಾಯಕನಹಳ್ಳಿ ಮುಖಂಡ ಬಸವರಾಜು, ತೆಂಗು ಮತ್ತು ನಾರು ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ರಾಮಣ್ಣ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಕಾಡುಗೊಲ್ಲರ ಸ್ಥಳೀಯ ಮುಖಂಡ ನೀಲೆನಹಳ್ಳಿ ಜಗನಾಥ್, ದಾಸಪ್ಪ, ಪಾದಮನೆ ದಿನೇಶ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!