May 3, 2024

MALNAD TV

HEART OF COFFEE CITY

ಶಿಕ್ಷಕರ ಪರಿಶ್ರಮದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಸರ್ಕಾರಿ ಶಾಲೆ

1 min read

ಚಿಕ್ಕಮಗಳೂರು : ಆಧುನಿಕತೆಯ ನಾಗಲೋಟಕ್ಕೆ ಸಿಕ್ಕಿರುವ ಪೋಷಕರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ನೆಪದಲ್ಲಿ ಖಾಸಗಿ ಶಾಲೆಗಳ ಮುಂದೆ ಮಂಡಿಯೂರಿ ಕುಳಿತಿದ್ದಾರೆ. ಶಾಲೆ ಆರಂಭವಾಯಿತೆಂದರೆ ಸಾಕು ಖಾಸಗಿ ಶಾಲೆಗಳ ಮೋಹ ಪಾಶಕ್ಕೆ ಸಿಲುಕಿದ ಪೋಷಕರು ಖಾಸಗಿ ಶಾಲೆಗಳ ಬಾಗಿಲ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಇದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಆಸೆಯೋ…! ಅಥವಾ ತಮ್ಮ ಸುತ್ತಮುತ್ತಲಿನವರ ಮುಂದೆ ತಮ್ಮ ಘನತೆ ಹೆಚ್ಚೆಂದು ತೋರಿಸಿಕೊಳ್ಳಲೊ…! ಇಲ್ಲವೆ ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸಾರವೊ ಗೊತ್ತಿಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮ ಪಾಠ ಮಾಡುವುದಿಲ್ಲ, ವಿದ್ಯಾಭ್ಯಾಸದ ಗುಣ ಮಟ್ಟ ಸರಿಯಿಲ್ಲ ಎಂಬ ಅಪವಾದ ಬೇರೆ. ಆದರೆ ಇಂದಿನ ಕಾಲದಲ್ಲಿ ಖಾಸಗಿ ಶಾಲೆಗಳನ್ನು ಹಿಂದಿಕ್ಕಿ ಸರ್ಕಾರಿ ಶಾಲೆಯಲ್ಲೂ ಉತ್ತಮ ಶಿಕ್ಷಣ ನೀಡುವ ವಾತಾವರಣ ಆರಂಭವಾಗಿದೆ. ನಗರಕ್ಕೆ ಸೀಮಿತವಾಗಿದ್ದ ಖಾಸಗಿ ಶಾಲೆಗಳು ಇಂದು ಹಳ್ಳಿ ಹಳ್ಳಿಯಲ್ಲು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಗ್ರಾಮೀಣ ಭಾಗದ ಜನರು ಸಹ ಈ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗಿ ಉಳ್ಳವನಾಗಲಿ ಅಥವಾ ಕೂಲಿ ಮಾಡುವವನಾಗಲಿ ಖಾಸಗಿ ಶಾಲೆಗಳಿಗೆ ದುಂಬಲು ಬಿದ್ದು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದರೆ ಇಲ್ಲೊಂದು ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಇದಕ್ಕೆಲ್ಲ ಅಪವಾದವಾಗಿ ಬೆಳೆಯುತ್ತಿದೆ. ಖಾಸಗಿ ಶಾಲೆಗಳನ್ನು ನಾಚಿಸುವಂತೆ ಉತ್ತಮ ಶಿಕ್ಷಕರ ತಂಡದೊಂದಿಗೆ, ಅಧಿಕಾರಿಗಳ ಉತ್ತಮ ಸಲಹೆಯೊಂದಿಗೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾದ ವಾತಾವರಣದೊಂದಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಆ ಮೂಲಕ ಇಂದು ರಾಷ್ಟç ಮಟ್ಟಕ್ಕೆ  ಆಯ್ಕೆಯಾಗುವ ಮೂಲಕ ಗಮನ ಸೆಳೆದಿದೆ. ಯಾವುದು ಆ ಹೆಮ್ಮೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆ…! ಅಲ್ಲಿನ ಶಿಕ್ಷಕರು ಮಾಡಿದ್ದಾದರೂ ಏನು…! ಅನ್ನೋ ಕುತೂಹಲ ನಿಮ್ಮಲಿದೆಯೇ ಹಾಗಾದರೆ ಈ ಸ್ಟೋರಿ ನೋಡಿ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

https://drive.google.com/file/d/1NAncco3HJMY9rgMxE4KXBh69G-O67_A_/view?usp=sharing

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!