May 3, 2024

MALNAD TV

HEART OF COFFEE CITY

ಖಾಸಗಿ ಮೊಬೈಲ್ ಕಂಪನಿಯಿಂದ ರಸ್ತೆ ಹಾಳಾಗಿರುವ ಆರೋಪ

1 min read

ಚಿಕ್ಕಮಗಳೂರು : ಖಾಸಗಿ ಮೊಬೈಲ್ ನೆಟ್‌ವರ್ಕ್ ಸಿಗುತ್ತೆ ಎಂಬ ಆಸೆಗೆ ಕೇಬಲ್ ಹಾಕಲು ಅವಕಾಶ ಮಾಡಿಕೊಟ್ಟ ಗ್ರಾಮಸ್ತರು ಇಂದು ನೆಟ್‌ವರ್ಕ್ ಸಿಗದೆ, ಅತ್ತ ರಸ್ತೆಯು ಹಾಳಾಗಿ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಿದರೆ ಗ್ರಾಮ ಪಂಚಾಯಿತಿ ಉಜಿನಿ ಗ್ರಾಮದಲ್ಲಿ ಬಿ,ಎಸ್.ಎನ್.ಎಲ್ ನೆಟ್‌ವರ್ಕ್ ಸರಿಯಾಗಿ ಸಿಗದ ಕಾರಣ ಆನ್‌ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಜಿಯೊ ಕಂಪನಿ ಹಳ್ಳಿಗೆ ನೆಟ್‌ವರ್ಕ್ ನೀಡುತ್ತೇವೆ ಎಂಬ ಆಸೆ ತೋರಿಸಿ ರಸ್ತೆ ಬದಿ ಕೇಬಲ್ ಅಳವಡಿಸಿದ್ದಾರೆ. ಕೇಬಲ್ ಅಳವಡಿಸಲು ರಸ್ತೆ ಬದಿ ತೋಡಿದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಮಳೆಗಾಲದಲ್ಲಿ ಡಾಂಬರು ಕೊಚ್ಚಿ ಹೋಗಿ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಅತ್ತ ಆಸೆ ಪಟ್ಟ ಜಿಯೋ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗದೆ, ಇತ್ತ ಉತ್ತಮವಾಗಿದ್ದ ರಸ್ತೆಯು ಹಾಳಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!