May 18, 2024

MALNAD TV

HEART OF COFFEE CITY

ನಗರ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ರಾಮೇಗೌಡ ಆಯ್ಕೆ

1 min read

ಚಿಕ್ಕಮಗಳೂರು-ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಎಸ್.ರವಿಕುಮಾರ್ ಆಯ್ಕೆಯಾದರು.
ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಮೇಗೌಡ ಮತ್ತು ಜಯಪ್ರಕಾಶ್ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಒಟ್ಟು 1008 ಮತದಾರರಿದ್ದು, ಈ ಪೈಕಿ ಚುನಾವಣೆ ಮತದಾನದಲ್ಲಿ ಜಯಪ್ರಕಾಶ್ 309 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ರಾಮೇಗೌಡ ಅವರು 601 ಮತಗಳನ್ನು ಪಡೆಯುವ ಮೂಲಕ ಒಟ್ಟು 209 ಮತಗಳ ಅಂತರದಲ್ಲಿ ಗೆಲುವು ಪಡೆದು ಸಂಘದ ಆಧ್ಯಕ್ಷರಾಗಿ ಆಯ್ಕೆಗೊಂಡರು.

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ನಿಸಾರ್ ಎಂಬುವವರು 338 ಮತಗಳನ್ನು ಪಡೆದರೆ, ಎಸ್.ರವಿಕುಮಾರ್ ಪ್ರಬಲ ಪೈಪೋಟಿ ನೀಡುವ ಮೂಲಕ 406 ಮತಗಳನ್ನು ಗಳಿಸಿದರು, ಇನ್ನು ವಿಜಯ್‍ಕುಮಾರ್ 237 ಮತಗಳನ್ನು ಪಡೆಯಲಷ್ಟೇ ಶಕ್ತರಾದರೂ, ಈ ಮೂಲಕ ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆದ ಎಸ್.ವಿಜಯ್‍ಕುಮಾರ್ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಅನಿಲ್‍ಕುಮಾರ್ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಚಿಕ್ಕಮಗಳೂರು ನಗರದಲ್ಲಿ ಬಹುತೇಕ ಆಟೋ ಚಾಲಕರು ಬಡತನದಿಂದ ಜೀವನ ಸಾಗಿಸುತ್ತಿದ್ದು ಕಡುಬಡವರಿಗೆ ಸಿಡಿಎ ಪ್ರಾಧಿಕಾರದಿಂದ ನೀಡಲಾಗುವ ನಿವೇಶನದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಸಂದರ್ಭದಲ್ಲಿ ಸರ್ಕಾರ ಆಟೋ ಚಾಲಕರನ್ನು ಗುರ್ತಿಸಿ ಆರ್ಥಿಕ ನೆರವು ನೀಡಿದೆ. ಇಂದಿನ ಸರ್ಕಾರವು ಆಟೋ ಚಾಲಕರ ಒಳಿತಿಗಾಗಿ ಯೋಜನೆ ರೂಪಿಸಿದೆ ಎಂದ ಅವರು ಸಾರಿಗೆ ಇಲಾಖೆಯಲ್ಲಿ ಆನ್‍ಲೈನ್ ಸೇವೆ ಆರಂಭಗೊಂಡಿದ್ದು ಬಹತೇಕ ಚಾಲಕರಿಗೆ ಸೌಲಭ್ಯಗಳ ಮಾಹಿತಿ ಕೊರತೆಯಿಂದಾಗಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನೂತನ ಪದಾಧಿಕಾರಿಗಳ ಸಭೆಯಲ್ಲಿ ಅಂತವರಿಗೆ ಹೊಸದಾಗಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!