May 4, 2024

MALNAD TV

HEART OF COFFEE CITY

ಸಾಗುವಾನಿ ಮರ ಕಡಿತಲೆ; ಇಬ್ಬರ ಬಂಧನ

1 min read

ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ವ್ಯಾಪ್ತಿಯ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ನಾಲ್ಕು ಸಾಗುವಾನಿ ಮರ ಕಡಿದು ನಾಟಾ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ದೇವದಾನ ಎಸ್ಟೇಟ್‍ನ ಇಲಿಯಾಸ್ ಹಾಗೂ ರಿನೋ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ದೇವದಾನ ಮೀಸಲು ಅರಣ್ಯದ ಸರ್ವೆ ನಂಬರ್ 343ರಲ್ಲಿ ನಾಲ್ಕು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, 31 ಸೈಜ್ ನಾಟಾವನ್ನು ತಯಾರಿಸಿ, 14 ರೌಂಡ್ ಲಾಗ್‍ಗಳನ್ನು ಮಾಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವುದು ಕಂಡುಬಂದಿದ್ದು, ಇದರ ಜಾಡು ಹಿಡಿದು ಹೋದಾಗ ಸ್ಥಳೀಯ ಎಸ್ಟೇಟ್‍ನಲ್ಲಿ ಸೂಪರ್‍ವೈಸರ್, ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲಿಯಾಸ್, ರಿನೋ ಅವರು ಮರವನ್ನು ಕಡಿತಲೆ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿಗಳು ಕಡಿತಲೆ ಮಾಡಿರುವ ಮರದಲ್ಲಿ ತಯಾರಿಸಿದ್ದ 31 ಸೈಜ್ ನಾಟಾವನ್ನು ತಮ್ಮ ಮನೆಯಲ್ಲಿ ಉಳಿದ ರೌಂಡ್ ಲಾಗ್‍ಗಳನ್ನು ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಆರೋಪಿಗಳಿಂದ 2.381 ಕ್ಯೂಬಿಕ್ ಮೀಟರ್ ಸಾಗುವಾನಿ ಮರದ ನಾಟಾ, ತುಂಡುಗಳನ್ನು ಹಾಗೂ ಮರ ಕೊಯ್ಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆಯಲಾಗಿದ್ದು, ಕಡಿತಲೆ ಮಾಡಿರುವ ಸಾಗುವಾನಿ ಮರಗಳ ಮೌಲ್ಯ ರೂ. 4 ಲಕ್ಷಕ್ಕೂ ಅಧಿಕವಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಆರ್‍ಎಫ್‍ಓ ಎಂ. ಸಂದೀಪ್ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!